ಕ್ರೈಂ ನ್ಯೂಸ್

ರಿಪ್ಪನ್ ಪೇಟೆಯ ಮರ್ಡರ್ ಪ್ರಕರಣ-ಆರೋಪಿಗಳನ್ನ ಪತ್ತೆ ಮಾಡಿದ್ದ ಬಗ್ಗೆ ಎಸ್ಪಿ ವಿವರಣೆ

ಸುದ್ದಿಲೈವ್/ಶಿವಮೊಗ್ಗ

ರಿಪ್ಪನ್ ಪೇಟೆಯ ಮುತ್ತಿನಕೆರೆಯಲ್ಲಿ ಶವಪತ್ತೆಯಾದ ಶವ ಪತ್ತೆಪ್ರಕರಣವನ್ನ ಬೇಧಿಸಿದ ಪೊಲೀಸರು ಇದೊಂದು ಕೊಲೆ ಎಂದು ಸಾಬೀತಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಜಿ.ಕೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮತನಾಡಿ, ಜಯಮ್ಮನಿಂದ 60 ಸಾವಿರ ಹಣ ಸಾಲವನ್ನ‌ ಪಡೆದ ಮಯೂರ್ . ರಿಪ್ಪನ್ ಪೇಟೆಗೆ ಬಂದರೆ ಹಣಕೊಡುವುದಾಗಿ ಹಾಗೂ ಸೈಟ್ ಕೊಡಿಸುವುದಾಗಿ ಹೇಳಿ ವೃದ್ಧೆಯನ್ನ ಬರ ಮಾಡಿಕೊಂಡಿರುತ್ತಾನೆ.

ಮಾ.18 ರಂದು ಜಯಮ್ಮ ರಿಪ್ಪನ್ ಪೇಟೆಗೆ ಹೋದಾಗ ಮಯೂರ್ ಆಕೆಯನ್ನ ಸ್ನೇಹಿತನ ವ್ಯಾಗನರ್ ನಲ್ಲಿ ಕೂರಿಸಿಕೊಂಡು ಹುಂಚ, ಆಗುಂಬೆ ಕಡೆ ಹೋಗಿರುತ್ತಾರೆ. ಆಗುಂಬೆಯಲ್ಲಿ ಪೊಲೀಸರು ಇದ್ದ ಕಾರಣ ವಾಪಾಸ್ ಆಗ್ತಾರೆ.

ಬೇರೆ ಮಠಕ್ಕೆ ಸೇರಿಸುತ್ತೇನೆ ಎಂದು ಜಯಮ್ಮನನ್ನ‌ ಕರೆದುಕೊಂಡು ಹೋಗಿರುತ್ತಾರೆ. ಆಕೆಯ ಮೇಲೆ ಹಲ್ಲೆ ಮಾಡಿ ಕೆರೆಯಲ್ಲಿ ಹಗ್ಗ ಕಟ್ಟಿ ಕೊಲೆ ಮಾಡಲಾಗಿರುತ್ತದೆ. ಮಯೂರ ಮತ್ತೋರ್ವ ಮತ್ತೆ ಆತನ ಅತ್ತೆಯೂ ಆರೋಪಿಯಾಗಿದ್ದಾರೆ, ಆತನ ಅತ್ತೆ ಜಯಮ್ಮಳ ಚಲನ ವಲನವನ್ನ ತಿಳಿಸುವ ಮಾಹಿತಿದಾರರಗಿರುತ್ತಾರೆ ಮತ್ತು ಚಿನ್ನಾಭರಣವನ್ನ ಇಟ್ಟುಕೊಂಡಿರುತ್ತಾಳೆ ಎಂದು ಮಾಹಿತಿ ಕೊಟ್ಟಿರುತ್ತಾಳೆ ಎಂದರು.

ಆರೋಪಿ ಮಯೂರ್ ಕ್ರಿಮಿನಲ್ ಬ್ಯಾಕ್ ರೌಂಡ್ ಇರುತ್ತದೆ. ಟೆಕ್ನಿಕಲ್ ಡಾಟಾ ಮೂಲಕ ಕೊಲೆ ಆರೋಪಿ ಪತ್ತೆಯಾಗಿರುತ್ತದೆ. ಹೊಳಲೂರಿನ ವೃದ್ಧೆಯ ಕಾಣೆಪ್ರಕರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪತ್ತೆಯಾಗಿರುತ್ತಾರೆ ಎಂದರು.

ಮಹಿಳೆ ಬಳಿ ಪತ್ತೆಯಾದಚಿನ್ನಾಭರಣಗಳು ರೋಲ್ಡ ಗೋಲ್ಡ್ ಎಂದು ಆರೋಪಿಗಳು ಕೆರೆಗೆ ಬಿಸಾಕಿ ಹೋಗಿದ್ದಾರೆ. ವೃದ್ಧೆ ಜಯಮ್ಮಳಿಗೆ ಈಜು ಬರುತ್ತದೆ ಎಂದುಆಕೆಯ ಕಾಲಿಗೆ ಹಗ್ಗಕಟ್ಟಲಾಗಿದೆ ಎಂದು ಆರೋಪಿಗಳು ಒಪ್ಪಿಕೊಂಡಿರುವುದಾಗಿ ತಿಳಿಸಿದರು.‌

10 ಕೋಟಿಗೂ ಹೆಚ್ಚು ಪತ್ತೆ

ಚುನಾವಣೆ ಹಿನ್ನೆಲೆಯಲ್ಲಿ 26 ಚೆಕ್ ಪೋಸ್ಟ್ ಗಳನ್ನ‌ನಿರ್ಮಿಸಲಾಗಿದೆ. ದಾಖಲಾತಿಗಳಿಲ್ಲದೆ 4½ಕೋಟಿ 2½ ಕೋಟಿಯ ಸೀರೆಯ ಪತ್ತೆಯಾಗಿದೆ. ಅಕ್ಕಿ ಮತ್ತು ಆಯಿಲ್ ಪತ್ತೆಯಾಗಿದೆ. ಸುಮಾರು 10 ಕೋಟಿಗೂ ಹೆಚ್ಚು ಪತ್ತೆಯಾಗಿದೆ. ಇದು ಯಾರಿಗೆ ಸೇರಿದೆ ಎಂಬುದು ಪರಿಶೀಲಿಸಲಾಗುತ್ತಿದೆ ಎಂದರು.‌

ಇದನ್ನೂ ಓದಿ-https://suddilive.in/archives/11867

Related Articles

Leave a Reply

Your email address will not be published. Required fields are marked *

Back to top button