ರಾಜಕೀಯ ಸುದ್ದಿಗಳು

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಎಸ್ಪಿ ದಿನೇಶ್ ಘೋಷಣೆ

ಸುದ್ದಿಲೈವ್/ಶಿವಮೊಗ್ಗ

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ದಿನಾಂಕ ಫಿಕ್ಸ್ ಆಗಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಅವರ ಹೆಸರು ಘೋಷಣೆಯಾಗಿದೆ.

ಜೂ.3 ರಂದು ಚುನಾವಣೆ ನಡೆಯಲಿದೆ ಎಂದು‌ ಘೋಷಣೆ ಆಗಿದ್ದರೂ ಬಿಜೆಪಿ ಇನ್ನೂ ಚಿರ ನಿದ್ರೆ‌ಯಿಂದ ಎದ್ದಿಲ್ಲ. ಕಾರಣ ಅಲ್ಲೂ ಸಹ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಇವೆಲ್ಲದರ ನಡುವೆ ಎಸ್ ಪಿ ದಿನೇಶ್ ಕಾಂಗ್ರೆಸ್ ನಿಂದ ಬಂಡಾಯ ಎಳುವುದಾಗಿ ಘೋಷಿಸಿದ್ದಾರೆ.

ಎಸ್ ಪಿ ದಿನೇಶ್ ಅವರು ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ 2012 ಮತ್ತು 2018 ರಲ್ಲಿ ನಡೆದ ಚುನಾವಣೆಯಲ್ಲಿ ಅಲ್ಪಮತದಿಂದ ಸೋತಿದ್ದೆ. ಮೂರನೇ ಬಾರಿ ಆಯ್ಕೆ ಬಯಸಿ ಪಕ್ಷೇತರವಾಗಿ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.

ಹಲವು ವರ್ಷಗಳಿಙದ 2006 ರಿಂದ ಚುನಾವಣೆ ಮೇಲೆ ಕಣ್ಣಿಟ್ಟು ಸಂಪೂರ್ಣ ತಯಾರಿ ಮಾಡಿಕೊಂಡು 2012 ರಲ್ಲಿ ಡಿ.ಹೆಚ್ ಶಂಕರ್ ಮೂರ್ತಿ ವಿರುದ್ಧ ಅಲ್ಪಮತಗಳಿಮದ ಸೋತೆ. 2018 ರಲ್ಲಿ ಅಲ್ಪಮತಗಳಿಙದ ಬಿಜೆಪಿ ಆಆಭ್ಯರ್ಥಿಯಿಂದ ಸೋತಿದ್ದೆ. ಡಿಕೆಶಿಯವರನ್ನ ಭೇಟಿ ಮಾಡಿದಾಗ ಬೆಂಬಲಿಸಿ ಸ್ಪರ್ಧಿಸಲು ಬೆಂಬಲಿಸುವುದಾಗಿ ಬೆನ್ನುತಟ್ಟಿದ್ದರು. ಅದರಂತೆ 6 ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೆ.

ಆದರೆ ರಾತ್ರೋರಾತ್ರಿ ಆಯನೂರು ಹೆಸರು ಪ್ರಕಟಗೊಂಡಿರುತ್ತದೆ. ಆದತೆ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿ ಸಂಪರ್ಕಿಸಿ ಬೆಂಬಲ ಕೋರಿಲ್ಲ. ಎರಡು ದಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಬೆಂಬಲ ಕೋರಿದ್ದರು. ಆದರೆ ಎರಡು ತಿಂಗಳ ಹಿಂದೆ ಅಭ್ಯರ್ಥಿ ಘೋಷಣೆ ಮಾಡಿದಾಗ ಯಾರೂ ಬಂದು ಸಂಪರ್ಕಿಸಲಿಲ್ಲ. ಈಗ ಬಂದಿದ್ದೀರಿ. ನಾನು ಸ್ಪರ್ಧಿಸುತ್ತಿರುವುದಾಗಿ ತಿಳಿಸಿದ್ದೇನೆ ಎಂದರು.

ಪಕ್ಷ ನಿಷ್ಠರಿಗೆ ಟಿಕೇಟ್ ಕೊಡಿ ಎಂದು ಹೇಳಿದ್ದೆ. ಪಕ್ಷನಿಷ್ಠರಲ್ಲದವರಿಗೆ ಟಿಕೇಟ್ ಕೊಟ್ಟರೆ ಕಾರ್ಯಕರ್ತರ ಮನಸಿಕತೆ ಕುಗ್ಗಲಿದೆ ಎಂದು ಪಕ್ಷದ ವರಿಷ್ಠರಿಗೆ ಹೇಳಿರುವೆ.  ಆದರೆ ನನಗೆ ಟಿಕೆಟ್ ಕೊಡಲಿಲ್ಲ. ನಾನು ಸ್ಪರ್ಧಿಸುವ ಮುಂಚೆ ಕಾಂಗ್ರೆಸ್ ಬಿಜೆಪಿ ವಿರುದ್ಧ ಠೇವಣಿ ಪಡೆಯಲು ಸಾಧ್ಯವಾಗಿಲ್ಲ. ನಾನು ಸ್ಪರ್ಧೆಯಿಂದ ಪಕ್ಷ ಅಲ್ಪ ಮತಗಳಿಂದ ಸೋಲು ಅನುಭವಿಸಿದ್ದೇನೆ. ಮತಗಳನ್ನ ಗಟ್ಟಿ ಮಾಡಿರುವೆ. ಆಯನೂರು ಮಂಜುನಾಥ್ ನನ್ನ ಬೆನ್ನಿಗೆ ನಿಂತರ ಗೆಲುವು ನಮ್ಮದೆ. ಆ ಬಗ್ಗೆ ಚಿಂತಿಸಲಿ ಎಂದರು.

16000 ಜನ ಮತದಾರರು ಸ್ಪರ್ಧಿಸಲು ಬೆಂಬಲಿಸಿ ಪತ್ರ ಬರೆದಿದ್ದಾರೆ.  ಹಾಗಾಗಿ ಮೇ. 15ವರಂದು ಮೈಸೂರಿನ ಪ್ರಾದೇಶಿಕ ಕಚೇರಿಯಲ್ಲಿ ಅರ್ಜಿ ಸಲ್ಲಿಸುತದತಿದ್ದೇನೆ. ಮತ್ತೊಮ್ಮೆ ಮನವಿ ಮಾಡುವೆ ಕೆಪಿಸಿಸಿ ಅಧ್ಯಕ್ಷರಿಗೆ ನನಗೆ ಬಿಫಾರಂ ಕೊಟ್ಟು ಬೆಂಬಲಸಿ ಎಂದು ಕೋರಿದರು.

ಈ ವೇಳೆ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಸಹ ಎಸ್ಪಿ ದಿನೇಶ್ ಗೆ ಬೆಂಬಲ ಘೋಷಿಸಿದೆ. 6 ಜಿಲ್ಲೆಯಲ್ಲಿ 3 ಸಾವಿರ ಜನ ಉಪನ್ಯಾಸಕರಿದ್ದಾರೆ. 13000 ಅತಿಥಿ ಉಪನ್ಯಾಸಕರನ್ನ ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಹೋಗಿ ಅವರ ವೇತನವನ್ನ ಹೆಚ್ಚಿಸಿರುವುದು ಅಧ್ಯಕ್ಷ ಡಾ.ಹನುಮಂತಪ್ಪ ಕಲ್ಮನಿ ಅವರ ಪ್ರಯತ್ನವಿದೆ ಎಂದು ದಿನೇಶ್ ತಿಳಿಸಿದರು.  ಈ ವೇಳೆ ಪ್ರ.ಕಾ.ವಿನೋದ್ ಚಂದ್ ಪೀಟರ್, ರಮೇಶ್ ಬಾರ್ಗಿ, ಸದಾಶಿವ, ಈಶ್ವರ್ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button