ರಾಜಕೀಯ ಸುದ್ದಿಗಳು

ಸಚಿವರ ವಾಗ್ದಾಳಿಗೆ ರಾಘಣ್ಣ ಕೌಂಟರ್!

ಸುದ್ದಿಲೈವ್/ಶಿವಮೊಗ್ಗ

ಪತ್ರಿಕೆಗಳ ವರದಿ ತೋರಿಸಿ ಸಚಿವ ಮಧು ಬಂಗಾರಪ್ಪನವರ ಆರೋಪಕ್ಕೆ ಸಂಸದ ರಾಘವೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ಹಿನ್ನಲೆಯಲ್ಲಿ ಸಚಿವ ಮಧು ಬಂಗಾರಪ್ಪ ಜಿಲ್ಲೆಯಲ್ಲಿ ಸಹೋದರಿ ಗೀತರವರ ಬಗ್ಗೆ ಪ್ರಚಾರ ನಡೆಸಿದ್ದಾರೆ. ಪ್ರಚಾರದ ವೇಳೆ ಜಿಲ್ಲೆಯ ನೀರಾವರಿ, ಅಭಿವೃದ್ಧಿ, ಬಗುರ್ ಹುಕುಂ ಬಗ್ಗೆ ಸಂದರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರ ವಾಗ್ದಾಳಿಗೆ ಪತ್ರಿಕೆ ತೋರಿಸಿ ಯಾವ ಯಾವ ಪತ್ರಿಕೆಯಲ್ಲಿ ಸಂಸತ್ ನಲ್ಲಿ ಮಾತನಾಡಿರುವ ಬಗ್ಗೆ ಅಡಿಕೆ ವಿಚಾರ, ಭದ್ರಾವತಿ ಕಾರ್ಖಾನೆ ಬಗ್ಗೆ ಏನೇನು ಕಾರ್ಯಗಳಾಗಿವೆ ಎಂಬುದನ್ನ ತೋರಿಸಿ ಮಾತನಾಡಿದರು.

ಮೊದಲನೇ ಹಂತದ ಚುನಾವಣೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಚುನಾವಣೆ ವೇಳೆ ಅನೇಕ ವಿಚಾರಗಳು ಚರ್ಚೆ ಆಗುತ್ತಿದೆ. ಹಿಂದಿನ ಸರ್ಕಾರದ ಸಾಧನೆ, ವೈಫಲ್ಯಗಳು ಚರ್ಚೆ ಆಗಲಿವೆ.

ಎನ್ ಡಿ ಎ ಒಕ್ಕೂಟ 400+ ಗುರಿ ಹೊಂದಿದೆ. ಅಭಿವೃದ್ಧಿ, ರಾಷ್ಟ್ರದ ಚರ್ಚೆಗಳು ಎನ್ ಡಿಎ ಆರಂಭಿಸಿದೆ. ಶಿವಮೊಗ್ಗದಲ್ಲಿಯೂ ರಾಜಕೀಯ ಚರ್ಚೆಗಳು ಆರಂಭಿಸಲಾಗಿದೆ. ಶಿವಮೊಗ್ಗಕ್ಕೆ ರಾಜಕೀಯ ಇತಿಹಾಸವಿದೆ. ಸಾಹಿತಿ, ಸಿಎಂಗಳಿಗೆ ಶಕ್ತಿ ತುಂಬಿದ ಕ್ಷೇತ್ರವಾಗಿದೆ ಎಂದರು.

ಅಂತರಾಷ್ಟ್ರೀಯ ಮಟ್ಟದಿಂದ ಹಿಡಿದು, ಸ್ಥಳೀಯವಾಗಿ ಆಗುಹೋಗುಗಳ ಬಗ್ಗೆ ಚರ್ಚೆ ಆಗ್ತಾ ಇದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಸಾರ್ವಜನಿಕ ಸಭೆಗಳಲ್ಲಿ ಮೋದಿ, ಬಿಜೆಪಿ ಕಾರ್ಯಕರ್ತರು ಮತ್ತು ನನ್ನ ವಿರುದ್ಧ ಆಡಿರುವ ಮಾತುಗಳು ಸರಿಯಿಲ್ಲ ಎಂದರು.

ಯುವಕರಿಗೆ, ರೈತರಿಗೆ ಮಹಿಳೆಯರಿಗೆ ಅನಿಕೂಲವಾಗುವ ಸ್ಥಿತಿ ನಿರ್ಮಾಣವಾಗಿದೆ. 65 ವರ್ಷ ಅಡಳಿತ ನಡೆಸಿದ ಕಾಂಗ್ರೆಸ್ ನಲ್ಲಿ ಆಗದ ಕೆಲಸ 10 ವರ್ಷದಲ್ಲಿ ಮೋದಿ ಸರ್ಕಾರದಲ್ಲಿ ನಡೆದಿದೆ. ಶಿಕಾರಿಪುರದಲ್ಲಿ ಬಿಜೆಪಿ ಕಾರ್ಯಕರ್ತರನ್ನ ಚೇಲಗಳು ಎಂದು ಉಲ್ಲೇಖಿಸಿ ಸಚಿವರು ಮಾತನಾಡಿದ್ದಾರೆ. ಮೋದಿಯನ್ನ ಬಿಜೆಪಿ ಕಾರ್ಯಕರ್ತರನ್ನ ಅವಹೇಳನಕಾರಿ ಭಾಷಣದಲ್ಲಿ ಉಲ್ಲೇಖಿಸುತ್ತಿದ್ದೀರಿ ಎಂದು ದೂರಿದರು.

ಕಾಂಗ್ರೆಸ್ ಕಾರ್ಯಕರ್ತರೇ ಮುಜುಗರವಾಗುವಂತೆ ಮಾತನಾಡುತ್ತಿದ್ದಾರೆ. ನಿಮ್ಮ ತಂದೆಗಿಂತ ನಮ್ಮ ತಂದೆ ಮೊದಲು ಸಿಎಂ ಆಗಿದ್ದಾರೆ ಎನ್ನುತ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಮಾದರಿಯಾಗುವ ಪದ ಬಳಕೆ ಬಿಟ್ಟು ಹಡಬಿಟ್ಟಿ, ಅಪ್ಪನ ತೆರಿಗೆ ಹಣ, ಎಂಬ ಪದ ಬಳಕೆ ವಿರುದ್ಧ ಸಂಸದ ರಾಘವೇಂದ್ರ ಗರಂ ಆಗಿದ್ದಾರೆ.

ತಮ್ಮ ಸಂಸ್ಕೃತಿಯನ್ನ ತಮ್ಮ ನಾಲಿಗೆ ಹೇಳ್ತಾ ಇದೆ. ಪುಕ್ಕಸಟ್ಟೆ ಹಣ ಸಿಕ್ಕಿದೆ ಅಭಿವೃದ್ಧಿ ಮಾಡ್ತಾ ಇದ್ದಾರೆ. ಶರಾವತಿ ಸಂತ್ರಸ್ತರ ವಿರುದ್ಧ ಹಗೂರವಾದ ಮಾತುಗಳನ್ನಾಡುವ ಸಚಿವರು ನೀವು ಮಾಡಿದ ತಪ್ಪನ್ನ ಕೇಂದ್ರಕ್ಕೆ ಮನವರಿಕೆ ಮಾಡಿ ಹಕ್ಕುಪತ್ರ ನೀಡುವ ಪ್ರಯತ್ನ ನಡೆಯುತ್ತಿದೆ. ನಾನು ಮಾತನಾಡಿರುವ ಬಗ್ಗೆ ಪತ್ರಿಕಾ ವರದಿ ತೋರಿಸಿ ಅಡಿಕೆ, ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಅವರು ಗೆದ್ದ ನಂತರದಲ್ಲಿ ಬಗುರ್ ಹುಕಂ ಸಾಗುವಳಿ ಪತ್ರ ನೀಡುವ ಬಗ್ಗೆ ಮಾತನಾಡುವ ಸಚಿವರು, ಕೋರ್ಟ್ ನಲ್ಲಿ ಅಫಿಡೆವಿಟ್ ಹಾಕಲು ಸಮಯ ಆಗಲಿಲ್ಲ. ಸಮಸ್ಯೆ ಹಾಗೆ ಉಳಿಸುವ ಪ್ರಯತ್ನ ನಡೆಸಿದ್ದೀರಿ. ನಿಮ್ಮ ತಂದೆ ಅವರೆ ಸಿಎಂ ಆಗಿದ್ದರು ಯಾಕೆ ಮಾಡಲಿಲ್ಲ. ಎಂಪಿಎಂಗೆ ಕೊನೆ ಮೊಳೆ ಹೊಡೆದವರು ಯಾರು? ವೈಂಡ್ ಅಪ್ ಆಗುವ ಸಮಯದಲ್ಲಿ ಉಳಿಸಿದವರು ಯಾರು? ವಿಐಎಸ್ ಎಲ್ ಬಗ್ಗೆ ಮಾತನಾಡುವ ನಿಮಗೆ ನಾಚಿಕೆ ಆಗಬೇಕಲ್ಲಾ?

ಒಂದು ರೂ.ಗೆ ಹ್ಯಾಂಡ್ ಓವರ್ ಮಾಡಿದ್ರಿ. ಆದರೆ ದಿನಕ್ಕೆ 14-15 ದಿನ ಸಿಗಬೇಕಾದ ಕೆಲಸ ನೀಡುವ ಜಾಗದಲ್ಲಿ 28 ದಿನ ಕೆಲಸ ನೀಡಲಾಗುತ್ತಿದೆ. ಸ್ಟೀಲ್ ಮಿನಿಸ್ಟರ್ ಜ್ಯೋತಿರಾಧ್ಯಿತ್ಯ ರು ಸೂಕ್ಷ್ಮ‌ಪತ್ರ ಬರೆದಿದ್ದಾರೆ. ಅದನ್ನ ಶಾಶ್ವತವಾಗಿ ಉಳಿಸುವ ಪ್ರಯತ್ನ ನಡೆಯುತ್ತಿದೆ. ಈ ಎಲ್ಲಾ ಪ್ರಯತ್ನಗಳನ್ನ ಸಂಸದರು ಮತ್ತು ಬಿಜೆಪಿ ಕೇಂದ್ರ ಸರ್ಕಾರ ಎಂದರು.

ದೇಶಭಕ್ತರ ಪಾಠ ಕಿತ್ತುಹಾಕುವ ಸಚಿವರಿಂದ ದಿವಾಳಿತನದ ಮಾತನ್ನ ಯಾವುದೇ ಕಾರ್ಯಕರ್ತರು ಚಿಂತನೆ ಮಾಡುತ್ತಿಲ್ಲ. ಮಾಧ್ಯಮದೊಂದಿಗೆ ಚರ್ಚೆಗೆ ಸಿದ್ದ ಎಂದು ಘೋಷಿಸಿದರು. ಸಣ್ಣತನದ ರಾಜಕೀಯ ಭಾಷಣ ಮಾಡುವುದನ್ನ ಪಕ್ಷ ಹೇಳಿಕೊಟ್ಟಿಲ್ಲ. ಹಗೂರ ಮಾತುಗಳನ್ನ ಬಿಟ್ಟು ಚುನಾವಣೆ ಮುಗಿದ ಮೇಲೆ ಅಭಿವೃದ್ಧಿಯ ತೇರನ್ನ‌ ಒಟ್ಟಾಗಿ ಎಳೆಯ ಬೇಕಿದೆ ಎಂದು ತಿಳಿಸಿದರು.

2008-11 ರವರೆಗೆ ಬಿಎಸ್ ವೈ ಸಿಎಂ ಆಗಿದ್ದರು. ರೈತರ ಬಜೆಟ್ 10 ಹೆಚ್ ಪಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಘೋಷಿಸಿದ್ದರು.

ನೀರಾವರಿಗೆ ಪಾದಯಾತ್ರೆ ಮಾಡಿದೆ, ವಿದ್ಯುತ್ ಉಚಿತ ಕೆಲಸಮಾಡಿದ್ದು ನಾನು ಎಂದು ಹೇಳುವ ಸಚಿವರು 5000 ಎಕರೆ ಭೂಮಿಗೆ ನೀರು ಒದಗಿಸಿರುವ ಬಗ್ಗೆ ಕೆಲಸ ಮಾಡಿರುವುದು ನಾವು. ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗ್ತಾ ಇದೆ. ಪಾರ್ಲಿಮೆಂಟ್ ನಲ್ಲಿ ಗ್ಯಾಲರಿಯಲ್ಲಿ ಕೂರುವ ಸಮಯ ಬರ್ತಾ‌ಇದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ-https://suddilive.in/archives/11612

Related Articles

Leave a Reply

Your email address will not be published. Required fields are marked *

Back to top button