ಹಣ ಕಳೆದಿದೆ ಹುಡುಕುತ್ತಿದ್ದೇನೆ ಎಂದು ಹೇಳಿ ಪತ್ನಿ ನಾಪತ್ತೆ
ಸುದ್ದಿಲೈವ್/ಶಿವಮೊಗ್ಗ
ಶೀತಲ್ ಅಲಿಯಾಸ್ ನಮಿತಾ, (29) ಎಂಬ ಮಹಿಳೆ ಲಷ್ಕರ್ ಮೊಹಲ್ಲಾದಿಂದ 2022 ರ ಮೇ 13 ರಂದು ಕಾಣೆಯಾಗಿದ್ದು ಇದುವರೆಗೂ ಪತ್ತೆಯಾಗಿಲ್ಲ. ಈ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದು ಬಂದರೆ ಹತ್ತಿರದ ಪೊಲೀಸ್ ಠಾಣೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಕಾಣೆಯಾದ ಶೀತಲ್ ರೂ.6 ಲಕ್ಷ ಹಣದ ಬ್ಯಾಗಿನೊಂದಿಗೆ ತಮ್ಮ ಪತಿಯೊಂದಿಗೆ ಲಷ್ಕರ್ ಮೊಹಲ್ಲಾಗೆ ಹೋಗಿದ್ದು, ಪತಿ ಕೋಳಿ ಫಾರಂ ಮಾಲೀಕರಿಗೆ ಹಣ ಕೊಟ್ಟು ಬರೋಣವೆಂದು ಕರೆದಾಗ ಇಲ್ಲೇ ತರಕಾರಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿರುತ್ತಾರೆ.
ಪತಿ ಕೋಳಿ ಫಾರಂ ಮಾಲೀಕರಿಗೆ ಹಣ ನೀಡಲು ತೆರಳಿದಾಗ ರೂ.2.5 ಲಕ್ಷ ಕಡಿಮೆ ಇರುವುದು ಕಂಡು ಬಂದು ಪತ್ನಿಗೆ ಕರೆ ಮಾಡಿದಾಗ ಹಣ ಕಳೆದುಹೋಗಿದೆ ಇಲ್ಲೇ ಮಾರ್ಕೆಟ್ನಲ್ಲಿ ಹುಡುಕುತ್ತಿದ್ದೇನೆ ಎಂದು ಹೇಳಿರುತ್ತಾರೆ. ನಂತರ ಶೀತಲ್ರ ಮೊಬೈಲ್ ಸ್ವಿಚ್ಆಫ್ ಆಗಿರುತ್ತದೆ. ಎಲ್ಲ ಕಡೆ ಹುಡುಕಿದರು ಅವರು ಪತ್ತೆಯಾಗಿರುವುದಿಲ್ಲ.
ನಿಗೂಢವಾಗಿ ನಾಪತ್ತೆಯಾದ ಮಹಿಳೆ ಸಾಧಾರಣ ಮೈಕಟ್ಟು, ಕೋಲು ಮುಖ, 5.2 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ತಲೆಯಲ್ಲಿ ಕಪ್ಪು ಕೂದಲು ಇರುತ್ತದೆ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆ ಮಾತನಾಡುತ್ತಾರೆ. ಈಕೆ ಯಾರಿಗಾದರೂ ಪತ್ತೆಯಾದಲ್ಲಿ ಕೋಟೆ ಪೊಲೀಸ್ ಠಾಣೆ, ದೂ.ಸಂ: 08182261415 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ-https://suddilive.in/archives/9937