ರಾಜಕೀಯ ಸುದ್ದಿಗಳು

ಭದ್ರಾವತಿ ಗಲಾಟೆ ವಿಚಾರ ಆಯನೂರು ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ.ಜನ ಅಧಿವೇಶನದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬರಗಾಲದ ಬಗ್ಗೆ, ಕುಡಿಯುವ ನೀರು, ದನಕರುಗಳ ಮೇವು ಸಮಸ್ಯೆ ಬಗ್ಗೆ ವಿಪಕ್ಷ ಗಮನ ಸೆಳೆಯುತ್ತದೆ ಎಂಬ ನಿರೀಕ್ಷೆ ಇತ್ತು. ಇನ್ನು ನಾಲ್ಕು ದಿನದಲ್ಲಿ ಅಧಿವೇಶನ ಮುಗಿಯುತ್ತದೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತಿಳಿಸಿದರು.

ತಮ್ಮ‌ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ವಿಪಕ್ಷವಾಗಿ ಬಿಜೆಪಿ ಅತ್ಯಂತ ವಿಫಲವಾಗಿದೆ. ಸರಕಾರದ ವಿರುದ್ದ ಹೋರಾಟ ಮಾಡುವ ಬಿಜೆಪಿ ವಿಫಲವಾಗಿದೆ ಎಂದರು.

ಚುನಾವಣೆ ನಂತರ ಎರಡನೇ ಅಧಿವೇಶನ ಇದಾಗಿದೆ. ವಿಪಕ್ಷ ನಾಯಕ ಆಯ್ಜೆಯಲ್ಲಿ ಸರ್ವ ಸಮ್ಮತ ಇಲ್ಲದೇ ಸ್ಫೋಟವಾಗಿದೆ. ಯತ್ನಾಳ್ ಸೇರಿದಂತೆ ಇತರರು ಬಹಿರಂಗವಾಗಿ ನೋವು ತೋಡಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಉಪ ನಾಯಕರು ಇಲ್ಲ, ಮುಖ್ಯ ಸಚೇತಕರು ಇಲ್ಲ ಎಂದರು.

ವಿಧಾನ ಪರಿಷತ್ ನಲ್ಲಿ ವಿಪಕ್ಷ ನಾಯಕರಿಲ್ಲ. ಬಿಜೆಪಿ ವಿಪಕ್ಷವಾಗಿ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಬಿಜೆಪಿ ಸಂಸದರು ಸಂಸತ್ತಿನಲ್ಲಿ ನೀರಾವರಿ ಯೋಜನೆ ಬಗ್ಗೆ, ಬರಗಾಲದ ಬಗ್ಗೆ ಚರ್ಚೆ ಮಾಡಿಲ್ಲ. ಸಂಸತ್ತಿನಲ್ಲಿ ‌ಪಾಲ್ಗೊಳ್ಳುತ್ತಿಲ್ಲ, ಕೇವಲ ಸನ್ಮಾನ ಸಭೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ

ಪುಡಿ ರೌಡಿ ಮಣಿಕಂಠನ ವಿಷಯ ಮುಂದಿಟ್ಟುಕೊಂಡು ಸದನ ಬಾಯ್ಕಾಟು ಮಾಡ್ತಾರೆ. ಬಿಜೆಪಿಯಲ್ಲಿ ಹುದ್ದೆಗಳು ವ್ಯಾಪಾರಕ್ಕಿವೆ. ಯತ್ನಾಳ್ ಮಾಡಿದ್ದ ಆರೋಪ ಸತ್ಯ ಇರಬಹುದು. ವಿಪಕ್ಷ ನಾಯಕನ ಆಯ್ಕೆ ಯತ್ನಾಳ್ ಆರೋಪದಂತೆ ಖರೀದಿ ಆಯ್ತಾ? ಎಂದು ಪ್ರಶ್ನಿಸಿದರು.

ಈ‌ ಬಾರಿಯ ಸದನವನ್ನು‌ ಜನರ ಸದನವಾಗಿ ಮಾಡಿಕೊಳ್ಳಲು ಬಿಜೆಪಿ ವಿಫಲವಾಗಿದೆ. ಸಿಎಂ ಯಾರೋ ಮನೆಗೆ ಕಾಫಿಗೆ ಹೋದ್ರೆ ಅವರ ಜೊತೆ ಐಸಿಸ್ ನಂಟು ಇದೆ ಅಂತಾರೆ. ಜನರ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಮಕ್ಕಳಾಟಿಕೆ ರೀತಿ‌ ಸದನ ನಡೆಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ದೆಹಲಿ ಪ್ರವಾಸ ಹೋದ ಪುಟ್ಟ, ಬಂದ ಪುಟ್ಟ ಅಂತಾಗಿದೆ. ಸದನ ವಿಫಲವಾಗಿದ್ದ ಹೊಣೆಯನ್ನು ಬಿಜೆಪಿ ಹೊರಬೇಕು ಎಂದರು.

ಬಿಜೆಪಿ ಒಡೆದ ಮನೆಯಾಗಿದೆ. ಬಿಜೆಪಿ ‌ನಾಯಕರು ಅಸಮರ್ಥರು ಅಂತಾ ಅವರೇ ತೋರಿಸಿಕೊಟ್ಟಿದ್ದಾರೆ. ಮಾಜಿ ಸಿಎಂ ಹೆಚ್ ಡಿಕೆ ಸರಕಾರ ಬಿದ್ದೋಗುತ್ತದೆ ಎಂಬ ಹೇಳಿಕೆ ವಿಚಾರದಲ್ಲೂ ಪ್ರತಿಕ್ರಿಯಿಸಿದೆ, ರಸ್ತೆ ಬದಿಯಲ್ಲಿ ಭವಿಷ್ಯ ಹೇಳುವವರ ಸಂಖ್ಯೆ ಕಡಿಮೆಯಾಗಿದೆ. ಅವರ ಭವಿಷ್ಯವೇ ಅವರಿಗೆ ಗೊತ್ತಿರಲ್ಲ.

ಇನ್ನು ‌ಸರಕಾರದ ಬಗ್ಗೆ ಭವಿಷ್ಯ ಹೇಳ್ತಾರೆ. ಹೋರಿ‌ ಹಿಂದೆ ಓಡುವ ನರಿ ರೀತಿ ಕಾಣ್ತಿದ್ದಾರೆ. ಬೇಟೆಯಾಡುವ ಹುಲಿಯ ರೀತಿ ಕಾಣ್ತಿಲ್ಲ. ಇವರೆಲ್ಲ ಗಿಣಿ‌ ಭವಿಷ್ಯ ಹೇಳುವವರಾಗಿದ್ದಾರೆ ಎಂದು ಆರೋಪಿಸಿದರು.

ಭದ್ರಾವತಿ ಗಲಾಟೆ ವಿಚಾರ

ಭದ್ರಾವತಿಯಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಶಾಸಕರು, ಅಧಿಕಾರಿಗಳು ಗಮನ ಹರಿಸಬೇಕು. ಅಕ್ರಮ ಚಟುವಟಿಕೆ ನಡೆಯುತ್ತಿದ್ದರೆ ಕ್ರಮ ಕೈಗೊಳ್ಳಬೇಕು. ಹಲ್ಲೆ ನಡೆದಿದ್ದರೆ ಅದು ಬೇರೆ ಬೇರೆ ಕಾರಣಕ್ಕೆ, ವೈಯಕ್ತಿಕ ಕಾರಣಕ್ಕೆ ಆಗಿರುತ್ತದೆ ಆ ಬಗ್ಗೆ ಪ್ರತಿಕ್ರಿಯೆ ಕೊಡುವುದಿಲ್ಲ, ಪ್ರತಿಕ್ರಿಯೆ ಕೊಡುವುದು ತಪ್ಪಾಗುತ್ತದೆ ಎಂದು ದೂರಿದರು.

ಇದನ್ನೂ ಓದಿ-https://suddilive.in/archives/4683

Related Articles

Leave a Reply

Your email address will not be published. Required fields are marked *

Back to top button