ಸ್ಥಳೀಯ ಸುದ್ದಿಗಳು

ಇಂದು 6 ಜನರಲ್ಲಿ ಕೆಎಫ್ ಡಿ ಪ್ರಕರಣ ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಮಂಗನ ಕಾಯಿಲೆ ಕುರಿತಂತೆ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ಜಿಲ್ಲೆಯಲ್ಲಿ  ಕೆಎಫ್ ಡಿ ಒಬ್ಬರಿಗೆ ಪಾಸಿಟಿವ್ ಕಾಣಿಸಿಕೊಡಿದೆ. ಜೊತೆಗೆ ಪಕ್ಜದ ಜಿಲ್ಲೆಯ ಕೊಪ್ಪ ತಾಲೂಜಿನಲ್ಲಿ ಐದು ಜನರಿಗೆ ಕೆಎಫ್ ಡಿ ಪಾಸಿಟಿವ್ ಕಂಡು ಬಂದಿದೆ ಎಂದು ಬುಲಿಟಿನ್ ತಿಳಿಸಿದೆ.

ಆದರೆ 11 ಜಿಲ್ಲೆಯಲ್ಲಿ ಈ ಕೆಎಫ್ ಡಿಯ ಪರಿಣಾಮಗಳು ಬೀರಲಿದ್ದು,  11ರಲ್ಲಿ ಇವತ್ತು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ  ಪಾಸಿಟಿವ್ ಕಾಣಿಸಿಕೊಂಡಿದೆ.  ಮತ್ತು ಶಿರಸಿ ಜಿಲ್ಲೆಯಲ್ಲಿ ಒಂದು ಪ್ರಕರಣ ಕಾಣಿಸಿಕೊಂಡಿಲ್ಲ ಎಂದು ಬುಲಿಟಿನ್ ತಿಳಿಸಿದೆ.

ಇಂದು 145 ಜನರಲ್ಲಿ ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 124 ಜನ ಶಿವಮೊಗ್ಗದ ಜಿಲ್ಲೆಯವರನ್ನ ಪರೀಕ್ಷೆಗೆ ಒಳಪಡಿಸಲಾಗಿದ್ದು ಓರ್ವರಿಗೆ   ಸೋಂಕು ಪತ್ತೆಯಾಗಿದೆ. ಶಿರಸಿ ಜಿಲ್ಲೆಯಲ್ಲಿ 04 ಜನರಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ಪಾಸಿಟಿವ್ ಯಾರಿಗೂ ಬಂದಿಲ್ಲ ಎಂದು ಪ್ರಕಟಿಸಿದೆ.  ಚಿಕ್ಕಮಗಳೂರಿನ 12 ಜನರಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಐವರಿಗೆ ಸೋಕು ತಗುಲಿದೆ ಎಂದು ಬುಲಿಟಿನ್ ತಿಳಿಸಿದೆ.

ಜನವರಿ 1, 2024 ರಿಂದ ಇವತ್ತಿನ ವರೆಗೆ 3157 ಜನರನ್ನ ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದೆ. 76 ಜನರಲ್ಲಿ ಸೋಂಕು ಪತ್ತೆಯಾಗಿದೆ. 53 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರಲ್ಲಿ ಎರಡು ಸಾವಾಗಿದೆ. ಒಟ್ಟು 21 ಜನರಲ್ಲಿ ಸೋಂಕು  ಆಕ್ಟಿವ್ ಆಗಿದೆ.

ಇದನ್ನೂ ಓದಿ-https://suddilive.in/archives/8794

Related Articles

Leave a Reply

Your email address will not be published. Required fields are marked *

Back to top button