ಕ್ರೈಂ ನ್ಯೂಸ್

ಮದುವೆ ವಿಚಾರದಲ್ಲಿ ನಂಬಿಸಿ ಮಹಿಳೆಗೆ ವಂಚನೆ-ನ್ಯಾಯಾಲಯ ಶಿಕ್ಷೆ ಪ್ರಕಟ

ಸುದ್ದಿಲೈವ್/ಶಿವಮೊಗ್ಗ

ಕೌಟುಂಬಿಕ ದೌರ್ಜನ್ಯ ಆರೋಪದ‌ ಅಡಿ ಮೂವರು ಆರೋಪಿಗೆ ಶಿವಮೊಗ್ಗ ಘನ ನ್ಯಾಯಾಲಯ ದಂಡ ಮತ್ತು‌ ಶಿಕ್ಷೆ ವಿಧಿಸಿ ತೀರ್ಪುನೀಡಿದ್ದಾರೆ.

2017ನೇ ಸಾಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ 25 ವರ್ಷದ ಯುವತಿಗೆ ಶಿವಮೊಗ್ಗ ನಗರದ ವಿನೋದ್ ನೊಂದಿಗೆ ವಿವಾಹವಾಗಿದ್ದು, ಆದರೆ ಅವನು ಈ ಮೊದಲೇ ಬೇರೆ ಮದುವೆಯಾಗಿದ್ದನು.  ಈ ಬಗ್ಗೆ  ಕೇಳಲು ಹೋದ ಆಕೆಯ ಮೇಲೆ ಕೌಟುಂಬಿಕ ದೌರ್ಜನ್ಯವೆಸಗಿರುತ್ತಾರೆಂದು  ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0004/2018 ಕಲಂ 498(ಎ) ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.

ಸದರಿ ಪ್ರಕರಣದಲ್ಲಿ ಆಗಿನ ತನಿಖಾಧಿಖಾರಿಗಳಾದ ಪಿಐ ಪ್ರಭಾವತಿ. ಸಿ. ಶೇತಸನದಿ, ಆರೋಪಿತರ ವಿರುದ್ದ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ  ಕಿರಣ್ ಕುಮಾರ್, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು.

ವಿಚಾರಣೆ ನಡೆಸಿದ ಶಿವಮೊಗ್ಗದ ಘನ 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಶ್ರೀಮತಿ ಸನ್ಮತಿ , ಆರೋಪಿತರ ವಿರುದ್ದ  ನಿನ್ನೆ ಆರೋಪಿ1 ವಿನೋದ್, (29)ಗೆ 6 ವರ್ಷ ಶಿಕ್ಷೆ ಮತ್ತು 20,000/- ದಂಡ ವಿಧಿಸಿದರೆ, ಆರೋಪಿ 2 ಜಯಮ್ಮ, (56) ವರ್ಷ ಈಕೆಗೆ 3 ವರ್ಷ ಶಿಕ್ಷೆ ಮತ್ತು 10,000/- ರೂ ದಂಡ ಮತ್ತು ಆರೋಪಿ 3 ಶ್ರೀನಿವಾಸ,(62)ಗೆ 3 ವರ್ಷ ಶಿಕ್ಷೆ ಮತ್ತು 10000/-ದಂಡ ವಿಧಿಸಿ ಆದೇಶಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/10134

Related Articles

Leave a Reply

Your email address will not be published. Required fields are marked *

Back to top button