ಕ್ರೈಂ ನ್ಯೂಸ್

ಭಾರತ್ ಫೈನಾನ್ಸಿಷಯಲ್ ಇನ್ಕ್ಲೂಷನ್ ಸಂಸ್ಥೆಗೆ ದೋಖಾ

ಸುದ್ದಿಲೈವ್/ಶಿವಮೊಗ್ಗ

ಭಾರತ್ ಫೈನಾನ್ಸಿಯಲ್ ಇನಕ್ಲೂಷನ್ ಲಿಮಿಟೆಡ್ ಸಂಸ್ಥೆಯ ಡಿ ಶಾಖೆಯ ಫೀಲ್ಡ್ ಆಫೀಸರ್ ವಿರುದ್ಧ ವಂಚನೆ ಪ್ರಕರಣವನ್ನ ದಾಖಲಿಸಿದೆ

ಸಂಸ್ಥೆಯ ಮುಖ್ಯ ಉದ್ದೇಶವೆನೆಂದರೆ ಬಡ ಮಹಿಳೆಯರಿಗೆ ಆರ್ಥಿಕವಾಗಿ ಮತ್ತು ಸಶಕ್ತರನ್ನಾಗಿ ಮಾಡುವುದು ಹಾಗೂ ಸಂಸ್ಥೆಯಲ್ಲಿ.. 10 ರಿಂದ 50 ಜನ ಬಡ ಮಹಿಳೆಯರನ್ನು ಗುರುತಿಸಿ ಅವರಿಗೆ 2ದಿನ

ತರಬೇತಿ ನೀಡಿ ಸಂಘವನ್ನು ರಚನೆ ಮಾಡುವುದಾಗಿರುತ್ತದೆ. ಈ ಸಂಸ್ಥೆಯು ಭಾರತದದ್ಯಾಂತ 23 ರಾಜ್ಯಗಳಲ್ಲಿ, ಹಾಗು ಕರ್ನಾಟಕದ ಎಲ್ಲಾ ಜಿಲ್ಲಾ ಹಾಗು ಎಲ್ಲಾ ತಾಲ್ಲೂಕುಗಳಲ್ಲಿ, ಕಾರ್ಯನಿರ್ವಹಿಸುತ್ತದೆ.

ಶಿವಮೊಗ್ಗದಲ್ಲಿ 4 ಶಾಖೆಗಳನ್ನು ಹೊಂದಿರುವ ಈ ಸಂಸ್ಥೆಯು ಡಿ ಶಾಖೆಯಲ್ಲಿ ಫೀಲ್ಡ್ ಅಸಿಸ್ಟೆಂಟ್ (ಸಂಘದ ಮ್ಯಾನೇಜರ್) ಆಗಿ ಕಾರ್ಯನಿರ್ವಹಿಸುತ್ತಿದ್ದ ಆರ್.ಶ್ರೀಕಾಂತ್ ಶಾಖೆಯಲಿ ಕಳೆದ 11 ತಿಂಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

19 ಸಂಘಗಳಿಂದ ಸುಮಾರು 44 ಸದಸ್ಯರಿಗೆ 69 ಲೋನ್ ಗಳನ್ನ ನೀಡಿರುತ್ತಾರೆ. ಲೋನಿನ ಹಣ ವಾಪಸ್ ಪಡೆದುಕೊಂಡ ಹಣ, ಕೈಗಡ ಸಾಲಮತ್ತು ಪೂರ್ವ ಪಾವತಿ ಹಣವನ್ನು ಸದಸ್ಯರಿಂದ ವಸೂಲಾತಿ ಮಾಡಿಕೊಂಡ ಹಣವನ್ನ ಸಂಸ್ಥೆಗೆ ಕಟ್ಟದೆ ವಂಚಿಸಲಾಗಿದೆ ಎಂದು ದೂರಲಾಗಿದೆ.

ಮೋಸ ಮಾಡುವ ಉದ್ದೇಶದಿಂದ ತಾನೇ ಬಳಸಿಕೊಂಡಿರುವುದರಿಂದ ಸಂಘದ ಸದಸ್ಯರಿಂದ ವಸೂಲಿ ಮಾಡಿದ ಹಣದ ಬಗ್ಗೆ ಆಡಿಟ್ ಮಾಡಿಸಿದಾಗ ಆಡಿಟ್ ವರದಿಯ ಪ್ರಕಾರ ಶ್ರೀಕಾಂತನು ದಿನಾಂಕ 13/10 / 2022 ರಿಂದ 4/6 / 2023 ಅವಧಿಯಲ್ಲಿ ಸಂಘದ ಸದಸ್ಯರಿಂದ ಸಂಗ್ರಹ ಮಾಡಿದ್ದ 7,35,925 ರೂನ್ನು ಸಂಸ್ಥೆಗೆ ನೀಡದೇ ತಾನೇ ಬಳಸಿಕೊಂಡಿರುವುದು ತಿಳಿದು ಬಂದಿರುತ್ತದೆ.

ನಂತರ ವಿಚಾರಿಸಿದಾಗ ತನಗೆ ಹಣದ ಅವಶ್ಯಕತೆ ಇದ್ದುದರಿಂದ ಬಳಸಿಕೊಂಡಿದ್ದಾಗಿ ಹಾಗೂ ಹಣವನ್ನು ವಾಪಾಸ್ ನೀಡುವುದಾಗಿ ತಿಳಿಸಿದ್ದರು. ನಂತರ ಆ ಹಣದಲ್ಲಿ ಒಟ್ಟು 4,69,755ರೂ, ಹಣವನ್ನು ಸಂಸ್ಥೆಗೆ ಜಮಾ ಮಾಡಿರುತ್ತಾರೆ.

ಇನ್ನೂಳಿದ ಬಾಕಿ ಹಣ 2,66,170 ರೂ. ಹಣವನ್ನು ಸಂಸ್ಥೆಗೆ ಕಟ್ಟದೆ ಇಂದು, ನಾಳೆ, ಮುಂದಿನ ವಾರ, ಮುಂದಿನ ತಿಂಗಳುಎಂದು ನೆಪ ಹೇಳಿ ಇಲಿ.ಯವರೆಗೆ ಹಣವನ್ನು ಜಮಾ ಮಾಡದೆ ಹಣ ಕಟ್ಟಿಲ್ಲವೆಂದು‌ ಸಂಸ್ಥೆಯ ಮುಖ್ಯಸ್ಥ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/6421

Related Articles

Leave a Reply

Your email address will not be published. Required fields are marked *

Back to top button