ಸ್ಥಳೀಯ ಸುದ್ದಿಗಳು

ಮಸರಹಳ್ಳಿ-ಭದ್ರಾವತಿ ರೈಲ್ವೆ ಲೆವೆಲ್ ಕ್ರಾಸಿಂಗ್ ತಾಂತ್ರಿಕ ಪರಿಶೀಲನೆ; ತಾತ್ಕಾಲಿಕ ಪರ್ಯಾಯ ಮಾರ್ಗ

ಸುದ್ದಿಲೈವ್/ಭದ್ರಾವತಿ

ಮಸರಹಳ್ಳಿ-ಭದ್ರಾವತಿ ರೈಲ್ವೆ ಸ್ಟೇಷನ್ ನಡುವೆ ಬರುವ ರೈಲ್ವೆ ಲೆವಲ್ ಕ್ರಾಸಿಂಗ್ ಗೇಟ್ ನಂ:29 ಕಿ.ಮಿ :41/200-300 ರಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದಕ್ಕಾಗಿ ದಿನಾಂಕ:30.9.2023 ರಿಂದ ದಿನಾಂಕ:02.10.2023 ರವರೆಗೆ ಗೇಟ್ ಮುಚ್ಚಲಾಗುತ್ತಿದೆ.

ಗೇಟ್ ಮುಚ್ಚುತ್ತಿರುವ ಹಿನ್ಬಲೆಯಲ್ಲಿ  ಪರ್ಯಾಯ ಮಾರ್ಗ ಕಲ್ಪಿಸಲಾಗುತ್ತಿದೆ.  ರೈಲ್ವೇ ಲೆವೆಲ್ ಕ್ರಾಸಿಂಗ್ ನಂ.30 ಕಿ.ಮೀ. 42/100-200ರ ಮೂಲಕ ವಾಹನ ಸಂಚರಿಸಲು ಕಲ್ಪಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಸೆ.30 ರಿಂದ ಅ. 02ರವರೆಗೆ ಭದ್ರಾವತಿಯಿಂದ ಮಸರಹಳಿಗೆ ಹೋಗುವ ವಾಹನಗಳು ಶಿವನಿ ಕ್ರಾಸ್ –ಅಂತರಗಂಗೆ-ಮಸರಹಳ್ಳಿಗೆ ಅಥವಾ ಬಾರಂದೂರು-ಹಳ್ಳಿಕೆರೆ-ಮಸರಹಳ್ಳಿ ಮೂಲಕ ರೈಲ್ವೆ ಲೆವಲ್ ಕ್ರಾಸ್ ಗೇಟ್ ನಂ: 42/100-200 ರ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದಾಗಿರುತ್ತದೆ.

ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ರೈಲ್ವೆ ಲೆವಲ್ ಕ್ರಾಸಿಂಗ್ ಗೇಟ್‍ಗಳ ತಾಂತ್ರಿಕ ಪರಿಶೀಲನೆ ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ ತಾತ್ಕಾಲಿಕವಾಗಿ ಈ ಮೇಲ್ಕಂಡ ದಿನಾಂಕಗಳಲ್ಲಿ ಮಾತ್ರ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಆದೇಶಿಸಿದೆ.

ಇದನ್ನೂ ಓದಿ-https://suddilive.in/2023/09/30/262/

Related Articles

Leave a Reply

Your email address will not be published. Required fields are marked *

Back to top button