ಕ್ರೈಂ ನ್ಯೂಸ್

ಟ್ರೀಪಾರ್ಕ್ ನಲ್ಲಿ ಜಿಂಕೆ ಪ್ರತಿಮೆ ಮುರಿದು ಬಿದ್ದು ಬಾಲಕಿ ಸಾವು

ಸುದ್ದಿಲೈವ್/ಶಿವಮೊಗ್ಗ

ಸಾಗರ ರಸ್ತೆಯ ಮುದ್ದೀನಕೊಪ್ಪದ ಟ್ರೀ ಪಾರ್ಕ್ ನಲ್ಲಿ ಆಟವಾಡುತ್ತಿದ್ದ 6 ವರ್ಷದ ಮಗುವಿನ‌ ಮೇಲೆ ಜಿಂಕೆಯ ಪ್ರತಿಮೆ ಬಿದ್ದು ಸಾವು ಕಂಡಿ ರುವ ಘಟನೆ ನಡೆದಿದೆ.

ಗಾಂಧಿ ಬಜಾರನ ನಿವಾಸಿಗಳಾದ ಸಮೀಕ್ಷಾ ಎಂಬ 6 ವರ್ಷದ ಬಾಲಕಿ ಸಹೋದರಿ ಸುನಿಧಿ, ತಂದೆ ಹರೀಶ್ ಮತ್ತು ತಾಯಿಯೊಂದಿಗೆ‌ ಟ್ರೀಪಾರ್ಕ್ ಗೆ ಹೋಗಿದ್ದಾಳೆ ಜಿಂಕೆ ಪ್ರತಿಮೆಯ ಮೇಲೆ ಆಟವಾಡುವಾಗ ಪ್ರತಿಮೆಯೇ ಬಾಲಕಿ ಮೇಲೆ ಬಿದ್ದಿದೆ. ತಂದೆ ತಾಯಿ ಇಬ್ಬರು ಮಗುವನ್ನ ಮೆಗ್ಗಾನ್ ಗೆ ಕರೆತಂದಿದ್ದಾರೆ.

ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆದಲ್ಲಿ ಮಗು ಕೊನೆ ಉಸಿರು ಎಳೆದಿದೆ. ಟ್ರೀಪಾರ್ಕ್ ನಲ್ಲಿ ಕಳಪೆ ಕಾಮಗಾರಿಯಾಗಿದ್ದರಿಂದ ಜೋಕಾಲಿ ಎಲ್ಲಾ ಮುರಿದುಬಿದ್ದಿದೆ. ಅರಣ್ಯ ಇಲಾಖೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವಿನ ಅಂಗಾಂಗವನ್ನ ಸಿಮ್ಸ್ ಗೆ ದಾನಮಾಡುವುದಾಗಿ ನೋವಿನಲ್ಲೂ ತಂದೆ ಮಾತನಾಡಿದ್ದಾರೆ.

ಇದನ್ನೂ ಓದಿ-https://suddilive.in/archives/7908

Related Articles

Leave a Reply

Your email address will not be published. Required fields are marked *

Back to top button