ಸ್ಥಳೀಯ ಸುದ್ದಿಗಳು

ಕುವೆಂಪು ವಿವಿಯಲ್ಲಿನ ಪಿಜಿಗಳ ಭರ್ತಿಗೆ ಮತ್ತು ಅತಿಥಿ ಉಪನ್ಯಾಸಜರ ನೇಮಕಕ್ಕೆ ಎನ್ ಎಸ್ ಯು ಐ ಮನವಿ

ಸುದ್ದಿಲೈವ್/ಶಿವಮೊಗ್ಗ

ಕುವೆಂಪು ವಿವಿಯಲ್ಲಿ ಭರ್ತಿಯಾಗದ ಪಿಜಿ ಸೀಟ್‌ಗಳನ್ನು ಆಕಾಂಕ್ಷಿಗಳಿಗೆ ಕೊಡಲು ಮನವಿ. ಹಾಗು ಕುವೆಂಪು ವಿವಿಯ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆಯಿದ್ದು, ಕೂಡಲೇ ನೇಮಕ ಮಾಡಿಕೊಳ್ಳುಂತೆ ಆಗ್ರಹಿಸಿ ಎನ್ ಎಸ್ ಯುಐ ಜಿಲ್ಲಾ ಘಟಕ ಮನವಿಮಾಡಿದೆ.

ಕುವೆಂಪು ವಿಶ್ವವಿದ್ಯಾಲಯದಲ್ಲಿ ೨೦೨೩-೨೪ನೇ ಸಾಲಿನ ಪಿಜಿ ಪ್ರವೇಶ ಮುಕ್ತಾಯಗೊಂಡಿದ್ದು, ಎಸ್.ಸಿ./ಎಸ್.ಟಿ., ಹಾಗೂ ಅಂಗವಿಲಕರ ಕೋಟಾದ ಸೀಟುಗಳಿಗೆ ನಿಗಧಿಪಡಿಸಿದಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದಿಲ್ಲ.

ಓಬಿಸಿ, ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಹಲವರು ಮೀಸಲಾತಿಯಲ್ಲಿ ಪ್ರವೇಶ ಸಿಗದೇ ವಂಚಿತರಾಗಿದ್ದಾರೆ. ಎಸ್.ಸಿ./ಎಸ್.ಟಿ., ಹಾಗೂ ಅಂಗವಿಕಲರ ಕೋಟಾದ ಸೀಟುಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳೇ ಇಲ್ಲದಿರುವುದರಿಂದ ಅವಕಾಶ ವಂಚಿತರಾಗಿರುವ ಓಬಿಸಿ ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಕೌನ್ಸಿಲಿಂಗ್ ನಡೆಸಿ, ಈ ಸೀಟುಗಳನ್ನು ಭರ್ತಿ ಮಾಡಿಕೊಳ್ಳಬೇಕೆಂದು ಎನ್.ಎಸ್.ಯು.ಐ ಮನವಿ ಮಾಡಿಕೊಂಡಿದೆ.‌

ಕುವೆಂಪು ವಿಶ್ವವಿದ್ಯಾಲಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆ ಇದ್ದು, ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅನುಸರಿಸುತ್ತಿರುವ ವಿಳಂಬನೀತಿಯನ್ನು ಎನ್.ಎಸ್.ಯು.ಐ. ತೀವ್ರವಾಗಿ ಖಂಡಿಸಿದೆ.

ಪ್ರತಿ ವರ್ಷ ಕಾಲೇಜುಗಳು ಆರಂಭವಾಗುವ ಮೊದಲೇ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಬೇಕು. ಆದರೆ, ಈ ಬಾರಿ ತರಗತಿಗಳು ಆರಂಭವಾಗಿ ಸೆಮಿಸ್ಟರ್ ಪರೀಕ್ಷೆಗಳು ಸಮೀಪಿಸುತ್ತಿದ್ದರೂ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಂಡಿಲ್ಲ. ಈ ಬಗ್ಗೆ ಎನ್.ಎಸ್.ಯು.ಐ. ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಲವಾರು ಬಾರಿ ವಿಶ್ವವಿದ್ಯಾಲಯದ ಕುಲಪತಿಗಳಿಗೆ, ಕುಲಸಚಿವರಿಗೆ ಮನವಿ ಮಾಡಿದ್ದಾರೆ.

ಆದರೆ, ಇದುವರೆಗೂ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸದೇ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸಲಾಗುತ್ತಿದೆ. ತರಗತಿಗಳು ಆರಂಭವಾಗಿ ಎರಡು ತಿಂಗಳಾಗುತ್ತಾ ಬಂದಿದ್ದು, ನಿಗಧಿತ ಪಠ್ಯಕ್ರಮಗಳ ಬೋಧನೆ ನಡೆದಿಲ್ಲ. ಸೆಮಿಸ್ಟರ್ ಪರೀಕ್ಷೆ ಹತ್ತಿರವಾಗುತ್ತಿದ್ದು, ಪಾಠವನ್ನೇ ಕೇಳದೆ ಪರೀಕ್ಷೆ ಬರೆಯುವುದು ಹೇಗೆಂಬ ಅತಂಕ ವಿದ್ಯಾರ್ಥಿಗಳಲ್ಲಿ ಮನೆಮಾಡಿದೆ.

ಆದ್ದರಿಂದ ಕೂಡಲೇ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ನಿಗಧಿತ ಪಠ್ಯಕ್ರಮಗಳನ್ನು ಮುಗಿಸಲು ಕ್ರಮ ಕೈಗೊಳ್ಳಬೇಕು ಎಂದು ಎನ್.ಎಸ್.ಯು.ಐ. ಆಗ್ರಹಿಸುತ್ತಿದ್ದು, ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದೇ ಇದೇ ರೀತಿ ವಿದ್ಯಾರ್ಥಿ ವಿರೋಧಿ ಧೋರಣೆ ಮುಂದುವರಿಸಿದರೆ ವಿವಿ ಬಂದ್ ನಡೆಸಿ ಪ್ರತಿಭಟನೆ ನಡೆಸಬೇಕಾಗುವುದು ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ.

ಮನವಿ ಸಲ್ಲಿಸುವ ವೇಳೆ ವಿಜಯ ಕುಮಾರ್ ಎಸ್ ಎನ್ ಹರ್ಷಿತ್ ಮುರಗೇಶ್ ನಿಖಿಲ್ ಕೀರ್ತಿ ಉಪಸ್ಥಿತರಿದ್ದರು.‌

ಇದನ್ನೂ ಓದಿ-https://suddilive.in/archives/4462

Related Articles

Leave a Reply

Your email address will not be published. Required fields are marked *

Back to top button