ರಾಜಕೀಯ ಸುದ್ದಿಗಳು

ಲೋಕಸಭೆ ಚುನಾವಣೆಯಲ್ಲಿ ರಾಘವೇಂದ್ರರನ್ನ ಗೆಲ್ಲಿಸಿ-ಶ್ಯಾಮನೂರು

ಸುದ್ದಿಲೈವ್/ಶಿವಮೊಗ್ಗ

ಲೋಕಸಭೆ ಚುನಾವಣೆಯಲ್ಲಿ ರಾಘವೇಂದ್ರರನ್ನು ಗೆಲ್ಲಿಸಲು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕರೆ ನೀಡಿದ್ದಾರೆ.

ಅಭಿವೃದ್ಧಿ ಕೆಲಸಗಳು ಶಿವಮೊಗ್ಗ ಜಿಲ್ಲೆಯಲ್ಲಿ ಆಗಿರುವುದನ್ನು ಗಮನಿಸಿ ಉತ್ತಮ ಸಂಸದರನ್ನು ಆಯ್ಕೆ ಮಾಡಿದ್ದೀರಿ, ಮುಂದೆಯೂ ಇವರನ್ನು ಆಯ್ಕೆ ಮಾಡಬೇಕಿರುವುದು ಸಾರ್ವಜನಿಕರ ಕರ್ತವ್ಯ ಎಂದು ಅವರು ನಗರದ ಬೆಕ್ಕಿನಕಲ್ಮಠದಲ್ಲಿ ನಡೆದ ಶ್ರೀ ಗುರು ಬಸವಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿರುವ ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನ ಮತ್ತೆ ಗೆಲ್ಲಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ ಅಭಿಪ್ರಾಯಪಟ್ಟರು.

ಬಿ.ವೈ.ರಾಘವೇಂದ್ರ ಅವರಂತಹ ಲೋಕಸಭೆ ಸದಸ್ಯರನ್ನುಪಡೆದ ನೀವೇ ಧನ್ಯರು. ಜಿಲ್ಲೆಯಲ್ಲಿ ಆಗಬೇಕಿರುವ ಎಲ್ಲ ಕೆಲಸಗಳನ್ನು ಪೂರ್ಣ ಮಾಡಿ ಮುನ್ನಡೆಯುತ್ತಿದ್ದಾರೆ. ಜನರಿಗೆ ಅಭಿವೃದ್ಧಿ ಕೆಲಸ ಆಗಬೇಕಿರುವುದು ಮೊದಲ ಆದ್ಯತೆ. ಜನರ ಅಭಿಲಾಷೆಯಂತೆ ಕೆಲಸ ಮಾಡಿರುವ ಲೋಕಸಭಾ ಸದಸ್ಯರನ್ನು ಬರುವ ಲೋಕಸಭೆ ಚುನಾವಣೆಯಲ್ಲಿಯೂ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ವೀರಶೈವ ಲಿಂಗಾಯತರಲ್ಲಿ ಅನೇಕ ಒಳ ಪಂಗಡಗಳಿವೆ, ಅವುಗಳು ದೂರವಾಗಿ ಎಲ್ಲರೂ ಒಂದೇ ಎಂಬ ಭಾವನೆ ಬರಬೇಕು ಆಗ ಐಕ್ಯತೆ ಮೂಡುತ್ತದೆ ಎಂದರು.

ಇದನ್ನೂ ಓದಿ-https://suddilive.in/archives/7785

Related Articles

Leave a Reply

Your email address will not be published. Required fields are marked *

Back to top button