ಕ್ರೈಂ ನ್ಯೂಸ್

ಬ್ಯಾಂಕ್ ಗೆ ಮಕ್ಮಲ್ ಟೋಪಿ

ಸುದ್ದಿಲೈವ್/ಶಿವಮೊಗ್ಗ

ಬ್ಯಾಂಕ್ ಗೆ ಮಕ್ಮಲ್ ಟೋಪಿ ಹಾಕಿರುವವರ ವಿರುದ್ಧ ಬ್ಯಾಂಕ್ ಮ್ಯಾನೇಜರ್ ಮುಕೇಶ್ ಕುಮಾರ್ ಸಿಂಗ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಗನ್.ಕೆ.ಎಸ್. ಪವನ್ ಕುಮಾರ್ ಕೆಎಸ್, ಶ್ರೀಮತಿ ನಯನ, ಮಂಜುನಾಥ ಟಿ.ಕೆ, ಶ್ರೀಮತಿ ಜ್ಯೋತಿ ಮತ್ತು ಹರೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

LLR ರಸ್ತೆಯಲ್ಲಿರುವ  ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆ.ಎಸ್.ಗಗನ್ ಬಿನ್ ಸೀನಪ್ಪ, ನಯನಾ ಕೋಂ ಗಗನ್ ಕೆ.ಎಸ್, ಪವನ್ ಕುಮಾರ್ K.S ಬಿನ್ ಸೀನಪ್ಪ, ಮಂಜುನಾಥ ಟಿ ಕೆ,  ಬಿ.ಎನ್ ಶ್ರೀಮತಿ ಜ್ಯೋತಿ ಟಿ.ಕೆ. W/o ಕೃಷ್ಣಮೂರ್ತಿ H. ಹಾಗೂ ಹರೀಶ ಎಸ್ ರವರು 18 ಖಾತೆಗಳನ್ನ ಆರಂಭಿಸಿ ಲೇಪಿತ ಚಿನ್ನಾಭರಣಗಳನ್ನು ಒತ್ತೆ ಇಟ್ಟು ಚಿನ್ನದ ಆಭರಣಗಳ ಭದ್ರತೆಯ ಮೇಲಿನ ಚಿನ್ನದ ಸಾಲವನ್ನು ಪಡೆದಿದ್ದಾರೆ.

ಅದರ ಗಗನ್ K.S ಬ್ಯಾಂಕ್ ನ ಶಾಖೆಗೆ ಹೊಸ ಗ್ರಾಹಕರಾಗಿ ಆಗಮಿಸಿ ಚಿನ್ನದ ಸಾಲದ ವಿವರಗಳ ಬಗ್ಗೆ ವಿಚಾರಿಸಿದ್ದಾನೆ.  ಮತ್ತು ಅಗತ್ಯ KYC (ಆಧಾರ್ ಕಾರ್ಡ್ ಮತ್ತು PAN ಕಾರ್ಡ್) ವಿವರಗಳನ್ನು ಒದಗಿಸುವ ಮೂಲಕ  ಉಳಿತಾಯ ಖಾತೆಯನ್ನು ತೆರೆದಿದ್ದಾನೆ. ಅದೇ ದಿನದಲ್ಲಿ, ಚಿನ್ನದ ಸಾಲವನ್ನು ನಾಲ್ಕು ಚಿನ್ನದ ಸಾಲಗಳನ್ನು ಪಡೆದಿದ್ದಾನೆ.

ಇವರ ನಂತರ ಗಗನ್ ಅವರು ಉಳಿತಾಯ ಖಾತೆಯನ್ನು ತೆರೆಯಲು ತಮ್ಮ ಕುಟುಂಬ ಸದಸ್ಯರನ್ನು ಕರೆತಂದು ಚಿನ್ನದ ಸಾಲವನ್ನು ಪಡೆದಿದ್ದಾನೆ. ಪವನ್ ಕುಮಾರ್ K. S, ಶ್ರೀಮತಿ ನಯನಾ N ಕೋಂ ಗಗನ್‌,  ಶ್ರೀಮತಿ ಜ್ಯೋತಿ ಕೋಂ H. ಕೃಷ್ಣಮೂರ್ತಿ ಭದ್ರಾವತಿ ಶಾಖೆಯಲ್ಲಿ ಖಾತೆ ಹೊಂದಿದ್ದರು.‌ನಂತರ ಭದ್ರಾವತಿ ಶಾಖೆಯಿಂದ LLR ರಸ್ತೆ ಶಾಖೆಗೆ ವರ್ಗಾವಣೆ ಆಗಿದೆ.

ಎಲ್ಲಾ ಸಾಲಗಾರರು ಒಟ್ಟು 1898.60 ಗ್ರಾಂ ಒಟು ತೂಕ ಮೇಲೆ ಒಟ್ಟು ರೂ.79.81 ಲಕ್ಷಗಳ ಸಾಲದ ಹಣ ಪಡೆದಿದ್ದರು, ಎಲಾ ಚಿನ್ನದ ಸಾಲಗಳನ್ನು ಪಡೆದ ನಂತರ, ಗಗನ್  1.50 ಕೋಟಿ ರೂ.ಗಳ ಚಿನ್ನದ ಸಾಲವನ್ನು ಹೆಚ್ಚಿಗೆ ಪಡೆಯಲು ಮತ್ತೆ ಬ್ಯಾಂಕ್ ನ್ನ ಮ್ಯಾನೇಜರ್ ಸಿಂಗ್ ರನ್ನ ಸಂಪರ್ಕಿಸಿದ್ದಾನೆ.

ಮ್ಯನೇಜರ್ ಅವರು ಬೇರೆಯವರಿಂದ ಚಿನ್ನದ ಮರುಮೌಲ್ಯ ಮಾಪನ ಮಾಡಿಸಿದಾಗ 1898.60 ಗ್ರಾಂ ಚಿನ್ನಭರಣಗಳಲ್ಲಿ ಕೇವಲ 386.60 ಗ್ರಾಂ ಚಿನ್ನಾಭರಣ ಮಾತ್ರ ಅಸಲಿನ ಚಿನ್ನಾಭರಣಗಳಿದ್ದು ಉಳಿದ 1.5 ಕೆಜಿ ಚಿನ್ನಾಭರಣಗಳು ಲೇಪಿತ ಅಂದರೆ ನಕಲಿ ಚಿನ್ನಾಭರಣ ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಮ್ಯಾನೇಜರ್ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/3007

Related Articles

Leave a Reply

Your email address will not be published. Required fields are marked *

Back to top button