ಸ್ಥಳೀಯ ಸುದ್ದಿಗಳು

ಜಿಹಾದ್ ಕುರಿತು ಸ಼ೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್-ಸುಮೋಟೋ ಪ್ರಕರಣ ದಾಖಲು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಕೋಮು ಸಂಘರ್ಷಕ್ಕೆ ಒಳಗಾಗುವ ಜಿಹಾದ್ ಕುರಿತ 14 ಸೆಕೆಂಡ್ ಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ.

ಅದ್ನಾನ್ ಎಂಬ ವ್ಯಕ್ತಿಯು Adnansait_45 ಎಂಬ ತನ್ನ ಇನ್ನಾಗ್ರಾಂ ಸೋಷಿಯಲ್ ಮಿಡಿಯಾದಲ್ಲಿ ಒಂದು ಕೋಮಿನ ಜನರನ್ನು ಎತ್ತಿಕಟ್ಟುವ ರೀತಿಯಲಿ. ವಿಡಿಯೋ ಹಾಕಿರುತ್ತಾನೆಂದು ಮಾಹಿತಿ ನೀಡಿದ ಮೇರೆಗೆ ಇನ್ಮಾಗ್ರಾಂ ಐಡಿ ಯನ್ನು ಪರಿಶೀಲಿಸಿ ನೋಡಲಾಗಿ PLAN-A, (NIKKHA IN SHA ALLAH) PLAN -B (JIHAD IN SHA ALLAH) 2 ಇರುವ 14 ಸೆಕೆಂಡ್ ಗಳ ವಿಡಿಯೋವನ್ನ‌ ಹರಿಬಿಡಲಾಗಿರುವುದನ್ನ‌ ಪೊಲೀಸರು ಮಾಹಿತಿ ಆಧಾರದ ಮೇರೆಗೆ ಪರಿಶೀಲಿಸಲಾಗಿದೆ.‌

ವಿಡಿಯೋದಲ್ಲಿ ಆರೇಬಿಕ್ ಭಾಷೆಯಲ್ಲಿ ಹಿನ್ನಲೆ ಮ್ಯೂಸಿಕ್ ಇರುವುದು ಕಂಡು ಬಂದಿರುತ್ತೆ. ಇತರೆ ಧರ್ಮದ ಹೆಣ್ಣು ಮಕ್ಕಳನ್ನು ಕೈಹಿಡಿದುಕೊಂಡು ಕರೆದುಕೊಂಡು ಹೋಗಿ ಮದುವೆಯಾಗುವ ಮುಖಾಂತರ ಹಾಗೂ ಇತರೆ ಧರ್ಮವನ್ನು ಜಿಹಾದ್ ಮಾಡುವ ಮುಖಾಂತರ ಇಸ್ಲಾಂ ಧರ್ಮವನ್ನು ಬೆಳೆಸಬೇಕೆಂಬ ಉದ್ದೇಶವಿರುವಂತಹ ವಿಡಿಯೋ ಕಂಡು ಬಂದಿದೆ.

ಹಾಗೂ ಮೊಬೈಲ್ ಸ್ಕ್ರೀನ್ ಮೇಲೆ PLAN-B JIHAD IN SHA ALLAH ಎಂದು ಅಕ್ಷರಗಳು ಬರುವ ಸಮಯದಲ್ಲಿ ವಿಡಿಯೋದಲ್ಲಿ ಮುಖವನ್ನು ಮುಚ್ಚಿಕೊಂಡಿರುವಂತಹ ವ್ಯಕ್ತಿ ಹಾಗೂ ಖಡ್ಗವನ್ನು ಹಿಡಿದು ಕೊಲ್ಲುವಂತಹ ವ್ಯಕ್ತಿಗಳ ಚಿತ್ರಗಳು ಬಂದು ಹೋಗುವುದು ಕಂಡು ಬಂದಿರುತ್ತೆ.

ನಂತರ ಆರೋಪಿಯ ಬಗ್ಗೆ, ಮಾಹಿತಿ ತಿಳಿಯಲಾಗಿ ಮಹಮ್ಮದ್ ಅದ್ನಾನ್ ಎಂದು ತಿಳಿದು ಬಂದಿದೆ, ಆರೋಪಿ ವಿಡಿಯೋವನ್ನು ತನ್ನ ಇನ್ನಾ ಗ್ರಾಂ ನಲ್ಲಿ ಅಪ್ ಲೋಡ್ ಮಾಡಿ ಮತ್ತು ಇತರೆಯವರಿಗೆ ಶೇರ್ ಮಾಡುತ್ತಾ ಒಂದು ಕೋಮಿನ ಜನರನ್ನು ಎತ್ತಿಕಟ್ಟುತ್ತಾ, ಜನರನ್ನು ಉದ್ರಿಕ್ತಗೊಳಿಸಿ ಪ್ರೇರೇಪಿಸುತ್ತಾ ಸಮಾಜದ ಶಾಂತಿ ಕದಡಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದ್ದು,

ವಿಡಿಯೋವನ್ನು ಸಿ.ಡಿ ಯಲ್ಲಿ ಪೊಲೀಸರು ಡೌನ್ ಲೋಡ್ ಮಾಡಿ ಕೊಂಡಿದ್ದು ಆರೋಪಿ ಮಹಮ್ಮದ್ ಅದ್ನಾನ್ ಮೇಲೆ ಮುಂದಿನ ಕಾನೂನು ರೀತ್ಯಾ ಕ್ರಮ ಕೈ ಗೊಳ್ಳಲು ಸುಮೋಟೋ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/11977

Related Articles

Leave a Reply

Your email address will not be published. Required fields are marked *

Back to top button