ರಾಜಕೀಯ ಸುದ್ದಿಗಳು

ಚಲಿಸುತ್ತಿದ್ದ ವಾಹನದ ಮೇಲೆ ಬುಡಸಮೇತ ಬಿದ್ದ ಮರ

ಸುದ್ದಿಲೈವ್/ಶಿವಮೊಗ್ಗ

ಚಲಿಸುತ್ತಿದ್ದ ಬೈಕ್ ಮೇಲೆ ಬೃಹದಾಕಾರದ ಮರವೊಂದು ಬುಡಸಮೇತ ಬಿದ್ದ ಘಟನೆ ಶಿವಮೊಗ್ಗದ ಗೊಂದಿ ಚಟ್ನಹಳ್ಳಿ ಬಳಿ ನಿನ್ನೆ ಮಧ್ಯಾಹ್ನ ನಡೆದಿದೆ.

ಘಟನೆಯಲ್ಲಿ ಬೈಕ್ ನಲ್ಲಿದ್ದ ಮೂರು ಮಂದಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಸನ್ಯಾಸಿ ಕೋಡಮಗ್ಗೆ ನಿವಾಸಿಗಳಾದ ಶಫಿಸಾಬ್, ಪ್ಯಾರಿಬಿ, ಗೌಸಿಯಾ ನಾಸ್ ಎಂಬ ಒಂದು ವರ್ಷದ ಮಗುವಿಗೆ ಗಂಭೀರ ಗಾಯಗಳಾಗಿವೆ.

ಗಾಯಾಳುಗಳನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ವರೆ ವರ್ಷದ ಮಗುವಿಗೆ ಶಿವಮೊಗ್ಗದ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಸನ್ಯಾಸಿ ಕೋಡಮಗ್ಗೆಯಿಂದ  ಬರುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಬೈಕ್ ಸವಾರರ ಮೇಲೆ ಮರ ಬೀಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅದೃಷ್ಟವಶಾತ್ ಹಿಂದಿದ್ದ ಲಾರಿ ಸಡನ್ ಬ್ರೇಕ್ ಹಾಕಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಪ್ಯಾರಿಬಿ ಅವರ ಪತಿಕೂಲಿ ಕಾರ್ಮಿಕರಾಗಿದ್ದು ಚಿಕಿತ್ಸೆಗಾಗಿ ಪರದಾಡುತ್ತಿದೆ. ಆರ್ಥಿಕ ಸಹಾಯಕ್ಕಾಗಿ ಪರದಾಡುತ್ತಿದ್ದಾರೆ. ಆರ್ಥಿಕ ಸಹಾಯ ಮಾಡಲು ಇಚ್ಚಿಸುವವರು 9113002110 ಕ್ಕೆ ಸಂಪರ್ಕಿಸಲು ಕೋರಲಾಗಿದೆ.

ಇದನ್ನೂ ಓದಿ-https://suddilive.in/archives/8896

Related Articles

Leave a Reply

Your email address will not be published. Required fields are marked *

Back to top button