ಡಿಎಸ್ ಎಸ್ ರಂಗಪ್ಪನವರ ವಿರುದ್ಧ ಎಫ್ಐಆರ್ ದಾಖಲಾಗುವ ಮುನ್ನ ಅವರ ದೂರುಗಳು ಏನಾದವು?

ಸುದ್ದಿಲೈವ್/ಶಿವಮೊಗ್ಗ

ಭೂದಾಖಲೆ ವಿಭಾಗದ ಸೂಪರ್ ವೈಜರ್ ಚೆನ್ನಕೇಶವಮೂರ್ತಿಯವರು ಹರಮಘಟ್ಟದ ಡಿಎಸ್‌ಎಸ್ ನಾಯಕ ರಂಗಪ್ಪನವರ ವಿರುದ್ಧ ಜಯನಗರ ಠಾಣೆಯಲ್ಲಿ ದೂರುದಾಖಲಾಗಿರುವದಕ್ಕೂ ಮುನ್ನ ಬರೆದ ದೂರಿನ ಪತ್ರಗಳು ಏನಾದವು ಎಂಬ ಪ್ರಶ್ನೆ ಆರಂಭವಾಗಿದೆ.
ರಂಗಪ್ಪನವರು ಸಂಜೆ ಭೂದಾಖಲೆಗಳ ಕಚೇರಿಗೆ ಹರಮಘಟ್ಟದ ಸರ್ವೆ ನಂಬರ್ 124 ರ ಜಮೀನಿನ ಪೋಡಿ ಮಾಡಿಕೊಡಲು ವಿಚಾರಿಸಿದ್ದು ಅಂದು ಬೆಳಿಗ್ಗೆ ಅಂತರಾಷ್ಟ್ರೀಯ ಸಂವಿದಾನ ದಿನಾಚರಣೆಯ ದಿನದಂದು ಸರ್ಕಾರ ಬಾಬಾ ಸಾಹೇಬ್ ಅವರ ಸಿದ್ಧಾಂತ ಮೈಗೂಡಿಸಿಕೊಳ್ಳಲು ಒಳ್ಳೆಯ ಅವಕಾಶ ಕಲ್ಪಿಸಿದೆ ಎಂದು ನಾತನಾಡುತ್ತಿದ್ದಾಗ.
ಅಲ್ಲಿಗೆ ಬಙದ ಸೂಪರ್ ವೈಸರ್ ಪ್ರಸನ್ನ ಮತ್ತು ಹಿಂಬದಿಯಿಂದ ಬಂದ ಮತ್ತೋರ್ವ ಚೆನ್ನಕೇಶವಮೂರ್ತಿ ಇಂತಹ ಅಙತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನ ಸಾವಿರ ಬಾರಿ ಆಚರಿಸಿದ್ದೇವೆ ನಮಗೇನು ಲಾಭ ಎಂದು ಮಾತನಾಡಿಕೊಙಡಿದ್ದನ್ನ ಹರಮಘಟ್ಟದ ರಂಗಪ್ಪ ಮತ್ತು ಇತರರು ಆಕ್ಷೇಪಿಸಿದ್ದರು. ಏರುಧ್ವನಿಯಲ್ಲಿ ಮಾತನಾಡಿದ್ದಾರೆ.
ಇವೆಲ್ಲಾದನ್ನ ಆಕ್ಷೇಪಿಸಿದ ರಂಗಪ್ಪನವರ ತಂಡದ ಸದಾಶಿವ ಅವರು ಚೆನ್ನಕೇಶವರವರು ಸಂವಿದಾನದ ಜನಕನ ವಿರುದ್ಧ ಹಗೂರವಾದ ಮಾತನಾಡಬೇಡಿ ಎಂದಾಗ ಚೆನ್ನಕೇಶವ ಮೂರ್ತಿಯವರೇ ಕೆನ್ನಗೆ ಬಾರಿಸಿದ್ದರು ಎಂದು ಉಪ-ನಿರ್ದೇಶಕರಿಗೆ ಪತ್ರ ಬರೆಯಲಾಗಿತ್ತು. ಈ ಪತ್ರಗಳ ಬಗ್ಗೆ ರಂಗಪ್ಪನಚರಿಗೆ ನಾಲ್ಕು ಬಾರಿ ವಿಚಾರಣೆಗೆ ಬರುವಂತೆ ಡಿಸಿ ಕಚೇರಿಯಿಂದ ನೋಟೀಸ್ ಬಂದಿತ್ತು.
ಆದರೆ ಈ ಎಲ್ಲಾ ನೋಟೀಸ್ ಗೆ ಹಾಜರಾಗಿದ್ದ ರಂಗಪ್ಪನವರ ವಿರುದ್ಧ ಕೊನೆಯ ವಿಚಾರಣೆ ನ.7 ರಂದು ನಡೆದಿದೆ. ಆದರೆ ಚೆನ್ನಕೇಶವಮೂರ್ತಿಗಳು ಅ.31 ರಂದು ವಿಚಾರಣೆನಡೆದಿದ್ದು ವಿಚಾರಣೆಯ ಘೋಷಣೆ ಬಾಕಿ ಉಳಿದಿದೆ ಎಂದು ಹೇಳಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಪೋಡಿ ವಿಚಾರಕ್ಕೆ ಹೋಗಿದ್ದ ರಂಗಪ್ಪನವರ ವಿರುದ್ಧ ಹಣದ ಆರೋಪ ಹೊರೆಸಿರುವುದು ಮತ್ತು ಅವರು ಬರೆದ ಪತ್ರಕ್ಕೆ ವಿಚಾರಣೆ ನಡೆಸಿದ ದಿನಾಂಕಗಳು ಹಲವು ಅನುಮಾನ ಮೂಡಿಸುವಂತೆ ಮಾಡಿದೆ.
ಇದನ್ನೂ ಓದಿ-https://suddilive.in/archives/3166
