ಕ್ರೈಂ ನ್ಯೂಸ್

ತೀರ್ಥಹಳ್ಳಿಯ ವಿಶ್ವಕರ್ಮ ಸೌಹಾರ್ದ ಸಹಕಾರಿ ಸಂಘದ ಕಟ್ಟಡ ನಿರ್ಮಾಣದ ನಿರ್ಣಯ ಏಕಪಕ್ಷೀಯ-ದೂರು‌ ದಾಖಲು

ಸುದ್ದಿಲೈವ್/ತೀರ್ಥಹಳ್ಳಿ

ತೀರ್ಥಹಳ್ಳಿ ತಾಲ್ಲೂಕು ವಿಶ್ವಕರ್ಮ ಸೌಹಾರ್ದ ಸಹಕಾರಿ ಸಂಘದ ಕಟ್ಟಡ ನಿರ್ಮಾಣ ಏಕಪಕ್ಷೀಯವಾಗಿ ನಡೆದಿದೆ ಎಂದು ಆರೊಪಿಸಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು‌ ದೂರು ದಾಖಲಿಸಿದ್ದಾರೆ.

ಈ ಹಿಂದೆ ಉಪಾಧ್ಯಕ್ಷರಾಗಿದ್ದ‌ ಬಿ.ಎಸ್ ಲಕ್ಷ್ಮೀ ನಾರಾಯಣ ಅವರು ಸಭೆ ಸೇರಿ ಕಟ್ಟಡ ರಚನೆ ಹೇಗೆ ಇರಬೇಕೆಂಬ ಸಾಧಕ ಬಾದಕಗಳ ಬಗ್ಗೆ ಚರ್ಚಿಸಿ ಇಂಜಿನಿಯರ್ ರಿಂದ ನೀಲಿ ನಕಾಶ ಮತ್ತು ಎಸ್ಟಿ ಮೇಟ್ ನ್ನು ರಚಿಸಿ ಸಮಾನ ಸಭೆಯಲ್ಲಿ ಅನುಮೋದನೆಯನ್ನು ಪಡೆಯಲಾಗಿತ್ತು.

ಪಟ್ಟಣ ಪಂಚಾಯಿತಿಯಲ್ಲಿ ನೀಲಿ ನಕ್ಷೆ ಮತ್ತು ಎಸ್ಟ್ರಿಮೇಟ್ ಗೆ ಪರವಾನಿಗೆ ಪಡೆಯಲಾಗಿತ್ತು. ಆ ಸಮಯದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಅಧ್ಯಕ್ಷರಾದ ಉಪೇಂದ್ರ ಹಾಗೂ ಕೆಲವು ನಿರ್ದೇಶಕರು ಸೇರಿ ಹೊಸ ನಕ್ಷೆ ಮತ್ತು ಬೇರೆ ಎಸ್ಟಿಮೇಟ್ ನ್ನು ತಯಾರಿಸಿ ಸಾಮಾನ್ಯ ಸಭೆಯಲ್ಲಿ ಅನುಮೋದನೆಯನ್ನು ಪಡೆಯದೇ ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ರೈಸನ್ಸ್ ಪಡೆಯದೇ ಕಟ್ಟಡ ನಿರ್ಮಾಣದ ಅನುಮತಿ‌ ಪಡೆದು ಕಟ್ಟಡದ ನಿರ್ಮಾಣ ಆರಂಭಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.‌

ನೆಪ ಮಾತ್ರಕ್ಕೆ ಕೆಎನ್ ರವಿಶಂಕರ್ ಅವರನ್ನ ಹೊಸ ಅಧ್ಯಕ್ಷರು ಆಯ್ಕೆ ಮಾಡಿರುತ್ತಾರೆ. ಆದರೆ ನಿಜವಾದ ಗುತ್ತಿಗೆದಾರ ಸಹಕಾರಿ ಸಂಘದ ನಿರ್ದೇಶಕರಾದ ಸಂಕದಹೊಳ ನಾಗೇಶ ಕಂಟ್ರ್ಯಾಕ್ಟರ್ ಆಗಿರುತ್ತಾರೆ, ಇದಕ್ಕೆ ಮಹಿಳೆ ಆಕ್ಷೇಪ ಮಾಡಿದ್ದು, ಇದರಿಂದ ಸಹಕಾರಿಗೆ ತುಂಬಾ ನಷ್ಟವಾಗಿದೆ ಎಂದು ದೂರಿದ್ದಾರೆ.‌

ಏಕ ಪಕ್ಷೀಯವಾಗಿ ಮಾಡುತ್ತಿರುವ ಕಟ್ಟಡ ಕಾರ್ಯ ವಿರೋಧಿಸಿ ಕಟ್ಟಡ ಸಮಿತಿಗೆ ಮಹಿಳೆ ರಾಜಿನಾಮೆ ಕೊಟ್ಟಿದ್ದು. ರಾಜಿನಾಮೆ ಪತ್ರದಲ್ಲಿರುವ ವಿಷಯವನ್ನು ಯಥಾವತ್ತಾಗಿ 7ನೇ ನಿರ್ಣಯ ಪುಸ್ತಕದ 84ನೇ ಪುಟದಲಿ ಬರೆಸಿದ್ದರು. ಈ ವಿಷಯಕ್ಕೆ ಸಂಬಂದಿಸಿದಂತೆ ಎಲ್ಲರೂ ಸಹಾಯ ಮಾಡಿದ್ದು ನಿರ್ಣಯ ಪುಸ್ತಕದಲ್ಲಿ ಬರೆಸಿರುವ ವಿಷಯದ ಹಾಳೆಯನ್ನು ಹರಿದು ಹಾಕಿ ಅದೆ ಪುಟದ ನಂಬರ್ ನ ಬೇರೆ ಪುಸ್ತಕದ ಹಾಳೆಯನ್ನು ಅದಕ್ಕೆ ಅಂಟಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ತೀರ್ಥಹಳ್ಳಿ ತಾಲೂಕು ಶ್ರೀ ವಿಶ್ವಕರ್ಮ ಸೌಹಾರ್ಧ ಸಹಕಾರಿ ಸಂಘದ ಅಧ್ಯಕರು ಮತ್ತು ಕಾರ್ಯದರ್ಶಿ ಹಾಗೂ ಇದಕ್ಕೆ ಸಹಕಾರ ನೀಡಿದ ನಿರ್ದೇಶಕರಾದ ನಾಗೇಶ, ಶಂಕರಾಚಾರ್, ನಾಗಚಾರ್, ಜ್ಯೋತಿ ರವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.‌

ಇದನ್ನೂ ಓದಿ-https://suddilive.in/archives/9064

Related Articles

Leave a Reply

Your email address will not be published. Required fields are marked *

Back to top button