ರಾಗಿಗುಡ್ಡಕ್ಕೆ ಪುತ್ತಿಲ ಭೇಟಿ

ಸುದ್ದಿಲೈವ್/ಶಿವಮೊಗ್ಗ

ಗಲಭೆಗೆ ಕಾರಣವಾಗಿದ್ದ ರಾಗಿಗುಡ್ಡ ಶಾಂತಸ್ಥಿತಿಗೆ ಮರಳಿದೆ. ರಾಗಿಗುಟ್ಡದಲ್ಲಿ ನಿಧಾನವಾಗಿ ಜನರ ಓಡಾಟದ ದೃಶ್ಯ ಕಂಡುಬಂದಿದೆ. ಇಂದು ಅರುಣ್ ಕುಮಾರ್ ಪುತ್ತಿಲ ರಾಗಿಗುಡ್ಡಕ್ಜೆ ಭೇಟಿ ನೀಡಿದ್ದಾರೆ.
ರಾಗಿಗುಡ್ಡದಲ್ಲಿ ಭಾನುವಾರ ಸಂಜೆ ಉಂಟಾದ ಗಲಭೆಯ ವೇಳೆ ಬುಗಿಲೆದ್ದ ಗಲಭೆ ಹಿನ್ಬಲೆಯಲ್ಲಿ ಐದು ದಿನ ರಾಗಿಗುಡ್ಡದಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಗುತ್ತಿತದತು. ಆದರೆ ಇಂದು ಬಹುತೇಕ ರಿಲ್ಯಾಕ್ಸ್ ಆಗಿದೆ ರಸ್ತೆಗಳ ಮೇಲೆ ಜನರ ಓಡಾಟ ಆರಂಭವಾಗಿದೆ.
ಇದೇ ವೇಳೆ ಪುತ್ತೂರಿನ 2023 ರ ವಿಧಾನ ಸಭೆ ಪರಾಜಿತ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ್ಲ ರಾಗಿಗುಡ್ಡದ , 8 ನೇ ತಿರುವಿನಲ್ಲಿ ಕಲ್ಲುತೂರಾಟದಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿದ್ದಾರೆ. ಆದರೆ ನಿನ್ನೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ ನೀಡಿದ ವೇಳೆ ಮೇಸ್ಟ್ರು ಪ್ರಸನ್ನ ಕುಮಾರ್, ಚಂದ್ರವನದ ಶಿಕ್ಷಕಿ ಸುಶೀಲಾರವರು ಮನೆಯಲ್ಲಿ ಗೈರು ಇದ್ದರು.
ರೋಹನ್ ರಾವ್, ಅನಿತಾರವರ ಮನೆಗೆ ಹೋಗಿ ಪರಿಶೀಲನೆ ನಡೆಸಿದರು. ಗಣಪತಿ ಹಬ್ಬ ಚೆನ್ನಾಗಿ ಆಗಿರುವುದು ಕಣ್ಣಿಗೆ ಬಿದ್ದಿದೆ. ನಾವು ಒಂದೇ ಅಪದಪನಿಗೆ ಹುಟ್ಟಿರೋದು ನೀವು ಒಂದೇ ಅಪ್ಪನಿಗೆ ಹುಟ್ಟಿದರೆ ಬಿನ್ನಿ ಎಂದು ಹೇಳ್ತಾರೆ ಸಾರ್ ಎಂದು ಪುತ್ತಿಲಾರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ-https://suddilive.in/archives/643
