ಸ್ಥಳೀಯ ಸುದ್ದಿಗಳು

ಅಂಬಾರಗೊಪ್ಪದಲ್ಲಿ ಮತಾಂತರದ ಕೂಗು?

ಸುದ್ದಿಲೈವ್/ಶಿಕಾರಿಪುರ

ಶಿಕಾರಿಪುರ ತಾಲೂಕಿನ ಅಂಬರಕೊಪ್ಪದಲ್ಲಿ ಮತಾಂತರದ ಕೂಗು ಕೇಳಿ ಬಂದಿದೆ. ತಾಂಡವೊಂದರಲ್ಲಿ ಕೆಲವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸುತ್ನಿಸಲಾಗುತ್ತಿದೆ ಎಂಬ ಆರೋಪ ಕೆಳಿ ಬಂದಿದೆ.

ಅಂಬಾರಕೊಪ್ಪದಲ್ಲಿ ಇಂದು ಮನೆಯೊಂದರಲ್ಲಿ ಕ್ರೈಸ್ತ ಪಾದ್ರಿಗಳು ಮತ್ತು ಇತರರು ಪೂಜೆಗಾಗಿ ಬಂದ ವೇಳೆ ಗ್ರಾಮದ ಕೆಲ ಹಿಂದೂ ಯುವಕರು ತೆರಳಿ ಇಲ್ಲಿ ಏನು ಮಾಡಲು ಬಂದಿದ್ದೀರಿ? ಎಂದು ಕೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ.

ಬಡ ಕುಟುಂಬಸ್ಥರನ್ನ ಮತಾಂತರ ಮಾಡಲು ಯತ್ನಿಸಲಾಗಿದೆ ಎಂಬ‌ ಆರೋಪ ಕೇಳಿ ಬಂದಿದೆ. ಜೊತೆಗೆ ಇಡೀ ಗ್ರಾಮವನ್ನೇ ಮತಾಂತರಗೊಳಿಸುವುದಾಗಿ ಕೆಲವರು ಆರೋಪಿಸಿದ್ದಾರೆ.

ಆದರೆ ಅಂಬಾರಗೊಪ್ಪದ ಮನೆಯೊಂದರಲ್ಲಿ ಕ್ರಿಸ್ ಮಸ್ ವಿಶೇಷವಾಗಿ ಶಿಕಾರಿಪುರದಿಂದ ಪ್ರತಿವರ್ಷ ಚರ್ಚ್‌ ನ ಪಾದ್ರಿಗಳನ್ನ ಹಾಗೂ ಇತರರನ್ನ ಕರೆಯಿಸಿ ಊಟ ಹಾಕಿಸುವುದು ಪದ್ಧತಿಯಿದೆ ಎಂಬ ಮಾಹಿತಿಯು ಕೇಳಿ ಬಂದಿದೆ.‌ ಈ ಪ್ರಕರಣದಲ್ಲಿ ಹಲ್ಲೆಗಳು ನಡೆದಿದೆ. ಕೆಲವರು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪ್ರಕರಣ ದೂರು ಪ್ರತಿದೂರು ದಾಖಲಾಗುವ ಸಾಧ್ಯತೆ ಇದೆ.

ಇದನ್ನೂ ಓದಿ-https://suddilive.in/archives/5698

Related Articles

Leave a Reply

Your email address will not be published. Required fields are marked *

Back to top button