ಸ್ಥಳೀಯ ಸುದ್ದಿಗಳು

ಲೋಕಸಭಾ ಚುನಾವಣೆ ಹಿನ್ನಲೆ 248 ಪಿಐಗಳ ವರ್ಗಾವಣೆ

ಸುದ್ದಿಲೈವ್/ಶಿವಮೊಗ್ಗ

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ 248 ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿದೆ. 135 ಪಿಎಸ್ಐಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲಿ 11 ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆಯಾಗಿದೆ. ಲೋಕ ಸಭಾ ಚುನಾವಣೆ ಮುಗಿದ ನಂತರ ಅಂದರೆ ಸುಮಾರು ಮೂರರಿಂದ ನಾಲ್ಕು ತಿಂಗಳು ಇಲ್ಲಿನ ಪಿಐಗಳು ಹೊರ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕಿದೆ.

ದಾವಣಗೆರೆಯ ಆಜಾದ್ ನಗರ ಪೊಲೀಸ್ ಠಾಣೆಯ ಪಿಐ ಬಾಲಚಂದ್ರ ನಾಯಕ್ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲಕ್ಷ್ಮೀಪತಿ ಹಾವೇರಿಯ ಹಿರೇಕೆರೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.

ಕುಂಸಿ ಪೊಲೀಸ್ ಠಾಣೆಗೆ ಹಿರೇಕೆರೂರಿನ ಬಸವರಾಜ ಪಿಎಸ್ ವರ್ಗಾವಣೆಯಾದರೆ ಅಲ್ಲಿದ್ದ ಪಿಐ ಹರೀಶ್ ಪಟೇಲ್ ರನ್ನ ಚಿತ್ರದುರ್ಗ ನಗರ ಠಾಣೆಗೆ ವರ್ಗಾಯಿಸಲಾಗಿದೆ. ಚಿತ್ರದುರ್ಗದ ನಗರ ಠಾಣೆಯಲ್ಲಿದ್ದ ಪಿಐ ತಿಪ್ಪೇಸ್ವಾಮಿಗಳನ್ನ ಶಿವಮೊಗ್ಗ ಸಿಇಎನ್ ಠಾಣೆಗೆ ವರ್ಗಾಯಿಸಿದ್ದಾರೆ.

ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿರುವ ಪಿಐ ದೀಪಕ್ ರನ್ನ ಚಿತ್ರದುರ್ಗದ‌ ತಿರುವನೂರು ಪೊಲೀಸ್‌ಠಾಣೆಗೆ ವರ್ಗಾಯಿಸಲಾಗಿದೆ. ಸೊರಬದ ಪಿಐ ರಾಜಶೇಖರಯ್ಯರನ್ನ ಚಿತ್ರದುರ್ಗದ ತಳುಕು ಪೊಲೀಸ್ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಪೊಲೀಸ್ ಠಾಣೆಯ ಪಿಐ ರಮೆಶ್ ರಾವ್‌ಅವರನ್ನ‌ಸೊರಬ ಠಾಣೆಯ‌ ಪಿಐ‌ ಆಗಿ ವರ್ಗಾವಣೆಯಾಗಿದ್ದಾರೆ. ಶಿವಮೊಗ್ಗ ಸಂಚಾರಿ‌ ಪೊಲೀಸ್ ಠಾಣೆಯ ಪಿಐ ಸಂತೋಷ್ ಕುಮಾರ್ ಅವರನ್ನ ದಾವಣಗೆರೆ ಬಸವ‌ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಕೋಟೆ ಪಿಐ ಬರ್ತಾರಾ?

ಇವರ ಜಾಗಕ್ಕೆ ಚಿತ್ರದುರ್ಗದ ತುರುವನೂರು ಪೊಲೀಸ್ ಠಾಣೆಯ ಪಿಐ ಲತಾರವರನ್ನ ನಿಯೋಜಿಸಲಾಗಿದೆ. ಸ್ವಾರಸ್ಯಕರವೆಂದರೆ ಕೊಟೆ ಪೊಲೀಸ್ ಠಾಣೆಯ ಪಿಐ ಅವರ ಸ್ಥಾನಕ್ಕೆ ನಿಯುಕ್ತಿಗೊಳ್ತಾರಾ ಅಥವಾ‌ನಾಮಕಾವಸ್ಥೆಗೆ ವರ್ಗಾವಣೆ ಮಾಡಲಾಗುತ್ತಾ ಎಂಬುದೇ ಕುತೂಹಲಕಾರಿಯಾಗಿದೆ.‌

2023 ರ ವಿದಾನಸಭಾ ಚುನಾವಣೆಯ ವೇಳೆ ಶಿವಪ್ರಸಾದ್ ಅವರನ್ನ ಕೋಟೆ ಪೊಲೀಸ್ ಠಾಣೆಯ ಪಿಐ ಆಗಿ ವರ್ಗಾವಣೆ ಮಾಡಲಾಗಿತ್ತು. ಆದರೆ ಅವರನ್ನ ಗಣಪತಿ ಹಬ್ಬದ ಮುಗಿಯುವ ವರೆಗೂ ಕೊಟೆ ಠಾಣೆ ಪಿಐ ಆಗಿ  ಕರ್ತವ್ಯ ನಿರ್ವಹಿಸುವಂತಾಗಿತ್ತು.

ಚಂದ್ರಶೇಖರ್ ಎಂಬ ಪಿಐ 2023 ರ ವೇಳೆ ವರ್ಗಾವಣೆಯಾಗಿ ಒಂದು ವರ್ಷ ಕಳೆದಿದೆ. ಒಂದು ವರ್ಷದಿಂದ ಕೋಟೆ ಪೊಲೀಸ್ ಠಾಣೆಯ ಖಾಯಂ ಆಗಿ ಪಿಐ ಆಗಿ ನಿಯೋಜನೆಗೊಳ್ಳುವರು ಬರ್ತಾ ಇಲ್ಲ. ಈಗ ದಾವಣಗೆರೆ ಬಸವ ನಗರ ಪೊಲೀಸ್ ಠಾಣೆಯ ಪಿಐ ಗುರುಬಸವರಾಜ್ ಅವರನ್ನ‌ ವರ್ಗಾಯಿಸಲಾಗಿದೆ.  ಅವರು‌ ಈ ಠಾಣೆಗೆ ನಿಯೋಜನೆಗೊಳ್ತಾರ ಅಥವಾ ಪ್ರಭಾರಿಯಾಗಿ ದೊಡ್ಡಪೇಟೆ ಪಿಐ ರವಿ ಸಂಗನಗೌಡ ಪಾಟೀಲ್ ಅವರೇ ಮುಂದುವರೆಯಲಿದ್ದಾರಾ? ಕಾದು ನೋಡಬೇಕಿದೆ.‌

ಇದರ ಜೊತೆ 135 ಸಬ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button