ಸ್ಥಳೀಯ ಸುದ್ದಿಗಳು

ಜಿಲ್ಲಾ ಬಿಜೆಪಿಯ ನೂತನ ಪದಾಧಿಕಾರಿಗಳ ಘೋಷಣೆ-ಆಯನೂರು ಬಗ್ಗೆ ಮಾಹಿತಿ ಇಲ್ಲ-ಮೇಘರಾಜ್

ಸುದ್ದಿಲೈವ್/ಶಿವಮೊಗ್ಗ

ಲೋಕ ಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಬಿಜೆಪಿ ಸಂಪೂರ್ಣ ತಯಾರಿಯಾಗಿದೆ. ಕ್ಲಸ್ಟರ್ ನ ಸಿದ್ದಪಡಿಸಲಾಗಿದೆ ಪ್ರತಿ ಲೋಕಸಭೆಗೆ ಪ್ರಭಾರಿ ಮತ್ತು ಸಂಚಾಲಕರನ್ನ ನೇಮಿಸಲಾಗಿದೆ ಎಂದು‌ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗಕ್ಕೆ ಗಿರೀಶ್ ಪಟೇಲ್ ಸಂಚಾರಿಯಾಗಿದ್ದಾರೆ ಮತ್ತು ರಘುಪತಿ ಭಟ್ ಪ್ರಭಾರಿಯಾಗಿ ನೇಮಕ ಗೊಂಡಿದ್ದಾರೆ. ಜಿಲ್ಲೆಯಲ್ಲಿ ನನ್ನನ್ನ ಮತ್ತೆ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಜಿಲ್ಲೆಯ ನೂತನ ಪದಾಧಿಕಾರಿಗಳನ್ನ ನೇಮಕ ಮಾಡಲಾಗಿದೆ.

ಜಿಲ್ಲಾ ಪಧಾಧಿಕಾರಿಗಳು

ಶಿವಮೊಗ್ಗ ಜಿಲ್ಲೆಯ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಶಿವರಾಜು, ಎಂ.ಬಿ ಹರಿಕೃಷ್ಣ, ಸಿ.ಹೆಚ್ ಮಾಲತೇಶ್, ಉಪಾಧ್ಯಕ್ಷರುಗಳಾಗಿ ಪದ್ಮನಿ ಹುಚ್ಚುರಾವ್, ಗೀತಾ ಮಲ್ಲಿಕಾರ್ಜುನ್, ಕುಪೇಂದ್ರ, ಧನಂಜಯ್ ಸರ್ಜಿ, ಎಸ್.ರಮೇಶ್ (ರಾಮು), ರಾಘವೇಂದ್ರ ಬಾಳೆಬೈಲು, ಆನಂದ, ವಿರೇಂದ್ರ ಪಾಟೀಲ್, ಕಾರ್ಯದರ್ಶಿಗಳಾಗಿ ಗಣಪತಿ ಪುರಪ್ಪೆಮನೆ, ಎನ್.ಕೆ ಜಗದೀಶ್, ವಿನ್ಸೆಂಟ್ ರೋಡ್ರಿಗಸ್, ದೇವೇಂದ್ರಪ್ಪ, ಮಧುರಾ ಶಿವಾನಂದ್, ಸುಮಲತಾ ಭೂಪಾಳಂ, ನಿವೇದಿತಾ ರಾಜು, ರೇಖಾ ಬೋಸ್ಥೆ ಮತ್ತು ಜಿಲ್ಲಾ ಖಜಾಂಚಿಯಾಗಿ ಎನ್.ಡಿ ಸತೀಶ್, ಮಾಧ್ಯಮ ಜಿಲ್ಲಾ ಪ್ರಮುಖ್ ಕೆ.ವಿ ಅಣ್ಣಪ್ಪ, ಸಹ-ಪ್ರಮುಖ್ ಚಂದ್ರಶೇಖರ್, ಸಾಮಾಜಿಕ ಜಾಲತಾಣ ಪ್ರಮುಖ್ ಶರತ್ ಕಲ್ಯಾಣಿ, ಸಹ-ಪ್ರಮುಖ್ ದಿನೇಶ್ ಆಚಾರ್ಯ.

8 ಜನ ಜಿಲ್ಲಾ ಉಪಾಧ್ಯಕ್ಷರು, 3 ಜನ ಜಿಲ್ಲಾ ಪ್ರಧಾನ ಕಾರ್ಯದರ್ಶಿ, 7 ಜನ ಕಾರ್ಯದರ್ಶಿ, ಓರ್ವ ಖಜಾಂಚಿ, ಮಾಧ್ಯಮ‌ಪ್ರಮುಖ್ ಆಗಿ ಕೆ.ವಿ.ಅಣ್ಣಪ್ಪ, ಮಾಧ್ಯಮ ಸಹ ಪ್ರಮುಖ್ ಚಂದ್ರಶೇಖರ್, ಸಾಮಾಜಿಕ ಜಾಲತಾಣದ ಪ್ರಮುಖ್ ಶರತ್ ಕಲ್ಯಾಣಿ, ಸಹ ಪ್ರಮುಖ್ ದಿನೇಶ್ ಆಚಾರ್ಯನ್ನ ನೇಮಿಸಲಾಗಿದೆ.

ಮಂಡಲದ ಪದಾಧಿಕಾರಿಗಳು

ತೀರ್ಥಹಳ್ಳಿಗೆ ನವೀನ್ ಹೆದ್ದೂರು ಅಧ್ಯಕ್ಷರು, ರಕ್ಷಿತ್ ಮೇಗರವಳ್ಳಿ ಮತ್ತು ಮೋಹನ್ ಕುಮಾರ್ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ. ಹೊಸನಗರದಲ್ಲಿ ಸುಬ್ರಮಣ್ಯ ಮತ್ತಿಮನೆ‌ ಅಧ್ಯಕ್ಷರಾದರೆ, ನಾಗರಾರ್ಜುನ ಸ್ವಾಮಿ, ಸತೀಶ್ ಕಾಲಸಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಸಾಗರ ಗ್ರಾಮಾಂತರಕ್ಕೆ ದೇವೇಂದ್ರಪ್ಪ ಅಧ್ಯಕ್ಷರಾದರೆ, ಶ್ರೀಕಂಠ ಗೌಡ್ರು ರಮೇಶ್ ಹಾರೋಗೊಪ್ಪ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ.

ಸಾಗರ ನಗರಕ್ಕೆ ಗಣೇಶ್ ಪ್ರಸಾದ್ ಕೆ.ಆರ್, ಸತೀಶ್ ಮೊಗವೀರ್, ಸಂತೋಷ ರಾಯಲ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಬಿ.ಎಸ್ ಪ್ರಕಾಶ್ ಸೊರಬದ ಅಧ್ಯಕ್ಷರಾದರೆ, ಶಿವಕುಮಾರ್ ಕಡಸೂರು ಮತ್ತು ಪ್ರಕಾಶ್ ಅಗಸನವಳ್ಳಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಶಿಕಾರಿಪುರದಲ್ಲಿ ಹನುಮಂತಪ್ಪ ಅಧ್ಯಕ್ಷ, ಬಂಗಾರಿ ನಾಯ್ಕ್, ಅಶೋಕ್ ಮಾನುವಳ್ಳಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಭದ್ರಾವತಿಯಲ್ಲಿ ಧರ್ಮ ಪ್ರಸಾದ್ ಅಧ್ಯಕ್ಷರಾದರೆ, ಚೆನ್ನೇಶ್‌ ಮತ್ತು ಅಣ್ಣಪ್ಪ ಕಾರ್ಯದರ್ಶಿಗಳಾಗಿದ್ದಾರೆ. ಹೊಳೆಹೊನ್ನೂರಿನಲ್ಲಿ ಮಲ್ಲೇಶ್ ಅಧ್ಯಕ್ಷರಾದರೆ, ಶಂಕರ್ ನಿಂಬೆಗೊಂದಿ, ಪ್ರಕಾಶ್ ಅರೆಬಿಳಚಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಭಾಗಕ್ಕೆ ಸುರೇಶ್ ಸಿಂಗನಮನೆ ಅಧ್ಯಕ್ಷರಾದರೆ, ಅಣ್ಣಪ್ಪ ಆಯನೂರು, ಗಣೇಶ್ ಪಿಳ್ಳಂಗೆರೆ ಪ್ರಧಾನ ಕಾರ್ಯದರ್ಶಿ ಗಳಾಗಿದ್ದಾರೆ. ಶಿವಮೊಗ್ಗ ನಗರಕ್ಕೆ ಡಿ.ಮೋಹನ ರೆಡ್ಡಿ ಅಧ್ಯಕ್ಷರಾದರೆ ಧೀನ್ ದಯಾಳು ಮತ್ತು ಮಂಜುನಾಥ್ ನವುಲೆ ಪ್ರಧಾನ ಕಾರ್ಯದರ್ಶಿ ಗಳಾಗಿದ್ದಾರೆ.‌

ಮೋರ್ಚಾದ ಪದಾಧಿಕಾರಿಗಳು

ಪ್ರಶಾಂತ್ ಕುಕ್ಕೆ ಬಿಜೆಪಿ ಯುವಮೋರ್ಚಾದ ಅಧ್ಯಕ್ಷರಾಗಿದ್ದಾರೆ. ಗಾಯಿತ್ರಿ ದೇವಿ ಮಹಿಳಾಮೋರ್ಚಾದ ಅಧ್ಯಕ್ಷರಾಗಿದ್ದಾರೆ. ಎಸ್ ಸಿದ್ದಲಿಂಗಪ್ಪ ಬಿಜೆಪಿರೈತ ಮೊರ್ಚಾದ ಜಿಲ್ಲಾಧ್ಯಕ್ಷರಾದರೆ, ಎಂ ಎನ್ ಸುಧಾಕರ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾಗಿದ್ದಾರೆ. ರಾಮುನಾಯ್ಕ್ ಎಸ್ ಸಿ‌ ಮೋರ್ಚಾದ‌ ಅಧ್ಯಕ್ಷರಾಗಿದ್ದಾರೆ. ಹರೀಶ್ ಎಸ್ ಟಿ ಮೋರ್ಚಾದ ಅಧ್ಯಕ್ಷರಾಗಿದ್ದಾರೆ.‌

ತರಬೇತಿ ಕಾರ್ಯಗಾರ ನಾಳೆ

ಜಿಲ್ಲೆಯ ನೂತನ ತಂಡ ರಚಿಸಲಗಿದೆ.‌ ಚುನಾವಣೆಗೆ ಬೂತ್ ನಲ್ಲಿ ಗೋಡೆ ಬರಹ ಕಾರ್ಯಕ್ಕೆ ಚಾಲನೆ, ಜ.3 ರಂದು ಸಂಸದರು, ಶಾಸಕರು, ಪ್ರಮುಖರು ಅವರ ಬೂತ್ ನಲ್ಲಿ ಗೋಡೆ ಬರಹಕ್ಕೆ ಚಾಲನೆ ನೀಡಲಿದ್ದಾರೆ.
ಗಾಂವ್ ಚಲೋ ಕಾರ್ಯಕ್ರಮಕ್ಕೆ ಸಿದ್ದತೆ ಯಾಗಿದೆ. ಬೂತ್ ಸಮಿತಿ ವಿಸ್ತಾರಕರಾಗಿ ತೆರಳಲಿದ್ದಾರೆ. 7 ಸಾವಿರಕ್ಕೂ ಹೆಚ್ಚುಜನ ಬೂತ್ ಗೆ ತೆರಳಲಿದ್ದಾರೆ. ಕೇಂದ್ರದ ಸಾಧನೆಯನ್ನ ಮನೆ ಮನೆಗೆ ತೆರಳುವುದು. ಸ್ವಸಹಾಯ ಸಂಘದ ಕಾರ್ಯಕರ್ತನ್ನ‌ ಭೇಟಿ ಮಾಡಿ ಕೇಂದ್ರದಸಾಧನೆವತಿಳಿಸಲಾಗುವುದು ಪೂರ್ವಭಾವಿ ಸಿದ್ದಂತೆಗಾಗಿ 500 ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲಾಗುವುದು. ಶುಭಮಂಗಳದಲ್ಲಿ ತರಬೇತಿ ಇದೆ.

ಚುನಾವಣ ನಿರ್ವಾಹಣ ಸಮಿತಿಯ ಕಚೇರಿ ನಾಳೆ ಬಿಜೆಪಿ ಕಚೇರಿಯಲ್ಲಿ ಸಂಸದರು ಶಾಸಕರು ಉದ್ಘಾಟಿಸಲಿದ್ದಾರೆ. ಸಂಘಟನಾತ್ಮಕ ಸಂರಚನೆ ಆಗಲಿದೆ. ಮಂಡಲ ಮತ್ತು ಜಿಲ್ಲಾ ವೀಕ್ಷಕರ ಘೋಷಣೆ ಆಗಲಿದೆ ಎಂದು ತಿಳಿಸಿದರು.

ಆಯನೂರು ಬಗ್ಗೆ ಗೊತ್ತಿಲ್ಲ.ಕುಮಾರ್ ಬಂಗಾರಪ್ಪ‌ ಜೊತೆಗಿದ್ದಾರೆ

ಸೊರಬದ ಮಾಜಿ ಶಾಸಕ ಸೋಲು‌ಆಘಾತ ಉಂಟು ಮಾಡಿದೆ. ತಾಲೂಕಿನಲ್ಲಿ ಕೆಲಸ ಮಾಡಿದ್ದಕ್ಕೆ ತಕ್ಕ ಪಲ ಸಿಕ್ಕಿಲ್ಲ ಎಂಬ ಭಾವನೆ ಅವರಲ್ಲಿ ಮೂಡಿರಬಹುದು.‌ ಆದರೆ ನಮ್ಮ ಸಂಪರ್ಕದಲ್ಲಿದ್ದಾರೆ. ನಮ್ಮಿಂದ ಹೊರಹೋದ ಶೆಟ್ಟರ್ ನಮ್ಮೋಂದಿಗೆ ಕೆಲಸ ಮಾಡುತ್ತಿದ್ದಾರೆ. ವಿಕಾಸಿತ ಭಾರತದಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ. ಸೊರಬ ಮಾಜಿ ಶಾಸಕರು ನಮ್ಮೊಂದಿಗೆ ಬುವ ನಿರೀಕ್ಷೆ ಇದೆ ಎಂದರು.

ಆಯನೂರು ಮಂಜುನಾಥ್ ಮತ್ತೆ ಬಿಜೆಪಿಗೆ ಬರುವ ಬಗ್ಗೆ ಮೇಲಿನ ನಾಯಕರಿಗೆ ಬಿಟ್ಟಿದ್ದು. ಆಯನೂರು ಬಗ್ಗೆ ಮಾಹಿತಿ ಇಲ್ಲ ಎಂದರು.

ಇದನ್ನೂ ಓದಿ-https://suddilive.in/archives/7889

Related Articles

Leave a Reply

Your email address will not be published. Required fields are marked *

Back to top button