ಸ್ಥಳೀಯ ಸುದ್ದಿಗಳು

ಸಿಇಒ ವಿರುದ್ಧದ ಘೋಷಣೆ ಓಕೆ, ಆದರೆ ಕಾಂಗ್ರೆಸ್ ಪಕ್ಷದ‌ಮುಖಂಡರಿಂದ ಸರ್ಕಾರದ ವಿರುದ್ಧ ಘೋಷಣೆ ಯಾಕೆ?

ಸುದ್ದಿಲೈವ್/ಶಿವಮೊಗ್ಗ

ತಾಲೂಕು ಪಂಚಾಯಿತಿಯ ಕ್ರಿಯಾಯೋಜನೆಯ ಅನುದಾನವನ್ನ ಜನಪ್ರತಿನಿಧಿಗಳಿಗೆ‌ ಬಿಡುಗಡೆಗೊಳಿಸಿ ಕೆಲಸ ಮಾಡಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರ ಬೇಡಿಕೆಗೆ ಸೊಪ್ಪಾಕದ ಜಿಪಂ ಸಿಇಒ ಸುಧಾಕರ್ ಲೋಖಂಡೆ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಮುಖಂಡರು ಕೂಗಿರುವುದು ಕುತೂಹಲ ಮೂಡಿಸಿದೆ.

ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್ ಗೆ ಚುನಾವಣೆ ನಡೆಯದೆ 2 ವರ್ಷ ಕಳೆದಿದೆ. ಅಭಿವೃದ್ಧಿಗೆ ಬಿಡುಗಡೆಯಾದ ಹಣವನ್ನ ಜನಪ್ರತಿನಿಧಿಗಳ ಮೂಲಕ ನಡೆಸಲು ಅವಕಾಶವಿದ್ದರೂ ಸಿಇಒ ಸುಧಾಕರ್ ಅವಕಾಶ ಕಲ್ಪಿಸದೆ ಇಲಾಖೆಯ ಸಚಿವರ ಆದೇಶವನ್ನ ದಿಕ್ಕರಿಸಿ ಏಕವಚನದಲ್ಲಿ ಮಾತನಾಡಿಸಿದ್ದಾರೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಮತ್ತು ಸಿಇಒ ವಿರುದ್ಧ ದಿಕ್ಕಾರ ಕೂಗಲಾಗಿದೆ.

ಕಾಂಗ್ರೆಸ್ ಪಕ್ಷದ ಶಿವಮೊಗ್ಗ ಗ್ರಾಮಾಂತರ ಭಾಗದ ಪರಾಜಿತ ಅಭ್ಯರ್ಥಿ ಶ್ರೀನಿವಾಸ್ ಕರಿಯಣ್ಣ, ಮಾಜಿ ಜಿಪಂ ಅಧ್ಯಕ್ಷ ಶಾಂತವೀರ ನಾಯ್ಕ್, ಗಿರೀಶ್ ಮೊದಲಾದವರು ಇಂದು ಜಿಪಂ ಸಿಇಒರನ್ನ ಭೇಟಿಯಾಗಿದ್ದರು. ಈ ಮೊದಲು 15 ಬಾರಿ ಭೇಟಿ ಮಾಡಿದ್ದ ನಿಯೋಗ ಸಂಬಂಧಪಟ್ಟ ಪತ್ರ ರವಾನಿಸಿದರೂ ಜನಪ್ರತಿನಿಧಿಗಳಿಗೆ ನೀಡಲು ಆಗುವುದಿಲ್ಲ ಎಂದು ಸಿಇಒ ತಿಳಿಸಿದ್ದಾರೆ.

ಇದು ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ. ಸಿಇಒ ಮತ್ತು ಸರ್ಕಾರದ ವಿರುದ್ಧವೇ ಮುಖಂಡರು ಘೋಷಣೆ ಕೂಗಿದ್ದಾರೆ. ಆದರೆ ಸಿಇಒ ವಿರುದ್ಧ‌ ಘೋಷಣೆ ಕೂಗಿದ್ದು ಒಕೆ ಎನಿಸಿಕೊಂಡರೂ ಸರ್ಕಾರದ ವಿರುದ್ಧ ಯಾಕೆ ಎಂಬುದೇ ಕುತೂಹಲ ಮೂಡಿಸಿದೆ.

ಕಾರಿನಲ್ಲಿ ಮನೆಗೆ ಹೊರಟಿದ್ದ ಸಿಇಒ ಕಾರಿಗೆ ಅಡ್ಡ ಹಾಕಲಾಗಿದೆ. ಸಿಇಒ ಪ್ರತಿಭಟನೆಗೆ ಹೆದರಿ ತಮ್ಮ ಚೇಂಬರ್ ನ ಅಂಟಿ ಚೇಂಬರ್ ಒಳಗೆ ಹೋಗಿ ಪೊಲೀಸರಿಗೆ ಕರೆದಿದ್ದಾರೆ. ಡಿವೈಎಸ್ಪಿ ನೇತೃತ್ವದ ಪೊಲೀಸ್ ಪಡೆ ಜಿಪಂ ಸಿಇಒ ರಕ್ಷಣೆಗೆ ಮುಂದಾಗಿದ್ದಾರೆ. ನಂತರ ಹೆಚ್ ಸಿ ಯೋಗೀಶ್ ಮಧ್ಯಪ್ರವೇಶದ ನಂತರ ಸಮಾಧಾನಕರ ಸಭೆ ನಡೆದಿದೆ.

ಇದನ್ನೂ ಓದಿ-https://suddilive.in/archives/5507

Related Articles

Leave a Reply

Your email address will not be published. Required fields are marked *

Back to top button