ಕ್ರೈಂ ನ್ಯೂಸ್

ಒಂಟೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದವನಿಗೆ ಸಂಕಷ್ಟ

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯಲ್ಲಿ 9 ಒಂಟೆ ಸಾಕಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ. ಪ್ರಾಣಿಗಳ ಹತ್ಯೆ, ಸಾಕಾಣಿಕೆ ರದ್ದತಿಯ 2015 ಕಾಯ್ದೆ ಪ್ರಕಾರ ಗಂಗಾರಾಮ್ ಚೌಹಾನ್ ಮತ್ತು ಇತರರ ವಿರುದ್ಧ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಭದ್ರಾವತಿಯ ಸಿದ್ದರೂಢ ನಗರದ ಶಾಲೆಯೊಂದರಲ್ಲಿ 9 ಒಂಟೆಗಳನ್ನ ತಂದು ಜೀವನ ನಡೆಸುತ್ತಿದ್ದ ಗಂಗಾರಾಮ್ ಮತ್ತು ಇತರರ ವಿರುದ್ಧ ಶರತ್ ಎಂಬುವರು ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ 112 ಪೊಲೀಸರಿಗೆ ಕರೆ ಮಾಡಿ ತಿಳಿಸಿದ ನಂತರ ಸ್ಥಳಕ್ಕೆ ಬಂದ ಪೊಲೀಸರು ಗಂಗಾರಾಮ್ ಚೌಹಾನ್ ವಿರುದ್ಧ ದೂರು ದಾಖಲಾಗಿದೆ.

ಗಂಗಾರಾಮ್ ಚೌಹಾನ್ ಮತ್ತು ಆತನ ಸಹಚರರು, 9 ಒಂಟೆಯನ್ನ ನಂಬಿ ಜೀವನ ಸಾಗಿಸುವ ಅಲೆಮಾರಿ ವ್ಯಕ್ತಿಗಳು ಎಂದು ತಿಳಿದುಬಂದಿದೆ. ಆದರೆ ಒಂಟೆ ಕರ್ನಾಟಕದ ಸಾಕು ಪ್ರಾಣಿ ಅಲ್ಲದ ಕಾರಣ ಈತನ ವಿರುದ್ಧ ದೂರು ದಾಖಲಿಸಲಾಗಿದೆ.

7-8 ತಿಂಗಳ ಹಿಂದೆ ಗಂಗಾರಾಮ್ ಮತ್ತು ಇತರರ ವಿರುದ್ಧ ತುಂಗನಗರ ಪೊಲೀಸ್ ಠಾಣೆಯಲ್ಲಿ ಒಂಟೆ ಸಾಕಿದ ಆರೋಪದ ಮೇರೆಗೆ ದೂರು ದಾಖಲಾಗಿತ್ತು. ನ್ಯಾಯಾಲಯದಿಂದ ಬಿಡಿಸಿಕೊಂಡು ಬಂದಿದ್ದ ಗಂಗಾರಾಮ್ ವಿರುದ್ಧ ಮತ್ತೆ ದೂರುದಾಖಲಾಗಿದೆ.

50 ರೂ.ಗೆ ಒಂದು ರೌಂಡ್ ಹೊಡೆಸಿ ಜೀವನ ಸಾಗಿಸುತ್ತಿದ್ದ ಗಂಗಾರಾಮ್ ಮತ್ತು ಆತನ ಸಹಚರರು ಇದೇ ಒಂಟೆಯನ್ನ ನಂಬಿ ಜೀವನ ಸಾಗಿಸುತ್ತಿದ್ದರು. ಕಾನೂನಿನಲ್ಲಿ ಅವಕಾಶ ಇಲ್ಲದ ಕಾರಣ ಆತನ ವಿರುದ್ಧ ದೂರು ದಾಖಲಾಗಿದೆ.  9 ಒಂಟೆಗಳು ಸಧ್ಯಕ್ಕೆ ಶಿವಮೊಗ್ಗದ ಗೋಶಾಲೆಯೊಂದರಲ್ಲಿಸಲಾಗಿದೆ.

ಇದನ್ನೂ ಓದಿ-https://suddilive.in/archives/5154

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373