ಸ್ಥಳೀಯ ಸುದ್ದಿಗಳು

18 ಜನ ದಪ್ಪೇದಾರ್ ಗಳ ವರ್ಗಾವಣೆ

ಸುದ್ದಿಲೈವ್/ಶಿವಮೊಗ್ಗ

ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಅವರು ಒಂದು ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. 18 ಜನಗಳ ಸಿಪಿಸಿ ಮತ್ತು ಸಿಹೆಚ್ ಸಿ ಗಳ ವರ್ಗಾವಣೆ ಮಾಡಿದ್ದಾರೆ. ಕೆಲ ಸಾರ್ವಜನಿಕ ಹಿತಾಸಕ್ತಿಯಲ್ಲಿ ವರ್ಗಾವಣೆ ನಡೆದರೆ ಕೆಲ ವರ್ಗಾವಣೆ ಕೋರಿಕೆ ಮೇಲೆ ಮಾಡಿರುವುದಾಗಿ ವರ್ಗಾವಣೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಒಕ್ಕಣಿಕೆಯಾಕೆ ಎಂದರೆ ಕೆಲ ವರ್ಗಾವಣೆ ಸಾರ್ವಜನಿಕ ಹಿತಾಸಕ್ತಿಯ ಹಿನ್ನಲೆಯಲ್ಲಿ  ಮಾಡಲಾಗಿದೆ ಎಂದು ಉಲ್ಲೇಖಿಸಿರುವುದು ಯಾವುದೇ ಘಳಿಗೆಯಲ್ಲಿ ಬದಲಾಗದಿರಲಿ ಎಂಬುದೇ ವೆಬ್ ಪೋರ್ಟಲ್ ನ ಆಶಯವಾಗಿದೆ.

ಸೆನ್ ಠಾಣೆಯಲ್ಲಿರುವ ಮರ್ದನ್ ಕಿರವಾಡಿಯವರನ್ನ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಇದೇ ಠಾಣೆಯಲ್ಲಿರುವ ಸಂದೀಪ್ ರನ್ನ ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಸಮೀವುಲ್ಲಾರನ್ನ ಭದ್ರಾವತಿ ತಾಲೂಕಿನ ಹಳೇನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ತುಂಗಾನಗರ ಪೊಲೀಸ್ ಠಾಣೆಯಲ್ಲಿರುವ ಕರಬಸಪ್ಪರನ್ನ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯ ಸಂಜಿತ್ ಜಿ.ಯುರನ್ನ ಸಿಇಎನ್ ಠಾಣೆಗೆ ವರ್ಗಾಯಿಸಲಾಗಿದೆ. ಹೊಸನಗರ ತಾಲೂಕಿನ ನಗರ ಠಾಣೆಯಲ್ಲಿರುವ ಅವಿನಾಶ್ ಜೆ.ಜೆರನ್ನ ಸಿಇಎನ್ ಠಾಣೆಗೆ ವರ್ಗಾಯಿಸಲಾಗಿದೆ.

ಸೊರಬ ಠಾಣೆಯ ಕೆಂಚಪ್ಪರನ್ನ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.  ಸಾಗರ ಗ್ರಾಮಾಂತರ ಠಾಣೆಗೆ ಮುಂಬಡ್ತಿ ಆದೇಶದ ನಿರೀಕ್ಷೆಯಲ್ಲಿದ್ದ ರಾಜುನಾಯ್ಕ್ ರನ್ನ ಸೊರಬ ಪೊಲೀಸ್ ಠಾಣೆಗೆ ನಿಯುಕ್ತಿಗೊಳಿಸಲಾಗಿದೆ. ಭದ್ರಾವತಿಯ ಹಳೇನಗರ ಪೊಲೀಸ್ ಠಾಣೆಯ ನಾರಾಯಣ ಸ್ವಾಮಿ ಜೆ.ಸಿ, ತೀರ್ಥಹಳ್ಳಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯತೀಶ್ ಕೆ.ಬಿರನ್ನ ಹಳೇನಗರ ಪೊಲೀಸ್ ಠಾಣೆಗೆ ನಿಯುಕ್ತಿಗೊಳಿಸಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿರುವ ಲಕ್ಷ್ಮಣ್ ಕಲ್ಲೊಳ್ಳಿರನ್ನ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ‌ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ನಿರೀಕ್ಷೆಯಲ್ಲಿರುವ ಸಧ್ಯಕ್ಕೆ ವಿನೋಬ ನಗರ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ರಾಜ.ಕೆ,

ಮತ್ತು ವಿಜಯ ಕುಮಾರ್ ಓಲಿರನ್ನ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಮುಂದುವರೆಯಲಿದ್ದಾರೆ. ಮಾಳೂರು ಠಾಣೆಯಲ್ಲಿರುವ ದೀಪಾ ಎಂ.ಕೆ ಮಾಳೂರು ಠಾಣೆಯಲ್ಲಿಯೇ ಮುಂದುವರೆಯಲಿದ್ದಾರೆ. ಆಗುಂಬೆ ಪೊಲೀಸ್ ಠಾಣೆಯಲ್ಲಿರುವ ರವಿನಾಯ್ಕ್ ಪಿ ರನ್ನ ಶಿಕಾರಿಪುರ ಪೊಲೀಸ್ ಠಾಣೆಗೆ, ಮಾಳೂರು ಠಾಣೆಯಲ್ಲಿರುವ ಚಂದ್ರಪ್ಪರನ್ನ ದೊಡದಡಪೇಟೆ ಪೊಲೀಸ್ ಠಾಣೆಗೆ

ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯಲ್ಲಿರುವ ಮಧು ವಿ.ವೆಂಕಪ್ಪನವರ್ ರನ್ನ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಗೆ, ಆಗುಂಬೆ ಪೊಲೀಸ್ ಠಾಣೆಯಲ್ಲಿರುವ ಸಂಜಯ್ ಬಾಬು ಕಾಂಬಳೆರನ್ನ ತೀರ್ಥಹಳ್ಳಿ ಪೊಲೀಸ್ ಠಾಣೆಗೆ, ತುಂಗ ನಗರ ಪೊಲೀಸ್ ಠಾಣೆಯಲ್ಲಿರುವ ರಾಜೇಶ್ ಗೌಡ ಪಾಟೀಲ್ ರನ್ನ ದೊಡ್ಡಪೇಟೆ ಪೊಲೀಸ್ ಠಾಣೆಗೆ ನಿಯುಕ್ತಿಗೊಂಡಿದ್ದಾರೆ.

ಇಲ್ಲಿ ಮೂವರನ್ನ ಸಾರ್ವಜನಿಕ ಹಿತಾಸಕ್ತಿಯಲ್ಲಿ ವರ್ಗಾವಣೆಯಾಗಿದ್ದಾರೆ. ಈ ಸಾರ್ವಜನಿಕ ಹಿತಾಸಕ್ತಿ ಎಂದರೆ ದೂರುಗಳಿದ್ದ ಸಿಪಿಸಿ ಮತ್ತು ಸಿಹೆಚ್ ಸಿಗಳನ್ನ‌ ವರ್ಗಾಯಿಸಲಾಗಿದೆ. ಈ ಆದೇಶ ಬದಲಾಗದಿರಲಿ.

ಇದನ್ನೂ ಓದಿ-https://suddilive.in/archives/3633

Related Articles

Leave a Reply

Your email address will not be published. Required fields are marked *

Back to top button