ಕ್ರೈಂ ನ್ಯೂಸ್

ಡಿಎಸ್ ಎಸ್ ಹಾಲೇಶಪ್ಪರನ್ನ ಬಂಧಿಸುವಂತೆ ಜೋಗಿ ಸಮುದಾಯ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಹೊರಬೈಲಿನಲ್ಲಿ 50 ಜೋಗಿ ಕುಟುಂಬ ವಾಸವಾಗಿದೆ.  ಜೊಗಿ ಸಮುದಾಯ ಅಘೋಷಿತ ಬಹಿಷ್ಕಾರ ಹಾಕಲಾಗಿದೆ ಎಂಬ ಪ್ರಕರಣ ದಾಖಲಾಗಿದೆ. ಯಾರೂ ಹಾಗೆ ಬಹಿಷ್ಕರಿಸಿಲ್ಲ ಎಂದು ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃದ್ಧಿ ಮಹಾಮಂಡಲ ಸ್ಪಷ್ಟಪಡಿಸಿದ್ದಾರೆ.

ಮಹಾಮಂಡಲದ ಮುಖಂಡ ರಾಜು ಮಾತನಾಡಿ, ಜೋಗಿ ಸಮಾಜವನ್ನ ಪರಿಶಿಷ್ಟ ಜಾತಿಗೆ ಸೇರಿಸಲು ಹೋರಾಡಲಾಗುತ್ತಿದೆ. ಹಾಗಾಗಿ ಜೋಗಿ ಸಮುದಾಯದ ಮುಖಂಡರ ವಿರುದ್ಧ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಹೆಚ್ ಹಾಲೇಶಪ್ಪ ಮತ್ತಿತರು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಲು ಯತ್ನಿಸಿದ್ದಾರೆ. ಅವರನ್ನ ಬಂಧಿಸಬೇಕು ಎಂದು ಆಗ್ರಹಿಸಿದರು.

ಶೈಕ್ಷಣಿಕ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ನಾವು ಹಿಂದುಳಿದಿದ್ದೇವೆ. ಗ್ರಾಮಕ್ಕೆ ಮತ್ತು ಸಮಾಜಕ್ಕೆ ಅನ್ಯಾಯವಾಗಿದೆ. ಹಾಲೇಶಪ್ಪ ಮತ್ತು ಇತರರನ್ನ ಬಂಧಿಸಬೇಕು. ಕಾಣದ ಕೈಗಳು ಇಲ್ಲಿ ಪಾತ್ರವಹಿಸಿದೆ. ಜೋಗಿ ಸಮುದಾಯದ ಯುವಕ ಯುವತಿಯರು ಇತರೆ ಅಂತರ್ಜಾತಿ ಆಗಿ ಸುಖವಾಗಿದ್ದಾರೆ. ಕೆಲವರು ಈ ಸಾಮರಸ್ಯವನ್ನ‌ಹಾಳು ಮಾಡುತ್ತಿದ್ದಾರೆ ಎಂದು ಆಗ್ರಹಿಸಿದರು.‌

ದಿನೇಶ ಮತ್ತು ಪ್ರೀತಿ ಸಂತೋಷವಾಗಿದ್ದಾರೆ. ದಿನೇಶ ಮತ್ತು ಪ್ರೀತಿ ಕುಟುಂಬದ ಜೊತೆ ಎಸ್ಪಿ ಕಚೇರಿಗೆ ಭೇಟಿ ನೀಡಲಾಗುತ್ತಿದೆ ಎಂದರು. ಗ್ರಾಮ‌ಪಂಚಾಯಿತಿ ಸದಸ್ಯೆ ಶಶಿಕಲಾ ಮಾತನಾಡಿ,  ಇಬ್ವರು ಮದುವೆಗೆ ನಾವು ಹೋಗಿದ್ವಿ ಪ್ರತಿವರ್ಷ  ಗ್ರಾಮದ ಶನಿಕಾರ್ಯಕ್ರಮ ಪ್ರೀತಿಯ ಮನೆಯಲ್ಲಿ ನಡೆಯಲಿದೆ.   ಜೋಗಿ ಸಮುದಾಯದವರು ಅಲ್ಲಿ ಹೋಗಿ ಊಟ ಮಾಡಿಕೊಂಡು ಬರುತ್ತೀವಿ. ಈ ಗ್ರಾಮದ ಕೆಲವರ ಕುಮ್ಮಕಿನಿಂದ ಈ ಪ್ರಕರಣ ದಾಖಲಾಗಿದೆ  ಎಂದು ಕಣ್ಣೀರು ಹಾಕಿ ಮಾತನಾಡಿದರು.

ಇದನ್ನೂ ಓದಿ-https://suddilive.in/archives/5816

Related Articles

Leave a Reply

Your email address will not be published. Required fields are marked *

Back to top button