ರಾಜಕೀಯ ಸುದ್ದಿಗಳು

ಈಶ್ವರಪ್ಪನವರ ವಿರುದ್ಧ ಎಫ್ಐಆರ್ ದಾಖಲು-ಸಂವಿಧಾನ ಗೆದ್ದಿದೆ ಎಂದ್ರು ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ಈಶ್ವರಪ್ಪ ವಿರುದ್ಧ ಕೇಸ್ ದಾಖಲಾಗಿರುವುದು ಬಹಳ ಸಂತೋಷದ ವಿಚಾರ. ದೇಶದಲ್ಲಿ ಕಾನೂನಿದೆ ಎಂಬುದು ಸಾಬೀತಾಗಿದೆ ಎಂದು ಸಚಿವ ಮಧು ಬಂಗಾರಪ್ಪ ವಿವರಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ,  ರಾಜ್ಯದಲ್ಲಿ ಕಾನೂನು ಇದೆ ಎಂಬುದು ನಮ್ಮ ಸರ್ಕಾರ ತೋರಿಸಿದೆ. ಯಾರು ಯಾರು ಈ ತರ ಮಾತನಾಡುತ್ತಾರೆ ಅವರ ಮೇಲೆ ‌ಮುಂದೆ ಇದೇ ರೀತಿ ಕೇಸ್ ದಾಖಲಾಗಬೇಕು ಎಂದು ಹೇಳಿದರು.

ಕಾನೂನು ವಿರುದ್ಧವಾಗಿ ಮಾತಾನಾಡಿದ್ರೆ ಅಂತವರ ವಿರುದ್ಧ ಕೇಸ್ ದಾಖಲಾಗಬೇಕು. ಕಾನೂನು ಯಾರು ಪಾಲಿಸುವುದಿಲ್ಲ ಅವರ ಮೇಲೆ ಕೇಸ್ ಹಾಕಬೇಕು. ಅಂಬೇಡ್ಕರ್ ಸಂವಿಧಾನ ಕೊಟ್ಟಿರೋದು ಈ ತರಹ ಹೇಳಿಕೆ ನೀಡೋಕೆ ಅಲ್ಲ. ಸಮಾಜದಲ್ಲಿ ಅಸಹ್ಯ ತರಹದ ರೀತಿಯಲ್ಲಿ ಮಾತಾನಾಡಿದ್ರೆ, ಅದನ್ನ ನಾವು ಖಂಡಿಸುತ್ತೇವೆ ಎಂದು ಗುಡುಗಿದರು.

ಚಕ್ರವರ್ತಿ ಸೂಲಿಬೆಲೆ ಅವರು ಇದೆ ಕೆಲಸ‌ ಮಾಡಿರೋದು. ಸರ್ವ ಜನಾಂಗದ ಶಾಂತಿಯ ತೋಟ ಎಲ್ಲಿದೆ ಎಂಬುದನ್ನ ನೋಡಿದ್ರೆ ನಮ್ಮ ರಾಗಿಗುಡ್ಡದಲ್ಲಿದೆ.‌ ಶಿವಮೊಗ್ಗದ ರಾಗಿಗುಡ್ಡದಲ್ಲಿ ಇದೆ. ರಾಗಿಗುಡ್ಡದಲ್ಲಿ ಬಿಜೆಪಿಯವರು ಶಾಂತಿ ಕದಡುವ ಕೆಲಸ‌ ಮಾಡಿದ್ರು. ನಮ್ಮ ದೇಶದಲ್ಲಿ ಕಾನೂನು ಗೆಲ್ಲಬೇಕು. ನಾವು ಅಧಿಕಾರದಲ್ಲಿ ಇಲ್ಲದಾಗ ನಾವು ಈ ತರಹ ಕೊಟ್ಟಿದ್ವಾ ಎಂದು ಪ್ರಶ್ನಿಸಿದರು.

ಆಗ ನಮ್ಮ ಮೇಲೆ ಕೇಸ್ ಮಾಡಬೇಕಿತ್ತು. ಅಧಿಕಾರ ಕೆಲವು ಸಲ ಇರುತ್ತದೆ, ಕೆಲವು ಸಲ ಅಧಿಕಾರ ಇರೋಲ್ಲ. ಕಾನೂನು ಗೆಲ್ಲಬೇಕು, ಅದು ಈಗ ಗೆದ್ದಿದೆ. ಕೇಂದ್ರದಿಂದ ತೆರಿಗೆ ಹಂಚಿಕೆ ವಿಚಾರದಲ್ಲಿ ಜನರ ಟ್ಯಾಕ್ಸ್ ಹಣ ಕೇಳ್ತಾ ಇರೋದು. ಈ ರಾಜ್ಯದಲ್ಲಿ ಗೆದ್ದು ಅಧಿಕಾರ ನಡೆಸುತ್ತಿರುವವರು ನಿರ್ಮಲಾ ಸೀತಾರಾಮನ್, ಮೊದಲು ರಾಜ್ಯಕ್ಕೆ ಸುಳ್ಳು ಹೇಳ್ತಾ ಇರೋರು ಹಣಕಾಸು ಸಚಿವರು. ಲೆಕ್ಕ ಕೊಡೋಕೆ ಹೇಳಿ ಎಂದರು.

ಗ್ಯಾರಂಟಿ ಕೊಟ್ಟು ನಾವು ಮಾತು ಉಳಿಸಿಕೊಂಡಿದ್ದೀವಿ. ಬಿಜೆಪಿಯವರಿಗೆ ಹೊಟ್ಟೆ ಕಿಚ್ಚು. ಧಮ್ ತಾಕತ್ ಇದ್ರೆ ಬಂಗಾರಪ್ಪ ಕೊಟ್ಟ ಯೋಜನೆ‌ ನಿಲ್ಲಿಸಬೇಕಿತ್ತು. ಈಶ್ವರಪ್ಪ ವಿರುದ್ಧ ಕಿಡಿಕಾರಿದ ಮಧುಬಂಗಾರಪ್ಪ, ಗುಂಡೇಟು ಬೇಕಾ, ಇವು ಬೇಕಾ? ಸಾಮಾಜಿಕ ಜಾಲದಲ್ಲಿ ಇವೆಲ್ಲಾ ಬೇಕಾ? ಡಿ.ಕೆ.ಸುರೇಶ್ ಹೇಳಿಕೆಯನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಿ. ದೇಶ ಹೊಡೆಯೋದು ಅಂತಾ ಹೇಳಿಲ್ಲ. ಜನರ ಕೂಗನ್ನ ಡಿ.ಕೆ.ಸುರೇಶ್ ಹೇಳಿದ್ದಾರೆ ಎಂದು ತಿಳಿಸಿದರು.

ಜನರ ಮೇಲೆ ಕೇಸ್ ಹಾಕಲಿ ನೋಡೋಣ. ನಾನು ಅವರ ಹೇಳಿಕೆಯನ್ನ ಸಮರ್ಥನೆ ಮಾಡಿಕೊಳ್ಳೋಲ್ಲ. ಸುರೇಶ್ ಮೇಲೆ ಕೇಸ್ ಹಾಕಲಿ, ಕಾನೂನು ಇದೆ ಅವರ ಮೇಲೆ ಕೇಸ್ ಹಾಕಲಿ. ಕಾನೂನು ನೋಡಿಕೊಳ್ಳುತ್ತೆ. ಪುತ್ತಿಲ, ಕಟೀಲ್ ಇವರೆಲ್ಲಾ ಏನು ಮಾಡಿದ್ದು? ಇವರೆಲ್ಲಾ ಬೆಂಕಿ ಹಚ್ಚೋ ಕೆಲಸ ಮಾಡ್ತಾರೆ. ಸಾಮಾಜಿಕ ಜಾಲತಾಣ ಮಿಸ್ ಯೂಸ್ ಮಾಡಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಎಂದು ಗುಡುಗಿದರು.

ಬ್ಯುಸಿನೆಸ್ ಮಾಡಿ ಅಧಿಕಾರಕ್ಕೆ ಬಂದವರು ಬಿಜೆಪಿಯವರು. ಜೀವನದಲ್ಲಿ ಒಂದು ಬಾರಿಯೂ 113 ಮೇಲೆ ಬಂದಿಲ್ಲ. ಸ್ವಂತ ಶಕ್ತಿ ಮೇಲೆ 113 ಸೀಟು ಮೇಲೆ ಬಂದಿಲ್ಲ. ಈಶ್ವರಪ್ಪ ನವರು ಕಾನೂನಾತ್ಮಕ ಹೋರಾಡುತ್ತೇವೆ ಎಂದು ನಮ್ಮ ನಿಮ್ಮ‌ ಮುಂದೆ ಹೇಳಿದ್ರೆ ಆಗೋಲ್ಲ. ಕೋರ್ಟ್ ಮುಂದೆ ಹೇಳಬೇಕು, ಕೋರ್ಟ್ ನಲ್ಲಿ ಉತ್ತರ ಕೊಡಲಿ.

ಸರಿ ಇತ್ತು ಅಂದ್ರೆ ಕೋರ್ಟ್ ತೀರ್ಮಾನ ಕೈಗೊಳ್ಳುತ್ತದೆ. ರಾಜ್ಯ, ದೇಶದಲ್ಲಿ, ಕಾನೊನು ಉಳಿಯಬೇಕು. ಸಂವಿಧಾನ, ಕಾನೂನಿನಲ್ಲಿ ಉಸಿರಾಡಬೇಕು. ನಾವು ಹುಟ್ಟುವ ಮೊದಲೇ ದೇಶ ಇತ್ತು, ಸ್ವಾತಂತ್ರ್ಯ ಬಂದಿತ್ತು, ಸಂವಿಧಾನ ಇತ್ತು. ನಾವು ಹುಟ್ಟಿದ ಮೇಲೆ ಭಗವದ್ಗೀತಾ, ಕುರಾನ್, ಬೈಬಲ್ ಬಂದಿದ್ದು. ನಾವು ಹುಟ್ಟುವ‌ ಮುಂಚೆಯೇ ದೇಶ ಇತ್ತು. ಪ್ರಶ್ನೆ ಕೇಳುವ ಅಧಿಕಾರ ಕೊಟ್ಟಿದ್ದು ಅಂಬೇಡ್ಕರ್.

ಉತ್ತರ ಕೊಡುವ ಅಧಿಕಾರ ಕೊಟ್ಟಿದ್ದು ಅಂಬೇಡ್ಕರ್ ಸಂವಿಧಾನ. ನಮಗೆ ದೇವರ ಸಮನಾಗಿದ್ದು ಅಂಬೇಡ್ಕರ್ ಕೊಟ್ಟ ಸಂವಿಧಾನ. ಶ್ವೇತಪತ್ರ ಯಾಕೆ ಕೊಡಬೇಕು. ಮೊದಲು ಕೇಂದ್ರದವರು ಎಷ್ಟು ಅನುದಾನ ಕೊಟ್ಟಿದ್ದೇವೆ ಎಂದು ಹೇಳಬೇಕು. ಆಮೇಲೆ ನಾವು ಶ್ವೇತಪತ್ರ ಹೊರಡಿಸುತ್ತೇವೆ. ಅವರು ನಮಗೆ ಎಷ್ಟು ಕೊಟ್ಟಿದ್ದಾರೆ ಹೇಳಿದ್ರೆ. 5 ನಿಮಿಷದಲ್ಲಿ ಶ್ವೇತಪತ್ರ ಹೊರಡಿಸುತ್ತೇವೆ ಎಂದು ಶ್ವೇತ ಪತ್ರ ಕೊಡುವ ಬಗ್ಗೆ ತಿಪ್ಪೇಸಾರಿದರು.

ಡಿ.ಕೆ.ಸುರೇಶ್ ಈಶ್ವರಪ್ಪ ಮನೆಗೆ ಬರುತ್ತೇನೆ ಎಂಬ ಹೇಳಿಕೆ ವಿಚಾರದ ಕುರಿತು ಮಾತನಡಿದ ಸಚಿವ ಮಧು ಬಂಗಾರಪ್ಪ,  ಈಶ್ವರಪ್ಪಗೆ ಧೈರ್ಯ ಇಲ್ಲ. ಅದು ಹೇಳಿಕೆಗೆ ಮಾತ್ರ ಸೀಮಿತ. ಎದೆಗಾರಿಕೆ ತೋರಿಸುವಂತಹ ಸುರೇಶ್ ಅಂತವರು ಈ ದೇಶದಲ್ಲಿ ನಮ್ಮ ರಾಜ್ಯದಲ್ಲಿದ್ದಾರೆ. ಅವರಿಗೆ ಆ ಕ್ಷೇತ್ರದ ಜನ ಆಶೀರ್ವಾದ ಮಾಡಲಿ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದರು.

ಇದನ್ನೂ ಓದಿ-https://suddilive.in/archives/8787

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373