ಸ್ಥಳೀಯ ಸುದ್ದಿಗಳು

ಪದ್ಮಾವತಿ ದೇವಿಗೆ ಚಿನ್ನದ ಸೀರೆ ಸಮರ್ಪಣೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಹೊಂಬುಜ ಕ್ಷೇತ್ರದಲ್ಲಿ ಜಗನ್ಮಾತೆ ಹೊಂಬುಜ ಶ್ರೀ ಪದ್ಮಾವತಿ ದೇವಿಗೆ ಚಿನ್ನದ ಸೀರೆ ಸಮರ್ಪಣೆ ಮಾಡಲಾಗಿದೆ.

ರಿಪ್ಪನ್‌ಪೇಟೆ ಶ್ರೀಕ್ಷೇತ್ರ ಹೊಂಬುಜ ಜಗನ್ಮಾತೆ ಶ್ರೀ ಪದ್ಮಾವತಿ ದೇವಿಯವರಿಗೆ ಭಕ್ತರಿಂದ ಚಿನ್ನದ ಸೀರೆ ಸಮರ್ಪಣೆ ಮಾಡಲಾಯಿತು. ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಸಾನಿಧ್ಯದಲ್ಲಿ ಭಕ್ತಿಪೂರ್ವಕವಾಗಿ ಭಕ್ತರು ಸಮರ್ಪಿಸಿದ್ದಾರೆ.

ಹಲವು ಜಿಲ್ಲೆಗಳಲ್ಲಿ ಭಕ್ತವೃಂದದವರು  ತಾಯಿ ಶ್ರೀ ಪದ್ಮಾವತಿಗೆ ಶ್ರೀ ಪದ್ಮಾವತಿ ಮಾತಾಕೀ ಜೈ’ ಎಂದು ಭಕ್ತರು ಹರ್ಷೋದ್ಗಾರಗೈದಿದ್ದಾರೆ. ವಿಶಿಷ್ಠ ವಿನ್ಯಾಸದಲ್ಲಿ ಚಿನ್ನದ ಸೀರೆ ಯಕ್ಷಿ ಶ್ರೀ ಪದ್ಮಾವತಿ ದೇವಿಗೆ ಭಕ್ತರು ಸಮರ್ಪಿಸಿದ್ದಾರೆ.‌ಬಳಿಕ ಪೂಜ್ಯಶ್ರೀಗಳವರಿಂದ ಗೌರವ ಆಶೀರ್ವಾದ ಪಡೆದರು.

ಇದನ್ನೂ ಓದಿ-https://suddilive.in/archives/4142

Related Articles

Leave a Reply

Your email address will not be published. Required fields are marked *

Back to top button