ಸ್ಥಳೀಯ ಸುದ್ದಿಗಳು

ಈಗಲಾದರೂ ಕಣ್ಣಬಿಡ್ರಪ್ಪಾ… ನೀರು ಸೋರಿಹೋಗ್ತಾಇದೆ…

ಸುದ್ದಿಲೈವ್/ಶಿವಮೊಗ್ಗ

ಕುಡಿಯುವ ನೀರು ಮತ್ತು ಒಳಚರಂಡಿ ನಿಗಮಕ್ಕೆ ಜನ ಛೀ… ಥೂ… ಎಂದು ಉಗಿಯುವ ವರೆಗೆ ಬುದ್ದಿಕಲಿಯುವ ಹಾಗೆ ಕಾಣೋದಿಲ್ಲ. ಎರಡು ಮೂರು ದಿನದಿಂದ ನೀರು ಬರ್ತಾ ಇಲ್ಲ ನೀರು ಬರುವ ಹಾಗೆ ಮಾಡ್ರಪ್ಪ ಎಂದು ಕೇಳಿಕೊಂಡ್ರು ಗಮನ ಹರಿಸದ ನಿಗಮ ಈ ರೀತಿ ನೀರು ವೇಸ್ಟ್ ಆಗ್ತಾ ಇದ್ರೆ ನಿರ್ಲಕ್ಷ್ಯ ತೋರಿದ್ದಾರೆ ಓರುತ್ತಿದ್ದಾರೆ.

ಶಿಕ್ಷಣ ಇಲಾಖೆ, ಕುಡಿಯುವ ನೀರಿನ ನಿಗಮ, ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಜನ ಯಾವಾಗ ರೊಚ್ಚಿಗೆದ್ದು ನಿಲ್ತಾರೋ ದೇವರಿಗೆ ಗೊತ್ತು. ಗಾರ್ಡನ್ ಏರಿಯಾದ 3 ನೇ ತಿರುವಿನಲ್ಲಿ ಮೆಸ್ಕಾಂ ಜಂಕ್ಷನ್ ಬಾಕ್ಸ್ ಬಳಿ ಕಳೆದ ಮೂರು ದಿನಗಳಿಂದ ಕಾರಂಜಿಯಾಗಿ ಹರಿಯುತ್ತಿರುವ ಈ ನೀರು ವೇಸ್ಟ್ ಆಗ್ತಾ ಇದೆ. ಆದರೂ ನಿಗಮ ಸಂಬಂಧವಿಲ್ಲದಂತೆ ಕಣ್ಣು ಮುಚ್ಚಿಕೊಂಡಿದೆ. ಬೆಂಗಳೂರಿನ ರೀತಿ ಯಾವುದಾದರೂ ಅನಾಹುತ ಸಂಭವಿಸಿ ಬಲಿ ಪಡೆಯುವರೆಗೂ ಜಿಲ್ಲಾಡಳಿತ ನಿದ್ರೆಯಿಂದ ಎಚ್ಚರಿಕೆ ವಾಗುವ ಹಾಗೆ ಕಾಣ್ತಾಯಿಲ್ಲ.

ಇದೇ ಲೈನ್ ನ ನವರತ್ನ ಬಾರ್ ಅಂಡ್ ರೆಸ್ಟೋರೆಂಟ್ ಬಳಿಯ ಕ್ಯಾಂಟೀನ್ ಗೆ  ಕಳೆದ 6 ತಿಂಗಳಿಂದ ನೀರು ಬರ್ತಾಯಿಲ್ಲ ಎಂದು ಆ ಮಾಲೀಕ ಕೇಳಿಕೊಂಡರೂ ನಿಮಗದ ಅಧಿಕಾರಿಗಳು  ಗಮನ ಹರಿಸುತ್ತಿಲ್ಲ. ಕ್ಯಾಂಟೀನ್ ಗೆ ನೀರು ಹರಿಸಿದರೆ ಸರ್ಕಾರಕ್ಕಾದರೂ ಬೊಕ್ಕಸ ತುಂಬಲಿದೆ. ಆದರೆ ಅದರ ಬಗ್ಗೆಯೂ ಅಸಡ್ಡೆ ತೋರಲಾಗುತ್ತದೆ. ಹೀಗೆ ವೇಸ್ಟ್ ಆದರೆ ಅಧಿಕಾರಿಗಳಿಗೆ ನೆಮ್ಮದಿ ಸಿಗುತ್ತೆ ಅನಿಸುತ್ತೆ.

ಹೋಗಲಿ! ಈ ಕಾರಂಜಿ ಬಳಿ ಲೈಟಿಂಗ್ ಬಿಟ್ಟರೆ ಯಾವ ಕೆಆರ್ ಎಸ್ ಗೂ ಕಮ್ಮಿ ಇಲ್ಲದಂತೆ ಕಾಣಿಸುತ್ತೆ. ಇದಾದರೂ ಮಾಡಬಹುದು. ಕ್ರೀಡಾಂಗಣದಲ್ಲಿರುವ ನೀರಿನ ಟ್ಯಾಂಕಿಯಿಂದ‌ ನೀರು ಸೋರಿಹೋಗ್ತಾ ಇದೆ. ಈ ಬಗ್ಗೆ ಗಮನಸಹರಿಸಿ ಕ್ರಮ ಜರುಗಿಸಿ ಎಂದು ಮಲೆನಾಡ ಕೇಸರಿ ಪಡೆ ಮನವಿ ಸಲ್ಲಿಸಿದರೂ ಯಾವ ಕ್ರಮವೂ ಇಲ್ಲ. ಈಗಲೂ ನೀರು ಸೋರ್ತಾ ಇದೆ.

ಬೊಮ್ಮನ್ ಕಟ್ಟೆಯ ಕೆಲ ಬಡಾವಣೆಯ ಮನೆಗಳಿಗೆ ಈಗಲೂ ಕುಡಿಯುವ ನೀರು ಸಿಗ್ತಾಇಲ್ಲ. ಮುಂದೆ ಬರುವ ಬೇಸಿಗೆಯಲ್ಲಿ ಈ ನೀರುಗಳನ್ನ ಕಾಪಾಡಿಕೊಳ್ಳಬೇಕಿದೆ. ಹೀಗೆ ನಿರ್ಲಕ್ಷ್ಯ ತೋರಿದರೆ ಕನಿಷ್ಠವಾದರೂ ಮನಸ್ಸಿಗೆ ನಾಟದೆ ಇರುವುದು ನಮ್ಮ ದೌರ್ಭಾಗ್ಯ. ಯಾವುದೇ‌ ಮುಂಜಾಗ್ರತಾ ಕ್ರಮ ಇಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯತನದಿಂದ ಜನ ಒದ್ದಾಡುವ ಹಾಗಿದೆ. ಇಂತಹ‌ ಅಧಿಕಾರಿಗಳು ಇದ್ದರೆಷ್ಟು ಹೋದರೆಷ್ಟು..?

ಇದನ್ನೂ ಓದಿ-https://suddilive.in/archives/3636

Related Articles

Leave a Reply

Your email address will not be published. Required fields are marked *

Back to top button