ಸ್ಥಳೀಯ ಸುದ್ದಿಗಳು

ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ಅ.15 ರಿಂದ 29ರ ವರೆಗೆ ಶರನ್ನವರಾತ್ರಿ ಕಾರ್ಯಕ್ರಮಗಳು

ಸುದ್ದಿಲೈವ್/ಶಿವಮೊಗ್ಗ

ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಅಭಿವೃದ್ಧಿ ದತ್ತಿ ವತಿಯಿಂದ ದೇವಳದ ಆವರಣ ದಲ್ಲಿ ಅ.15ರಿಂದ ಅ.29ರವರೆಗೆ ಶ್ರೀ ಶರವನ್ನರಾತ್ರಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಸ್.ಪಿ. ಶೇಷಾದ್ರಿ ಸುದ್ದಿಗೋಷ್ಟಿಯಲ್ಲಿ ಹೇಳಿದರು.

ಈ ಬಾರಿಯ ವಿಶೇಷ ಎಂದರೆ ಶ್ರೀ ಧನಲಕ್ಷ್ಮಿ ದೇವಿಯ ಅಲಂಕಾರವಾಗಿದೆ. ನವರಾತ್ರಿ ಅತ್ಯಂತ ಸಂಭ್ರಮ ಸಡಗರದ ಹಬ್ಬವಾಗಿದೆ. ದುರ್ಗಾದೇವಿಯನ್ನು ಒಂದೊಂದು ದಿನ ಒಂಭತ್ತು ರೂಪಗಳಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. 10ನೆ ದಿನ ವಿಜಯದಶಮಿ ಆಚರಿಸಲಾಗುತ್ತದೆ. ಪ್ರಸನ್ನಗಣಪತಿದೇವಸ್ಥಾನದಲ್ಲಿ ಕಳೆದ 32 ವರ್ಷಗಳಿಂದ ಶರನ್ನವರಾತ್ರಿ ಆಚರಿಸುತ್ತಾ ಬಂದಿದ್ದೇವೆ ಎಂದರು.

ಈ ಬಾರಿಯೂ ಕೂಡ ಅ.15 ರಂದು ಪ್ರಾರಂಭವಾಗಿ, ಅ.28ರಂದು ಸಮಾರೋಪಗೊಳ್ಳುತ್ತದೆ. ಅ.29ರಂದು ರಾಜಬೀದಿ ಉತ್ಸವವಿರುತ್ತದೆ. ಈ ಉತ್ಸವದಲ್ಲಿ ಧನಲಕ್ಷ್ಮಿ ದೇವಿಯ ಭವ್ಯ ಮೆರವಣಿಗೆ ನಡೆಯುತ್ತದೆ. ಪ್ರತಿದಿನವೂ ವಿಶೇಷ ಹೋಮ, ಹವನ, ಯಾಗಗಳು ನಡೆಯುತ್ತವೆ. ಜತೆಗೆ ಪ್ರತಿದಿನ ಸಂಜೆ 6ರಿಂದ 6.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು, ಇದರ ಉದ್ಘಾಟನೆಯನ್ನು ಅ.15ರ ಸಂಜೆ 6ಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಉದ್ಘಾಟಿಸುವರು ಎಂದರು.

ಅ.28ರಂದು ಶತಚಂಡಿಕಾ ಯಾಗ, ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಂಜೆ ಭಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ.15ರಿಂದ ಪ್ರತಿದಿನ ನಡೆಯುವ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಜನೆ, ಸತ್ಸಂಗ, ಸುಗಮ ಸಂಗೀತ, ಹರಿಕಥೆ, ರಾಮಸ್ಮರಣೆ, ವೀಣಾವಾದನ, ಸ್ಯಾಕೋ್ಸೆೆನ್ ವಾದನ, ಯಕ್ಷಗಾನ, ಗಮಕವಾಚನ, ಭರತನಾಟ್ಯ ಕಾರ್ಯಕ್ರಮಗಳಿವೆ ಎಂದರು.

ಅ.28ರಂದು ಶತಚಂಡಿಕಾ ಯಾಗದಲ್ಲಿ 15ಕ್ಕೂ ಹೆಚ್ಚು ಪುರೋಹಿತರು ಭಾಗವಹಿಸಲಿದ್ದು, 1ಲಕ್ಷ ಜಪ ಮಾಡುತ್ತಾರೆ. 100 ಸುವಾಸಿನಿಯರಿಗೆ ಬಾಗಿನ ನೀಡುತ್ತಾರೆ. ನಂತರ ಸಂಜೆ 4.30ಕ್ಕೆ ಅಮ್ಮನವರ ರಾಜಬೀದಿ ಉತ್ಸವದೊಂದಿಗೆ ಅಮ್ಮನವರನ್ನು ವಿಸರ್ಜಿಸಲಾಗುವುದು ಎಂದರು. ದೇವಳ ಸಮಿತಿ ಪ್ರಮುಖರಾದ ಎನ್.ಉಮಾಪತಿ, ಸ.ನಾ.ಮೂರ್ತಿ, ಶಬರೀಶ್ ಕಣ್ಣನ್, ಶಂಕರ್ ಭಟ್, ವಿನಾಯಕ ಬಾಯರಿ ಸುದ್ದಿಗೋಷ್ಠಿಯಲ್ಲಿದ್ದರು.

ಇದನ್ನೂ ಓದಿ-https://suddilive.in/archives/1028

Related Articles

Leave a Reply

Your email address will not be published. Required fields are marked *

Back to top button