ಸ್ಥಳೀಯ ಸುದ್ದಿಗಳು

ಷುಗರ್ ಫ್ಯಾಕ್ಟರಿಯ ಖರೀದಿ ಭೂಮಿ 1380 ಎಕರೆಯಲ್ಲಿ ಮಾತ್ರ ಒಕ್ಕಲೆಬ್ಬಿಸುವುದಾಗಿ ಮಜ್ದೂರ್ ಸಂಘ ಸುದ್ದಿಗೋಷ್ಠಿ

ಸುದ್ದಿಲೈವ್/ಶಿವಮೊಗ್ಗ

ತುಂಗಭದ್ರ ಸಕ್ಕರೆ ಕಾರ್ಖಾನೆಯ ಜಾಗದ ವಿಚಾರದಲ್ಲಿ ಹುಟ್ಟಿಕೊಂಡಿರುವ ಒಕ್ಕಲೆಬ್ಬಿಸುವ ಭೀತಿಯಿರುವಾಗಲೇ ತುಂಗಭದ್ರ ಷುಗರ್ ವರ್ಕ್ಸ್ ಮಜ್ದೂರ್ ಸಂಘ ಆಡಳಿತ ಮಂಡಳಿ ಪರವಾಗಿ ಸುದ್ದಿಗೀಷ್ಠಿ ನಡೆಸಿ ಹಲವು ಸ್ಪಷ್ಟೀಕರಣ ನೀಡಿದೆ. ಮುಂದಿನ ದಿನಗಳಲ್ಲಿ ಮಾಲೀಕ ಪಿ.ಮಣಿವಣ್ಣನ್ ಅವರ ಜೊತೆಗೆ ಸುದ್ದಿಗೋಷ್ಠಿ ನಡೆಸುವುದಾಗಿ ಭರವಸೆ ನೀಡಿದೆ.

1958 ರಲ್ಲಿ ಶುಗರ್ ಫ್ಯಾಕ್ಟರಿ ಶಿವಮೊಗ್ಗದ ಮಲವಗೊಪ್ಪದಲ್ಲಿ ಆರಂಭವಾಗಿದೆ.  ಸ್ಥಾಪನ 3000 ಎಕರೆ ಜಾಗ 1380 ಖರೀದಿ ಭೂಮಿ ಶುಗರ್ ಫ್ಯಾಕ್ಟರಿಗೆ ಸೇರಿದ್ದಾಗಿದೆ. ಉಳಿದವುಗಳನ್ನ ಫ್ಯಾಕ್ಟರಿಗೆ ಈ ಹಿಂದೆ  ಲೀಸ್ಗೆ ನೀಡಿರುವುದಾಗಿದೆ.

38 ವರ್ಷದ ನಂತರ ಶುಗರ್ ಫ್ಯಾಕ್ಟರಿ ಜಾಗ ಲಿಕ್ವೀಡೆಟಿಯಾಗಿತ್ತು. ಈಗ  ಸಾಲವನ್ನ ಕಾರ್ಖಾನೆ ತೀರಿಸಿದ್ದರಿಂದ 1380 ಎಕರೆ ಕಾರ್ಖಾನೆಯ ಭೂಮಿಯನ್ನ ಹೊರತುಪಡಿಸಿ ಉಳಿದವುಗಳಲ್ಲಿ ಯಾವುದೇ ಒಕ್ಕಲೆಬ್ಬಿಸುವುದಿಲ್ಲವೆಂದು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.

ರೈತ ಸಂಘ ಮತ್ತು ಇತರೆಯರು ಫ್ಯಾಕ್ಟರಿಯ ಭೂಮಿಗೆ ಸಂಬಂಧ ಪಡದ ಕೆಲವರು ಹೋರಾಟ ಮಾಡುತ್ತಿದ್ದಾರೆ. ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ. ಸರ್ಕಾರದ ಜಾಗವನ್ನ ಸರ್ಕಾರಕ್ಕೆ ಬಿಟ್ಟುಕೊಡಲಾಗಿದೆ. ಎಲ್ಲಿ ಕುಟುಂಬ ವಾಸವಾಗಿದ್ದಾರೋ ಮ್ಯಾನೇಜ್ ಮೆಂಟ್ ಜೊತೆ ಮಾತನಾಡಿ ಬಿಟ್ಟುಕೊಡಲಾಗುವುದು.

ಇಂದಿರಾ ನಗರ, ಹಾಥಿ ನಗರದ 63 ಮನೆಗಳ, ಹರಿಗೆ ಕ್ಯಾಂಪ್ ನ 23ಮನೆಗಳನ್ನ ಮ್ಯಾನೇಜ್ ಮೆಂಟ್ ಜೊತೆ ಮಾತನಾಡಿ ಬಿಟ್ಟುಕೊಡಲಾಗಿದೆ. ಸಕ್ಕರೆ ಕಾರ್ಖಾನೆಯ ಹೆಸರಿನ ಪಹಣಿಯಲ್ಲಿರುವ 1380 ಎಕರೆ ಇದ್ದಿದ್ದನ್ನ ಕ್ರಯಕ್ಕೆ ಪಡೆಯಲಾಗುತ್ತಿದೆ. ಇದನ್ನ ಹೊರತು ಪಡಿಸಿ ಲೀಸ್ ಗೆ ಪಡೆಯಲಾಗಿದ್ದ ಉಳಿದ 1429 ಎಕರೆಯನ್ನ ಯಾವುದನ್ನೂ ಪಡೆಯಲಾಗುತ್ತಿಲ್ಲ. ಕೆಲವರು ದಿಕ್ಕುತಪ್ಪಿಸಿ ಪ್ರತಿಭಟಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.‌

ಹಸೂಡಿ ಗ್ರಾಮದ ಸರ್ವೆ ನಂಬರ್ 135 ರ 228 ಎಕರೆ 05 ಗುಂಟೆ, ಕಾರೇಹಳ್ಳಿ ಸರ್ವೆ ನಂಬರ್ 8 ರ 296 ಎಕರೆ 1 ಗುಂಟೆ, ರಂಗಾಪುರ ಗ್ರಾಮದ ಸರ್ವೆನಂಬರ್ 12 ರಲ್ಲಿರುವ 150 ಎಕರೆ 11 ಗುಂಟೆ, ಎಂ.ಸಿ.ಹಳ್ಳಿ ಗ್ರಾಮದ ಸರ್ವೆನಂಬರ್ 2 ಮತ್ತು 3 ರ 605 ಎಕರೆ 17 ಗುಂಟೆ, ಹಾಲುಲಕ್ಕವಳ್ಳಿಯಲ್ಲಿರುವ ಸರ್ವೆನಂಬರ್ 20ರಲ್ಲುರುವ 150 ಎಕರೆ ಜಾಗವನ್ನ ಸರ್ಕಾರ ಆಗಿನ ಕಾಲದಲ್ಲಿ 30 ವರ್ಷಕ್ಕೆ ಲೀಸ್ ನೀಡಿತ್ತು. ಒಟ್ಟು 1429 ಎಕರೆ 34 ಗುಂಟೆ ಜಾಗವನ್ನ ಎಲ್ಲೂ ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ. ಅದು ಸರ್ಕಾರದ ಜಾಗ ಎಂದು ಸ್ಪಷ್ಟಪಡಿಸಿದರು‌.

ಯರಗನಾಳ್ ನಲ್ಲಿ 25 ಎಕರೆಯಲ್ಲಿ ಶಾಲೆ, ಹಾಲಿನ ಡೈರಿ ಸಕ್ಕರೆ ಕಾರ್ಖಾನೆಯನ್ನ ಬಿಟ್ಟುಕೊಡಲಾಗಿದೆ. ಕಾರ್ಮಿಕ ಆಯುಕ್ತರನ್ನ ಹಿಡಿದುಕೊಂಡು ಸಮಸ್ಯೆ ಬಗೆಹರಿಸಲಾಗಿದೆ. 199 ರಲ್ಲಿ ಫ್ಯಾಕ್ಟರಿ  ಬೀಗಹಾಕಿದಾಗ ಬಾಕಿ ಕೊಡದ ಕಾರಣ ಆಗ ಸಂಘ ಹಿಡಿತಕ್ಕೆ ತೆಗೆದುಕೊಂಡು ಬಂದ ಆದಾಯದಲ್ಲಿ 40% ರೈತರಿಗೆ 40% ಕಾರ್ಮಿಕರಿಗೆ ಮತ್ತು ೨೦% ಕೋರ್ಟ್ ಗೆ ಹಣ ನೀಡಲಾಗಿತ್ತು. 2009 ರಲ್ಲಿ ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬಂತು. ಕಾರ್ಮಿಕರ ಜೊತೆ ಆಡಳಿತ ಮಂಡಳಿ ಜೊತೆ ಮಾತನಾಡಿ ಸಂಘದ ವಿಶ್ವಾಸಕ್ಕೆ ಪಡೆದಿದ್ದರು. ಮಾಜಿ ಸಂಸದ ಆಯನೂರು ಮಂಜುನಾಥ್  ನೇತೃತ್ವದಲ್ಲಿ ಕಾರ್ಮಿಕರ ಸಮಸ್ಯೆಯನ್ನ‌ ಬಗೆಹರಿಸಲಾಗಿತ್ತು. ಆಗ ಆಡಳಿತ ಮಂಡಳಿಯ ಜೊತೆ ಸಂಘವಿತ್ತು.

ಈಗಲೂ ಮಾಲೀಕ ಪಿಮಣಿವಣ್ಣನ್ ಜೊತೆ ಸಂಘವಿದೆ. ಸಕ್ಕರೆ ಕಾರ್ಖಾನೆ ಬದಲು ಗಾರ್ಮೆಂಟ್ಸ್ ಅಥವಾ ಸ್ಟೀಲ್ ಫ್ಯಾಕ್ಟರಿ ನಿರ್ಮಾಣವಾಗಲಿದೆ. ಅಲ್ಲಿ ಹಿಂದಿನ ಕಾರ್ಮಿಕರಿಗೆ ಅಥವಾ ಕಾರ್ಮಿಕರ ಕುಟುಂಬಕ್ಕೆ ಕೆಲಸ ನೀಡುವುದಾಗಿ‌ಮಾಲೀಕರು ಭವರಸೆ ನೀಡಿದ್ದಾರೆ. ಅದರಂತೆ ನಡೆಯಲಿದೆ ಎಂದು‌ ಸ್ಪಷ್ಟಪಡಿಸಿದರು.

ಇದನ್ನೂ ಓದಿ-https://suddilive.in/archives/5481

Related Articles

Leave a Reply

Your email address will not be published. Required fields are marked *

Back to top button