ಶುಂಠಿ ಬೆಳಗಾರರಿಗೆ ಜಿಲ್ಲಾಧಿಕಾರಿಗಳ ವಿಶೇಷ ಮನವಿ

ಸುದ್ದಿಲೈವ್/ಶಿವಮೊಗ್ಗ

ಬರದ ಛಾಯೆಯಲ್ಲಿರುವ ಜಿಲ್ಲೆಗೆ ಜಾನುವಾರುಗಳ ಮೇವಾದ ಹುಲ್ಲಿನ ಬಗ್ಗೆ ಈಗ ಜಿಲ್ಲಾಧಿಕಾರಿಗಳು ಮಹತ್ವದ ಮನವಿಯೊಂದನ್ನ ಮಾಡಿಕೊಂಡಿದ್ದಾರೆ. ವಾಣಿಜ್ಯ ಬೆಳೆ ಶುಂಠಿಯನ್ನ ಬೆಳೆಯವ ವೇಳೆ ರೈತರು ಒಣ ಹುಲ್ಲು ಬಳಸುವ ಬದಲು ಜಾನುವಾರುಗಳ ಆಹಾರವಲ್ಲದ ವಸ್ತುಗಳನ್ನ ಬಳಸಲು ಸೂಚನೆ ನೀಡಿದ್ದಾರೆ.
ಈ ಸೂಚನೆ ಬರದ ಹಿನ್ನಲೆಯಲ್ಲಿ ಉತ್ತಮ ಆದೇಶವಾದರೂ, ರೈತರು ಪರ್ಯಾಯ ವ್ಯವಸ್ಥೆಗೆ ಒಗ್ಗುತ್ತಾರಾ ಎಂಬುದೇ ಕುತೂಹಲದ ಪ್ರಶ್ನೆಯಾಗಿದೆ. ಶುಂಠಿ ಬೆಳೆಗೆ ರೈತರು ಹೊದಿಕೆಯಾಗಿ ಒಣಹುಲ್ಲನ್ನಬಳಸುತ್ತಿದ್ದರು. ಒಣಹುಲ್ಲು ಬಳಕೆ ಮಾಡುವುದನ್ನ ನಿಯಂತ್ರಿಸಿ ಪರ್ಯಾಯವಾಗಿ ಅಡಿಕೆಗರಿಗಳು/ಕಾಡಿನಲ್ಲಿ ಸಿಗುವ ದರಗಲು/ಇತ್ಯಾದಿ ಜಾನುವಾರ ಮೇವುಗಳಲ್ಲದ ಪದಾರ್ಥ ಬಳಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಇದರ ಜೊತೆಗೆ ರೈತರು ತಮ್ಮ ಜಾನುವಾರುಗಳಿಗೆ ಬೇಕಾದ ಅಗ್ಯತ್ಯ ಮೇವುಗಳನ್ನ ಮುಂದಿನ ಬೇಸಿಗೆ ದಿನಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಿದ್ದಾರೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯ ಏಳು ತಾಲೂಕುಗಳು ಬರವೆಂದು ಘೋಷಿಸಲಾಗಿದೆ. ರಾಜ್ಯದಲ್ಲಿ 191 ತಾಲೂಕುಗಳು ಬರ ಎಙದು ಘೋಷಿಸಲಾಗಿದೆ. ಭತ್ತದ ಬೆಳೆ ಈ ಬಾರಿಕೊರತೆಯಾಗುವುದರಿಂದ ಒಣ ಹುಲ್ಲು ಕೊರತೆಯಾಗುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ-https://suddilive.in/archives/1279
