ರಾಜಕೀಯ ಸುದ್ದಿಗಳು

ಬ್ರಹ್ಮ ಬಂದರೂ ಸ್ಪರ್ಧೆಯಿಂದ ಸರಿಯಲ್ಲ-ಚುನಾವಣೆ ನಂತರ ಬಿಜೆಪಿ ಸೇರೋದು ಪಕ್ಕಾ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಲೋಕಸಭಾ ಚುನಾವಣೆಗೆ ಸ್ಪರ್ಧೆ ತೀರ್ಮಾನಿಸಿದ ನಂತರ, ಎಲ್ಲಾ ವಿಧಾನಸಭಾ‌ ಚುನಾವಣೆ ಕ್ಷೇತ್ರದಲ್ಲಿ ಪ್ರವಾಸ ಮಾಡಲಾಗಿದೆ. ನನಗೆ ಬಿಜೆಪಿ ಒಂದು ಕುಟುಂಬದ‌ ಕೈಯಲ್ಲಿ ಸಿಲುಕಿದೆ. ಅದರ ವಿರುದ್ಧ ಹೋರಾಟ ಮಾಡ್ತಾ ಇದ್ದಾರೆ. ನಿಮಗೆ ಶುಭವಾಗಲಿ ಎಂದು ಜನ ನನಗೆ ಹಾರೈಸುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನೇಕರು ಮುಂದೆ ಇಟ್ಟ ಹೆಜ್ಜೆಯನ್ನ ಹಿಂದೆ ಇಡಬೇಡಿ ಎಂದು ಹೇಳುತ್ತಿದ್ದಾರೆ. ಅವರ ವಿಶ್ವಾಸ ನೋಡುದ್ರೆ ಹಾಲಿ ಸಂಸದರನ್ನ ಸೋಲಿಸುವಂತೆ ಶುಭಹಾರೈಸುತ್ತಿದ್ದಾರೆ ಎಂದರು.

ನನ್ನ ಚುನಾವಣೆಯ ಜಿಲ್ಲಾ ಕಾರ್ಯಾಲಯವನ್ನ ನನ್ನ ಮನೆಯಲ್ಲೇ ಮಾ.28 ರಂದು ಉದ್ಘಾಟಿಸುತ್ತಿದ್ದೇನೆ. ಸಾಗರದಿಂದ ಗುಂಪೊಂದು ಬಂದು ಭೇಟಿ ಮಾಡಿದೆ. ಇದರಿಂದ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚಾಗುತ್ತಿದೆ. ಗೆಲುವಿನ ವಿಶ್ವಾಸ ದ್ವಿಗುಣಗೊಂಡಿದೆ. ಮಾ.26 ರಂದು ಬೂತ್ ಮಟ್ಟದ ಸಮಾವೇಶ ಶುಭಮಂಗಳದಲ್ಲಿ ನಡೆಸಲಾಗುತ್ತಿದೆ ಎಂದರು.

ಬ್ರಹ್ಮ ಬಂದರೂ ಹಿಂದೆ ಸರಿಯಲ್ಲ

ಬೂತ್ ನಟ್ಟದ ಸಮಾವೇಶ ಎಂದರೆ ಎಲ್ಲಾ‌ ಸಮಾಜದ ಕಾರ್ಯಕರ್ತರು ಭಾಗಿಯಾಗುತ್ತಿದ್ದಾರೆ. ಬೂತ್ ಸಮಾವೇಶದ ಮೂಲಕ ಬೂತ್ ಕಮಿಟಿ ರಚಿಸಲಾಗುವುದು ಎಂದ ತಿಳಿಸಿದ ಈಶ್ವರಪ್ಪ ಬಿಜೆಪಿಯ ಆರ್ ಕೆ ಸಿದ್ದರಾಮಣ್ಣನವರು ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪವರ ಅಖಾಡ ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆ ಉತ್ತರಿಸಿ, ಬ್ರಹ್ಮ ಬಂದರೂ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದರು.

ಒಂದು ಕುಟುಂಬಕ್ಕೆ ಒಂದು ಟಕೇಟ್ ಎಂದಿದ್ದಕ್ಕೆ ಟಿಕೇಟ್ ಕೇಳಿದ್ದು

ಹಿಂದೂತ್ವದ ರಕ್ಷಣೆಗಾಗಿ, ಕುಟುಂಬ ಕಪಿಮುಷ್ಠಿಯಿಂದ ಪಕ್ಷವನ್ನ ಬಿಡಿಸಬೇಕಿದೆ. ಇದರ ವಿರುದ್ಧ ನನ್ನ ಹೋರಾಟವಾಗಿದೆ. ನಾನು ಯಾರನ್ನೂ ಕರೆದಿಲ್ಲ. ಲೋಕಸಭಾ ಕ್ಷೇತ್ರದಲ್ಲಿ ಅನೇಕರು ಪರಿಚಯಸ್ಥರಿದ್ದಾರೆ. ಅವರಿಗೆಲ್ಲಾ ನನ್ನನ್ನೇ ಬೆಂಬಲಿಸಲು ಕೋರಿದ್ದೇನೆ. ಬಸವರಾಜ್ ಬೊಮ್ನಾಯಿ ಫೈಲು ಆಗಿರುವ ಮುಖ್ಯಮಂತ್ರಿ ಎಂದು ಬಿಎಸ್ವೈ ಮಕ್ಕಳು ಹೇಳಿ ನಿಮ್ಮ‌ಮಗನಿಗೆ ಹಾವೇರಿ ಟಿಕೇಟ್ ಎಂದಿದ್ದರು. ಕೊಡಲಿಲ್ಲ.

ಚಿಕ್ಕಮಗಳೂರಿನಲ್ಲಿ ಶೋಭಾರಿಗೆ ಹಠಹಿಡಿದು ಟಿಕೆಟ್ ಕೊಡಿಸಲು ಬರುತ್ತೆ ನಿಮಗೆ ಕಾಂತೇಶ್ ಗೆ ಟಿಕೇಟ್ ಕೊಡಿಸಲು ಯಾಕೆ ಆಗಲಿಲ್ಲ ಎಧು ಪ್ರಶ್ನಿಸಿದರು. ಮೋದಿಯವರು ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂದು ಹೇಳಿದ್ದರಿಂದ ನಾನು ಟಿಕೆಟ್ ಕೇಳಿದ್ದೆ. ಆದರೆ ಬಿಎಸ್ ವೈ ಕುಟುಂಬದಲ್ಲಿ ಎರಡು ಟಿಕೇಟ್ ನೀಡಲಾಗಿದೆ. ಚುನಾವಣೆ ಮುಗಿದ ನಂತರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜೇಂದ್ರ ರಾಜೀನಾಮೆ ನೀಡಲಿದ್ದಾರೆ. ಪಕ್ಷದ ವೇದಿಕೆಯಿಂದಲೇ ಟಿಕೆಟ್ ನೀಡುವುದಾಗಿ ನನಗೆ ಚಾಕುವಿನಿಂದ ಇರಿಯಾಗಿದೆ.

ಮತ್ತೆ ಬಿಜೆಪಿಗೆ ಬರುವೆ

ಬಿಜೆಪಿ ಬೇಡ ಎಂದರೂ ಕರೆದುಕೊಳ್ತಾರೆ. ಜಗದೀಶ್ ಶೆಟ್ಟರ್ ನ್ನ ಪಕ್ಷ ಬಿಟ್ಟು ಬೇರೆ ಪಕ್ಷ ಕಡೆ ಹೋಗಿ ಸ್ಪರ್ಧಿಸಿ ಸೋತು ನಂತರ ಮತ್ತೆ ಬಿಜೆಪಿಗೆ ಬಂದಿದ್ದಾರೆ. ನನ್ನನ್ನ ಚುನಾವಣೆ ಮುಗಿದು ಎರಡು ತಿಂಗಳ ನಂತರ ಕರೆದುಕೊಳ್ತಾರೆ ಎಂದು ವಿಶ್ವಾಸ ಹೊರಹಾಕಿದರು. ಜೆಡಿಎಸ್ ಮತ್ತು ಕಾಂಗ್ರೆಸ್ ನವರೂ ನನಗೆ ಬೆಂಬಲಿಸುತ್ತಿದ್ದಾರೆ ಎಂದರು.

ಬಿಎಸ್ ವೈ ನಿಂದ ಹೊಂದಾಣಿಕೆ ರಾಜಕಾರಣ?

ಬಿಎಸ್ ವೈರಿಂದಲೇ ಕಾಂಗ್ರೆಸ್ ನಿಂದ ಶಿವಮೊಗ್ಗ ಕ್ಷೇತ್ರಕ್ಕೆ ಡಮ್ಮಿ ಕ್ಯಾಂಡಿಡೇಟ್ ಹಾಕಿಸಿಕೊಂಡು ಬಂದಿದ್ದಾರೆ ಎಂದು ಕೆಲ ಕಾಂಗ್ರೆಸ್ ನಲ್ಲಿರುವ ಅಸಮಾಧಾನಿತರು ಹೇಳ್ತಾ ಇದ್ದಾರೆ. ಇದರಿಂದ ಬಿಎಸ್ ವೈ ಹೊಂದಾಣಿಕೆ ರಾಜಕಾರಣದ ಮೋರೆಹೋಗಿದ್ದಾರೆ ಎಂಬ ಅನುಮಾನವಿದೆ ಎಂದ ಈಶ್ವರಪ್ಪ ರಾಜ್ಯದಲ್ಲಿ 28 ಸ್ಥಾನದಲ್ಲಿ 27 ಸ್ಥಾನ ಬಿಜೆಪಿ ಗೆಲ್ಲಬೇಕು. ಒಂದು ಸ್ಥಾನ ನನ್ನನ್ನದು ನಾನು ಸಹ ಮೋದಿ ಬೆಂಬಲಿತನಾಗಿದ್ದೇನೆ ಎಂದರು.

ಚುನಾವಣೆ ಮುಗಿದ ನಙತರ ಬಿವೈಆರ್ ರಾಜೀನಾಮೆ

ಕರ್ನಾಟಕ ಬಿಜೆಪಿ ಒಂದು ಕುಟುಂಬದ ಹಿಡಿತದಲ್ಲಿರುವುದರಿಂದ ನನ್ನ ಸ್ಪರ್ಧೆ ಮಾಡಿ ರಾಘವೇಂದ್ರನ್ನ ಸೋಲಿಸುವಿದರಿಂದ ಶೇ.30 ರಷ್ಟು ಕುಟುಂಬ ರಾಜಕಾರಣದಿಂದ ಮುಕ್ತವಾಗಿದೆ. ಗೆಲುವಿನ ನಂತರ ವಿಜೇಂದ್ರರ ಹಿಡಿತ ಕಡಿಮೆಯಾಗಲಿದೆ. ಬಿಎಸ್ ವೈ ಒಬ್ಬರೇ ನಾಯಕರಾಗಿರಲಿ ನನ್ನ ಅಭ್ಯಂತರವಿಲ್ಲ ಎಂದರು.

ರಾಷ್ಟಭಕ್ತ ಮುಸಲ್ಮಾನರು ಸಹ ಅದೃಶ್ಯ ಮತದಾರರಂತೆ ಕೆಲಸ ಮಾಡಲಿದ್ದಾರೆ. ನನಗೆ ಮತ ಹಾಕಲಿದ್ದಾರೆ ಎಂದರು.

ಇದನ್ನೂ ಓದಿ-https://suddilive.in/archives/11350

Related Articles

Leave a Reply

Your email address will not be published. Required fields are marked *

Back to top button