ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಮಂಡಳಿ ರಚಿಸಿ

ಸುದ್ದಿಲೈವ್/ಶಿವಮೊಗ್ಗ

ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಾಲಕರು ಮತ್ತು ಇತರೆ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚಿಸುವಂತೆ ರಾಜ್ಯ ಅಸಙಘಟಿತ ಕಾರ್ಮಿಕ ಸಂಘ ಆಗ್ರಹಿಸಿದೆ.
ಸುದ್ದಿಗೋಷ್ಠಿ ನಡೆಸಿದ ಕುಪೇಂದ್ರ ಆಯನೂರು ಮಾತನಾಡಿ, ಕಂಡಕ್ಟರ್ ಚಾಲಕ, ಮೆಕ್ಯಾನಿಕ್, ಪಂಚರ್ ಹಾಕುವ ವೃತ್ತಿಯಲ್ಲಿ 25 ಲಕ್ಷ ತೊಡಗಿಗೊಂಡಿದೆ. ಈ ಮಂಡಳಿ ರಚನೆಗೊಂಡರೆ 1 ಕೋಟಿ ಜನ ಇದರ ಸದುಪಯೋಗ ಮಾಡಿಕೊಳ್ಳಬಹುದು ಎಂದರು.
ಈಗಾಗಲೇ ಬಿಜೆಪಿ ಸರ್ಕಾರ ಇರುವಾಗ ಆಗಿನ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಸಾಮಾಜಿಕ ಭದ್ರತಾ ಮಂಡಳಿ ರಚಿಸಲು ಮನವಿ ಸಲ್ಲುಸಲಾಗಿದೆ. ಕಾರ್ಮಿಕರ ವಿದಗಯನಿಧಿ ಯೋಜನೆ ಸಹ ನೆನೆಗುದಿಗೆ ಬಿದ್ದಿದೆ. ಇದರ ಹಿನ್ನಲೆಯಲ್ಲಿ ಸಂಘಟನೆ ಪತ್ರ ಚಳುವಳಿ ನಡೆಸಲು ಸೂಚಿಸಲಾಗುತ್ತದೆ.
ರಾಜ್ಯದಲ್ಲಿ ಚಾಲಕರು ಕ್ಲೀನರ್ ಗಳು ಮತ್ತು ನಿರ್ವಹಕರಿಗೆ ಕಾರ್ಮಿಕ ಇಲಾಖೆಯ ನೀಡುವ 5 ಲಕ್ಷ ರೂ. ಅಪಘಾತ ವಿಮೆ ತಲುಪುವ ಮಾಹಿತಿ ಕೊರತೆ ಇದೆ. ಶಿವಮೊಗ್ಗದಲ್ಲಿ ಕೇವಲ 14 ಜನ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಇದನ್ನ ಕಾರ್ಮಿಕ ಇಲಾಖೆ ಹೆಚ್ಚಿನ ಪ್ರಚಾರ ಪಡಿಸಬೇಕಿದೆ. ಕಾರ್ಮಿಕರಿಗೆ ಡಿ.02 ರಂದು ಬಜಾಜ್ ಶೋರೂಂ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಜನವರಿಯಲ್ಲಿ ಪತ್ರ ಚಳುವಳಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
