ಕ್ರೈಂ ನ್ಯೂಸ್

ಪ್ರಿತಿಸಿದ ಯುವತಿಗೆ ಚಾಕು ಇರಿದ ಪ್ರಿಯಕರ

ಸುದ್ದಿಲೈವ್/ಶಿವಮೊಗ್ಗ

ಪ್ರೀತಿಸಿ ಬೇರೆಯಾಗಿದ್ದ ಯುವಕನಿಗೆ ಯುವತಿ ಕಣ್ಣಿಗೆ ಬಿದ್ದ ಹಿನ್ನಲೆಯಲ್ಲಿ ಯುವತಿಯನ್ನ ಚಾಕುವಿನಿಂದ ಇರಿದಿರುವ ಘಟನೆ ನಗರದ ಶಿವಪ್ಪ ನಾಯಕನ ಪ್ರತಿಮೆಯ ಬಳಿ ಸಂಭವಿಸಿದೆ.

ಪ್ರೇಮಿಗಳ ನಡುವೆ ಕಿರಿಕ್ ಆದ ಹಿನ್ನಲೆಯಲ್ಲಿ, ಪ್ರಿಯತಮೆಗೆ ಪ್ರಿಯಕರನೋರ್ವ ಚಾಕುವಿನಿಂದ ಇರಿದಿದ್ದಾನೆ. ಹಾಡೋನಹಳ್ಳಿಯ ನಿವಾಸಿಗಳಾದ ಚೇತನ್(29) ಮತ್ತು ಅಂಬಿಕಾ(22) ನಡುವೆ ಪ್ರೀತಿ ಇತ್ತು. ಒಂದೇ ಜಾತಿಯಾಗಿದ್ದರೂ ಮದುವೆಯಾಗಲು ಸಾಧ್ಯವಾಗಿರಲಿಲ್ಲ.

ಇಂದು ಮಧ್ಯಹ್ನ ಪ್ರಿಯಕರ ಚೇತನ್, ಪ್ರಿಯತಮೆ  ಅಂಬಿಕಾನನ್ನ ನೋಡಿ ಚಾಕುವಿನಿಂದ ಇರಿದಿದ್ದಾನೆ. ಯುವತಿಗೆ ಇರಿದ ಯುವಕನಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ್ದಾರೆ. ಧರ್ಮದೇಟು ನೀಡಿದ ಯುವಕ‌ ಚೇತನ್ ನನ್ನ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಗಾಯಾಳು ಪ್ರಿಯತಮೆ ಅಂಬಿಕಾ ಮತ್ತು ಧರ್ಮದೇಟು ತಿಂದ ಯುವಕ ಚೇತನ್ ಇಬ್ಬರನ್ನೂ  ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಂಬಿಕಾಳ್ನ ಖಾಸಗಿ ಆಸ್ಪತ್ರೆಗೆ ಸಾಇಸಲಾಗಿದೆ. ಪ್ರಕರಣ ಕೋಟೆ ಠಾಣೆ ವ್ಯಾಪ್ತಿಯಲ್ಲಿ ದಾಖಲಸಲಾಗಿದೆ.

ಇದನ್ನೂ ಓದಿ-https://suddilive.in/archives/6993

Related Articles

Leave a Reply

Your email address will not be published. Required fields are marked *

Back to top button