ಸ್ಥಳೀಯ ಸುದ್ದಿಗಳು

ಆಮ್ ಆದ್ಮಿ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಎನ್. ಟಿ ರಸ್ತೆಯ ಟೆಂಪೋ ಸ್ಟ್ಯಾಂಡ್ ಬಳಿ ಸಂಚಾರಿ ವಾಹನ ಸರಿಗೊಳಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯ ನಂತರ ಪೊಲೀಸರು ರಿಫ್ಲೆಕ್ಟ್ ಸ್ಟಿಕ್ಕರ್ ಅಂಟಿಸಿದ್ದಾರೆ.

ಎನ್ ಹೆಚ್ ರಸ್ತೆಯಾಗಿದ್ದು ಈ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಸುಗಮವಾಗಿಲ್ಲ. ಶಾಲೆ, ಮನೆಗಳು ಹೆಚ್ಚಿದ್ದು ಅನೇಕ ಬಾರಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಕ್ರಮ ಜರುಗಿಸಿಲ್ಲ ಎಂದು ಪ್ರತಿಭಾಟನಾಕಾರರು ಆಗ್ರಹಿಸಿದ್ದಾರೆ.

ಸಾಕಷ್ಟು ಈ ರಸ್ತೆಯಲ್ಲಿ  ಅಪಘಾತ ವಾಗಿದೆ. ಇದನ್ನ. ಖಂಡಿಸಿ, ಫೆ.13 ರಂದು ಎನ್ ಟಿ ರಸ್ತೆಯ ಟೆಂಪೋ ಸ್ಟ್ಯಾಂಡ್ ಬಳಿ ಪ್ರತಿಭಟಿಸಲಾಯಿತು. ಇದು ಒಂದೇ ಸ್ಥಳವಲ್ಲ ಗಾಡಿಕೊಪ್ಪ, ಇಲಿಯಾಜ್ ನಗರ ಮೊದಲಾದ ಕಡೆ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಬಗ್ಗೆ ಕ್ರಮವಿಲ್ಲ ಎಂದು‌ ದೂರಲಾಗಿದೆ.

ರಾತ್ರಿಯ ವೇಳೆ ರಿಫ್ಲೆಕ್ಟ್ ಸ್ಟಿಕ್ಕರ್ ಹಾಕಬೇಕು, ಸಿಗ್ನಲ್ ಅಳವಡಿಸಬೇಕು. ಮೊನ್ನೆ ಟೆಂಪೋವೊಂದು ಡಿವೈಡರ್ ಮೇಲೆ ಹತ್ತಿದೆ. ಅದೃಷ್ಟವಶಾತ್ ಜೀವ ಹಾನಿ ಆಗಿಲ್ಲ. ಈ ರೀತಿಯ ಅಪಘಾತಕ್ಕೆ ನಾಳೆ ನಾವು ಒಳಗಾಗಬಹುದು ಜಾಗೃತಿ ಬೇಕಿದೆ ಮತ್ತು ಕ್ರಮ ಬೇಕಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.‌

ಸಂಸದರು, ಶಾಸಕರು ಮತ್ತು ಸಚಿವರು ಈ ಬಗ್ಗೆ ಗಮನ ಹರಿಸಿ ಕ್ರಮ ಜರುಗಿಸಬೇಕು. ಸಿಗ್ನಲ್ ನ್ನೇ ಅಳವಡಿಸಬೇಕೆಂಬ ಆಗ್ರಹವಿಲ್ಲ. ಏನಾದರೂ ಸಿಬ್ಬಂದಿಯನ್ನ ನೇಮಿಸಬೇಕು, ಬ್ಯಾರಿಕೇಡ್ ನಿರ್ಮಿಸಬೇಕು ಎಂದು‌ ನಜೀರ್ ಅಹ್ಮದ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ-https://suddilive.in/archives/8888

Related Articles

Leave a Reply

Your email address will not be published. Required fields are marked *

Back to top button