ಸ್ಥಳೀಯ ಸುದ್ದಿಗಳು

ಹೆಚ್ಚಾಯ್ತು ಮಲೆನಾಡಿನಲ್ಲಿ ಟೋಲ್ ನ ಬಿಸಿ!

ಸುದ್ದಿಲೈವ್/ಶಿವಮೊಗ್ಗ

ಮಲೆನಾಡಿನಲ್ಲಿ ನಾಲ್ಕು ಪ್ರಮುಖ ಅಂಶಗಳು ಬಿರು ಬಿಸಿಲಿನಲ್ಲಿ ಜನರನ್ನ ಸುಡಲಾರಂಭಿಸಿದೆ. ಒಂದು ಚುನಾವಣೆ ದಿನಾಂಕ ಘೋಷಣೆ ಆದ ಕಾರಣ ರಾಜಕೀಯ ಕ್ಷೇತ್ರ, ಸುಡುವ ರಣ ಬಿಸಿಲು, ಇದರಿಂದ ಉಂಟಾಗಿರುವ ಬರ ಹಾಗೂ ಮತ್ತೊಂದು ಲೇಟೆಸ್ಟ್ ಸಂಗತಿ ಎಂದರೆ ಶಿವಮೊಗ್ಗ-ಸವಳಂಗದ ಮಧ್ಯೆಯ ಟೋಲ್ ಬೇಸಿಗೆಯಲ್ಲಿ ಜನರನ್ನ ಸುಡಲಾರಂಭಿಸಿದೆ.

ಶಿವಮೊಗ್ಗದ ಕಲ್ಲಾಪುರದ ಬಳಿಯಿರುವ ರಾಜ್ಯ ಹೆದ್ದಾರಿಯ ಟೋಲ್ ಆರಂಭಿಸಲಾಗಿದೆ. ಆರಂಭಗೊಂಡ 18 ದಿನಗಳ ನಂತರ ಖಾಸಗಿ ಬಸ್ ನವರು ಇಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ಟೋಲ್ ಕಟ್ಟೊಲ್ಲ ಎಂದು ಪ್ರತಿಭಟಸಿದ್ದಾರೆ.ಇತರೆ ವಾಹನಗಳಿಗೂ ಮುಂದೆ ಸಾಗದಂತೆ ಅಡ್ಡಿಪಡಿಸಿ ಪ್ರತಿಭಟಿಸಲಾಗುತ್ತಿದೆ.

ಇಂದು ಬೆಳಿಗ್ಗೆಯಿಂದ ಖಾಸಗಿ ಬಸ್ ನವರು ಪ್ರತಿಭಟಿಸಿ ಟೋಲ್ ಕಟ್ಟೋದಿಲ್ಲ ಎಂದು ಆಗ್ರಹಿಸಿದ್ದಾರೆ. ಏಕಮುಖ ಸಂಚಾರಕ್ಕೆ ಬಸ್ ಗಳಿಗೆ 125 ರೂ ನಿಗದಿಯಾದರೆ, ಇದು ದ್ವಿಮುಖ ಸಂಚಾರಕ್ಕೆ ಹೆಚ್ಚಾಗಲಿದೆ. ಇದರಿಂದ ಟೋಲ್ ಗಾಗಿ ತಿಂಗಳ 5-10 ಸಾವಿರ ರೂಗಳು ಕೈಬಿಡಲಿದೆ.

ಈಗಾಗಲೇ ಕೆಎಸ್ ಆರ್ ಟಿ ಸಿ ಬಸ್ ಗಳಲ್ಲಿ ಸರ್ಕಾರ ಶಕ್ತಿ ಯೋಜನೆ‌ ಘೋಷಿಸಿದ ನಂತರ ಖಾಸಗಿ ಬಸ್ ಗಳು ಪ್ರಯಾಣಿಕರಿಲ್ಲದೆ ಖಾಲಿಖಾಲಿ ಓಡಾಡುತ್ತಿವೆ. ನಾವು ಓಡಾಡುವ 70 ಕಿಮಿ ದೂರದ ಬಸ್ ಗಳು ತಿಂಗಳಿಗೆ 5 ಸಾವಿರಗೂ ಹೆಚ್ಚು ಹಣ ಕಟ್ಟಿದರೆ ನಾವು ಬದುಕುವುದು ಹೇಗೆ ಎಂದು ಮಾಲೀಕರು ಪ್ರಶ್ನಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ಮಂಡಳಿ ಈ ಟೋಲ್ ಆರಂಭಿಸಿದೆ. ಬಿಜೆಪಿಯ ಅವಧಿಯಲ್ಲಿ ಟೋಲ್ ಆರಂಭಕ್ಕೆ ಗ್ರೀನ್ ಸಿಗ್ನಲ್ ದೊರೆತಿದೆ. ಈಗ ಖಾಸಗಿಬಸ್ ಮಾಲೀಕರನ್ನ ಈ ಟೋಲ್ ಕಿತ್ತು ತಿನ್ನಲು ಆರಂಭಿಸಿದೆ.

ಇದನ್ನೂ ಓದಿ-https://suddilive.in/archives/11026

Related Articles

Leave a Reply

Your email address will not be published. Required fields are marked *

Back to top button