ಕ್ರೈಂ ನ್ಯೂಸ್

ಪಿಸ್ತೂಲ್ ಮತ್ತು ಲಾಂಗು ಹಿಡಿದು ಫೊಸು ಕೊಡುತ್ತಿದ್ದವರು ಅಂದರ್

ಸುದ್ದಿಲೈವ್/ಸಾಗರ

ಸಾಗರದ ಸಂಗಮೇಶ್ವರ ರಸ್ತೆಯಲ್ಲಿ ಲಾಂಗು ಮತ್ತು ಪಿಸ್ತೂಲ್ ಹಿಡಿದುಕೊಂಡು ನಾವ್ ಹೇಳ್ದಂಗೆ ಇಲ್ಲಿ ನಡೆಯೋದು ಎಂದು ಹೇಳಿಕೊಂಡು ಓಡಾಡುತ್ತಿದ್ದ ಇಬ್ಬರು ಯುವಕರನ್ನ‌ ನ್ಯಾಯಾಂಗ ಬಂಧನಕ್ಕೊಳಪಡಿಸಾಗಿದೆ.

ಸಾಗರದ ಸಂಗಮೇಶ್ವರ್ ರಸ್ತೆಯಲ್ಲಿ ದರ್ಶನ್ ಮತ್ತು ನವೀನ್ ಎಂಬ ಯುವಕರು ಫೆ.12 ರಂದು ರಾತ್ರಿ 10-30 ಕ್ಕೆ ಸಂಗಮೇಶ್ವರ್ ರಸ್ತೆಯಲ್ಲಿ ಲಾಂಗು ಮತ್ತು ಸಿಲ್ವರ್ ಕಲರ್ ನ‌ ಏರ್ ಗನ್ ರೀತಿಯ ಪಿಸ್ತೂಲ್ ಹಿಡಿದುಕೊಂಡು ನಮ್ಮನ್ನ ಯಾರು ಹೇಳೋರು ಕೇಳೋರು ಇಲ್ಲ ಎಂದು ಹೇಳಿಕೊಂಡು ಓಡಾಡಿದ್ದಾರೆ.

ಈ ವೇಳೆ ಪೈಂಟಿಂಗ್ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಸಂಜಯ್ ಎಂಬ ಯುವಕ ಏನುಕ್ಕೆ ಈ ರೀತಿ ಹೇಳುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಲೇ ಬಚ್ಚಾ ನಿನ್ನನ್ನ ಇಲ್ಲೆ ಕೊಲೆ ಮಾಡುತ್ತೇವೆ ಎಂದು ಗದರಿಸಿದ್ದಾರೆ‌. ಸಂಜಯ್ ಸಾರ್ವಜನಿಕ ಸ್ಥಳದಲ್ಲಿ ಆಯುಧಗಳನ್ನ ಹಿಡಿದು ಬೆದರಿಕೆ ಹಾಕುತ್ತಿದ್ದ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡ ಸಾಗರ ಟೌನ್ ಪೊಲೀಸರು ದರ್ಶನ್ ಮತ್ತು‌ ನವೀನ್ ಅವರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

ಇದನ್ನೂ ಓದಿ-https://suddilive.in/archives/9012

Related Articles

Leave a Reply

Your email address will not be published. Required fields are marked *

Back to top button