ಸ್ಥಳೀಯ ಸುದ್ದಿಗಳು

ಎರಡು ದಿನ ನಡೆದ ಹೋರಿ ಹೊಳೆ ಬಸವಣ್ಣನ ಜಾತ್ರೆ

ಸುದ್ದಿಲೈವ್/ಶಿಕಾರಿಪುರ

ಈಗ ಜಾತ್ರ ಮಹೋತ್ಸವ ಸರದಿ, ರೈತಾಪಿ ಸಮುದಾಯದ ಆರಾಧ್ಯ ದೇವರಾದ ಹೋರಿ ಹೊಳೆ ಬಸವಣ್ಣನ ಜಾತ್ರೆ ಕಳೆದೆರಡು ದಿನಗಳಿಂದ ಭರ್ಜರಿಯಾಗಿ ಸಾಗಿದೆ.

ಶಿಕಾರಿಪುರದ ಚಿಕ್ಕಾಪುರ ಗ್ರಾಮದಲ್ಲಿ ಇಂದು ಜಾತ್ರೋತ್ಸವ ನಡೆದಿದೆ. ಈ ಜಾತ್ರೆ ರೈತಾಪಿ ವರ್ಗದ ಮಹತ್ವದ ಜಾತ್ರೆಯಾಗಿದೆ. ಐತಿಹಾಸಿಕ ಹೊಳೆ ಬಸವಣ್ಣ ಜಾತ್ರೆಯಲ್ಲಿ ಭಕ್ತರು ಹೋರಿ ಹಳ್ಳದಲ್ಲಿ ತೆಂಗಿನ ಕಾಯಿ ಮತ್ತು ಎಲೆಗಳನ್ನ ಬುಟ್ಟಿಯಲ್ಲಿ ಬಿಟ್ಟು ಸರಿ ಬೆಸದ ಸಂಖ್ಯೆಯ ಮೇಲೆ ಪ್ರಸಾದ ಕೇಳಲಾಗುತ್ತದೆ. ಇದು ಜಾತ್ರೆಯ ವಿಶೇಷವೂ ಹೌದು!

ಭರತ ಹುಣ್ಣಿಮೆಯ ನಿನ್ನೆ ದಿನ ಚಿಕ್ಕರಥೋತ್ಸವ ನಡೆದಿದೆ. ಇದಾದ ನಂತರ ಮಧ್ಯಾಹ್ನದ ವೇಳೆ ದೊಡ್ಡರಥ ನಿರ್ಮಿಸಿ ಜಾತ್ರೆ ನಡೆಸಲಾಗುತ್ತದೆ. ಇಂದು ಬೆಳಿಗ್ಗೆ ಜಾತ್ರೆ ನಡೆದಿದೆ. ಬೆಳಿಗ್ಗೆಯಿಂದ ಇಲ್ಲಿಯ ವರೆಗೂ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ದೇವರ ದರ್ಶನ ಪಡೆದು ಪ್ರಸಾದ ಪಡೆದಿದ್ದಾರೆ.

ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದಾಗಿದೆ. ಐತಿಹಾಸಿಕ ದೇವಾಲಯವಾದ ವಿಷೇಷವೆಂದರೆ ಬಹುತೇಕ ಶಿವನ ದೇವಾಲಯದಲ್ಲಿ ಬಸವಣ್ಣನ ವಿಗ್ರಹ ಹೊರಗಡೆ ಕಾಯುತ್ತಿರುತ್ತದೆ. ಆದರೆ ಈ ದೇವಸ್ಥಾನದಲ್ಲಿ ಲಿಂಗದ ಪೀಠದ ಮೇಲೆ ಬಸವಣ್ಣ ಇರೋದು ವಿಶೇಷವಾಗಿದೆ.

ಶಿವಮೊಗ್ಗ, ಹಾವೇರಿ ಹಾಗೂ ರಾಜ್ಯದ ಹಲವೆಡೆಗಳಿಂದ ಭಕ್ತರು ಹರಿದು ಬರುತ್ತಾರೆ. ಬಿಸಿಲು, ನೀರಿನ ಅಭಾವದಲ್ಲಿಯೂ ಜಾತ್ರೆ ಸಾಂಗವಾಗಿ ಸಾಗಿದೆ. ಗದ್ದೆ ಬಯಲಿನಲ್ಲಿ ಬಿಡಾರ ಹೂಡುವ ಭಕ್ತರು, ರಥ ಎಳೆದು ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಹಳ್ಳಕ್ಕೆ ನೀರು ತುಂಬಿಸಲಾಗಿದೆ.

ಹೋರಿ ಹಳ್ಳಕ್ಕೆ ಈ ಬಾರಿ ನೀರಿಲ್ಲದ ಕಾರಣ ಜಾತ್ರೆಗಾಗಿ ಜನ ಹರಸಾಹಸ ಪಡಬೇಕಾಯಿತು. ರೈತರ ಹೊಲದ ಬೋರ್ ನೀರಿನಿಂದ‌ ಈ ಬಾರಿ ಹೋರಿ ಹಳ್ಳಕ್ಕೆ ನೀರು ಹರಿಸಿ ತುಂಬಿಸಲಾಗಿದೆ. ಈ ಕೆಲಸವನ್ನ ಗ್ರಾಮ ಪಂಚಾಯಿತಿ ಆಗಲಿ ಅಥವಾ ತಾಲೂಕು ಆಡಳಿತ ಮಂಡಳಿ ಮಾಡಿಲ್ಲ. ರೈತರೇ ಹಳ್ಳಕ್ಕೆ ನೀರು ತುಂಬಿಸಿ‌ ಪ್ರಸಾದ ನಡೆಸಿಕೊಲಾಗಿದೆ. ಹೊಳೆಯ ದಂಡೆಯ ಮೇಲೆ ಬಸವಣ್ಣನಿರುವುದರಿಂದ ಸರಿ ಮತ್ತು‌ ಬೆಸದ ಸಂಖ್ಯೆಯ ಮೇಲೆ ಪ್ರಶ್ನೆಗಳನ್ನ ಕೇಳಿ ನೀರಿನಲ್ಲಿ ತೆಂಗಿನ ಕಾಯಿಯ‌ನ್ನ ಬಿಡಲಾಗುತ್ತದೆ. ಪುಟ್ಟಿಯಲ್ಲಿ ಐದು ಕಾಯಿಯನ್ನ‌ ಬಿಟ್ಟು ಪ್ರಶ್ನೆಯನ್ನ ಕೇಳಲಾಗುತ್ತದೆ. ಸರಿ ಬೆಸದ ಸಂಖ್ಯೆ ಆಧಾರದ ಮೇಲೆ ಮುಂದಿನ ಕಾರ್ಯಳನ್ನ‌ ಭಕ್ತರು ನಡೆಸುತ್ತಾರೆ.

ಮಕ್ಕಳಾಗದವರು, ಮದುವೆ, ಶಿವಧೀಕ್ಷೆ, ವ್ಯವಹಾರ, ಗೃಹ ಪ್ರವೇಶ ಹೀಗೆ ವೈಯುಕ್ತಿಕ ಪ್ರಶ್ನೆಗಳನ್ನ ಕೇಳಿ ಪ್ರಸಾದ ಪಡೆಯಲಾಗುತ್ತದೆ. ಹಾಗಾಗಿ ಈ ಹೊಳೆಯಲ್ಲಿ ನೀರು ಅವಶ್ಯಕತೆಯನ್ನ ಹೊಂದಿದೆ.

ಇದನ್ನೂ ಓದಿ-https://suddilive.in/archives/9576

Related Articles

Leave a Reply

Your email address will not be published. Required fields are marked *

Back to top button