ರಾಜ್ಯ ಸುದ್ದಿಗಳು

ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ-ಶೇ.97.79 ಗುರಿ ಸಾಧನೆ

ಸುದ್ದಿಲೈವ್/ಶಿವಮೊಗ್ಗ

ರಾಜ್ಯಾದ್ಯಂತ ನಡೆಯುತ್ತಿರುವ ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಶಿವಮೊಗ್ಗದಲ್ಲಿ ಅತ್ಯುತ್ತಮ ರೆಸ್ಪಾನ್ಸ್ ದೊರೆತಿದೆ. 7 ತಾಲೂಕಿನಲ್ಲಿ ಶೇ.97.79 ರಷ್ಟು ಗುರಿ ಸಾಧಿಸಲಾಗಿದೆ.

ಇಂದಿನಿಂದ ಮೂರು ದಿನಗಳ ಕಾಲ ಪಲ್ಸ್ ಪೋಲಿಯೋ ಅಭಿಯಾನ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ 1,20,626 ಮಕ್ಕಳಿಗೆ ಲಸಿಕೆ ಹಾಕಿಸಲು ಗುರಿಹೊಂದಲಾಗಿತ್ತು. ಆದರೆ ಇವತ್ತು ಒಂದೇ ದಿನ 1,17, 957 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಐದು ವರ್ಷದ ಒಳಗಿನ ಮಕ್ಕಳಿಗಾಗಿ ಈ ಅಭಿಯಾನ ನಡೆದಿದ್ದು ಶೇ. 97.79 ರಷ್ಟು ಗುರಿ ಸಾಧಿಸಲಾಗಿದೆ.

ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸೇರಿದಂತೆ 1037 ಕೇಂದ್ರಗಳನ್ನ ತೆರೆದು ಐದು ವರ್ಷದ ಮಕ್ಕಳಿಗೆ ಲಸಿಕೆ ನೀಡಾಗಿತ್ತು. ಭದ್ರಾವತಿಯಲ್ಲಿ 24,424 ಮಕ್ಕಳಿಗೆ ಲಸಿಕೆ ಹಾಕಲು ಗುರಿಹೊಂದಲಾಗಿತ್ತು. ಇದರಲ್ಲಿ 23495 ಮಕ್ಕಳಿಗೆ ಲಸಿಕೆ ನೀಡಲಾಗಿದೆ.

ಅದರಂತೆ ಹೊಸನಗರ ತಾಲೂಕಿನಲ್ಲಿ 7310 ಮಕ್ಕಳಲ್ಲಿ 7006 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಸಾಗರದಲ್ಲಿ 12547 ಮಕ್ಕಳಲ್ಲಿ 12141 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಶಿಕಾರಿಪುರದಲ್ಲಿ 19297 ಮಕ್ಕಳಲ್ಲಿ 18648 ಮಕ್ಕಳಿಗೆ, ಶಿವಮೊಗ್ಗ ತಾಲೂಕಿನಲ್ಲಿ 37623 ಮಕ್ಕಳಲ್ಲಿ 37114 ಮಕ್ಕಳಿಗೆ ನೀಡಲಾಗಿದೆ.

ಸೊರಬದಲ್ಲಿ ಹೆಚ್ಚಿನ ಗುರಿ ಸಾಧಿಸಲಾಗಿದೆ. 11847 ಮಕ್ಕಳಲ್ಲಿ 12055 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ತೀರ್ಥಹಳ್ಳಿಯಲ್ಲಿ 7578 ಮಕ್ಕಳಲ್ಲಿ 7498 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ನಾಳೆ ಮನೆ ಮನೆಗೆ ಆಶಾ ಕಾರ್ಯಕರ್ತರು ತೆರಳಿ ಲಸಿಕೆ ಹಂಚಲಿದ್ದಾರೆ.

ಇದನ್ನೂ ಓದಿ-https://suddilive.in/archives/9986

Related Articles

Leave a Reply

Your email address will not be published. Required fields are marked *

Back to top button