ಕ್ರೈಂ ನ್ಯೂಸ್

ಸ್ಪ್ರೇ ಹೊಡೆದು ಹಣ ಎಗುರಿಸಿದ ಅಪರಿಚತರು

ಸುದ್ದಿಲೈವ್/ಭದ್ರಾವತಿ

ಊರಿನ ದಾರಿ ಕೇಳುವ ನೆಪದಲ್ಲಿ ಅಪರಿಚಿತರಿಬ್ವರು ಪಿಗ್ಮಿ ಹಣವನನ್ನ ಎಗುರಿಸಲಾಗಿದೆ. ಭದ್ರಾವತಿಯ ಸಿದ್ದಾಪುರದ ಕೆರೆಯ ಮೇಲೆ ಬರುತ್ತಿದ್ದ ಫೈನಾನ್ಸ್ ನ ಪಿಗ್ಮಿ ಸಂಗ್ರಹಕನನ್ನ ಹಿಂಬಾಲಿಸಿಕೊಂಡು ಬಂದು ಊರಿನ ಮಾರ್ಗ ಕೇಳಿ ಸ್ಪ್ರೇ ಹೊಡೆದು 70 ಸಾವಿರ ರೂ. ಪಿಗ್ಮಿ ಹಣವನ್ನ ದೋಚಿಕೊಂಡಿ ಹೋಗಿರುವ ಘಟನೆ ವರದಿಯಾಗಿದೆ.

ಹೊಸಸಿದ್ದಾಪುರ ನಿವಾಸಿ ರಾಜಾ ಎಂಬ ಪಿಗ್ಮಿ ಸಂಗ್ರಹಕರು ಪ್ರತಿದಿನ ಸಂಜೆ 06.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಭದ್ರಾವತಿಯಲ್ಲಿ ಶಕ್ತಿ ಪೈನಾನ್ಸ್‌ ಸೇರಿದ ಆಂಗಡಿಗಳಲ್ಲಿ ಪಿಗ್ಮಿ ಹಣವನ್ನು ಸಂಗ್ರಹಿಸುತ್ತಾರೆ. ಡಿ.19 ರಂದು ಸಂಜೆ 06.00 ಗಂಟೆಯಿಂದ ಭದ್ರಾವತಿ ಟೌನ್ನಲ್ಲಿ ಪಿಗ್ಗಿಹಣವನ್ನು ಸಂಗ್ರಹಮಾಡಿಕೊಂಡು ರಾತ್ರಿ ಸುಮಾರು 10.30 ಗಂಟೆ ಸಮಯದಲ್ಲಿ ತಾವು ವೇಲೂರು ಶೆಡ್ ಮೂಲಕ ಹೊಸ ಸಿದ್ದಾಪುರದಲ್ಲಿರುವ ಮನೆಗೆ ಹೋಗಲು ಸಿದ್ದಾಪುರದ ಕೆರೆಯ ಮೇಲೆ ಕೆಎ14ವೈ 0263ಪ್ಯಾಷನ್ ಪ್ರೋ ಬೈಕಿನಲ್ಲಿ ಹೋಗುತ್ತಿರುವಾಗ ವೇಲೂರು ಶೆಡ್ ಕಡೆಯಿಂದ 02 ಜನರು ಒಂದು ಬೈಕಿನಲ್ಲಿ ಬಂದು ಶಿವಮೊಗ್ಗಕ್ಕೆ ಹೋಗುವ ದಾರಿ ಯಾವುದೂ ಅಂತಾಕೇಳಿದರು.

ನಾನು ಮುಂದೆ ಶಿವಮೊಗ್ಗ ಕಡೆಗೆ ಹೋಗುವ ದಾರಿ ಸಿಗುತ್ತದೆ ತೋರಿಸುತ್ತೇನೆ ಬನ್ನಿ ಅಂತಾ ಹೇಳಿದ್ದು ತಮ್ಮ ಜೊತೆಯಲ್ಲಿ ಬೈಕಿನಲ್ಲಿಬರುವಾಗ,  ಕೆರೆಯ ಬಳಿ ಇರುವ ದೇವಸ್ಥಾನದಿಂದ ಸ್ವಲ್ಪ ಹಿಂದೆ ಬೈಕಿನ ಹಿಂಬದಿಯಲ್ಲಿದ್ದವನು  ಬೈಕಿಗೆ ಅಡ್ಡಬಂದಿದ್ದಾನೆ.

ಆಗಬೈಕ್ ನಿಯಂತ್ರಣ ಕಳೆದುಕೊಂಡ ರಾಜಾ  ಬೈಕ್ ಸಮೇತ ಕೆಳಗೆ ಬಿದ್ದಿದ್ದಾರೆ. ಆಗ ಅಪರಿಚಿತರಿಬ್ಬರು ಕಣ್ಣಿಗೆ ಯಾವುದೋ ಸೈ ಸಿಂಪಡಿಸಿದ್ದು ನಂತರ ಗಮನವನ್ನು ಬೇರೆಡೆಗೆ ಸಳೆದು ಬೈಕ್ ನ ಮೇಲೆ ಇಟ್ಟುಕೊಂಡಿದ್ದ ಪಿಗ್ನಿ ಹಣವನ್ನು ಸಂಗ್ರಹಿಸಿದ್ದ ಬ್ಯಾಗ್  ತೆಗೆದುಕೊಂಡು ಹೋಗಿದ್ದಾರೆ. 70.000/-ರೂಗಳಿದ್ದ ವಾಪಾಸ್ ವೇಲೂರು ಶೆಡ್ ಕಡೆಗೆ ಹೋಗಿದ್ದಾರೆ ಎಂದು ದೂರಿದರು.

ಬೈಕ್ ನಲ್ಲಿ ಬಂದಿದ್ದವರಲ್ಲಿ ಬೈಕ್ ಚಾಲನೆ ಮಾಡುತ್ತಿದ್ದವನು ಒಬ್ಬನು ಸುಮಾರು 25 ವರ್ಷದವನಾಗಿದ್ದು, ಸಾದಾರಣ ಮೈ ಕಟ್ಟು ಇದ್ದು ಬಿಳಿಬಣ್ಣದ ಶರ್ಟ ಧರಿಸಿದ್ದು ಬೈಕಿನ ಹಿಂಬಂದಿಯಲ್ಲಿ ಇದ್ದವನು ಸುಮಾರು 25 ವರ್ಷದವನಾಗಿದ್ದು ತೆಳುವಾದಮೈ ಕಟ್ಟು ಇದ್ದು ಗಡ್ಡವನ್ನು ಬಿಟ್ಟಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/5329

Related Articles

Leave a Reply

Your email address will not be published. Required fields are marked *

Back to top button