ಉದ್ಯೋಗ ಸುದ್ದಿಗಳು

ಜಂಬರ ಕಟ್ಟೆಯಲ್ಲಿ ಶಾಂತಿ ಸಭೆ

ಸುದ್ದಿಲೈವ್/ಹೊಳೆಹೊನ್ನೂರು

ಖಬರಸ್ಥಾನದ ಜಾಗದಲ್ಲಿದ್ದ ಮರ ಕಡಿದ ವಿಚಾರಕ್ಕೆ ನಡೆದಿದ್ದ ಎರಡು ಕೋಮಿನ ನಡುವೆ ಗಲಾಟೆ ವಿಚಾರವಾಗಿ ಇಂದು ಎರಡು ಸಮುದಾಯದ ಮುಖಂಡರೊಂದಿಗೆ ಪೊಲೀಸ್ ಇಲಾಖೆ ಸಭೆ ನಡೆಸಿದೆ.

ಎರಡು ಸಮುದಾಯದ ಮುಖಂಡರೊಂದಿಗೆ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಜಂಬರಘಟ್ಟದಲ್ಲಿ ಇದೆ ತಿಂಗಳು 5 ರಂದು ಮರದ ತುಂಡಿನ ಸಂಬಂಧ ಎರಡು ಕೋಮಿನ ನಡುವೆ ಗಲಾಟೆ ನಡೆದಿತ್ತು.

ಖಬರಸ್ತಾನದಲ್ಲಿದ್ದ ಮರವನ್ನು ಹಿಂದು ಯುವಕ ಕಡಿದಿದ್ದನು ಎಂಬ ಆರೋಪದ‌ ಅಡಿ ಯುವಕರನ್ನು ತಡೆದು ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ. ಗಲಾಟೆ ನಂತರ ಹೊಳೆಹೊನ್ನೂರು ಪೊಲೀಸ್ ಠಾಣೆ ಎದುರು ಸೇರಿ ಕ್ರಮ ಕೈಗೊಳ್ಳುವಂತೆ ನೂರಾರು ಜನ ಆಗ್ರಹಿಸಿದ್ದರು.

ಗಲಾಟೆ ಪ್ರಕರಣದಲ್ಲಿ ಐದು ಜನರ ವಿರುದ್ಧ ದಾಖಲಾಗಿತ್ತು. ಗಲಾಟೆ ನಂತರ ಜಂಬರಘಟ್ಟ ಗ್ರಾಮದಲ್ಲಿ ಶಾಂತಿ ನೆಲೆಸಲು  ಪೊಲೀಸ್ ಇಲಾಖೆ ಮುಂದಾಗಿದೆ. ಶಾಂತಿ ಸುವ್ಯವಸ್ಥೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಸಾರ್ವಜನಿಕರ ಅಹವಾಲು ಸ್ವೀಕರಿಸಿದ್ದಾರೆ.

ಇದೇ ಈದ್ ಮೆರವಣಿಗೆಯ ವಿಚಾರದಲ್ಲಿ ರಾಗಿಗುಡ್ಡದಲ್ಲಿ ಮನೆಗಳ ಮೇಲೆ ಕಲ್ಲು ತೂರಲಾಗಿತ್ತು. ಈ ವೇಳೆ ಪೊಲೀಸರು ರಾಗಿಗುಡ್ಡದಲ್ಲಿ ಗಣರಾಜ್ಯೋತ್ಸವದ ಕ್ರಿಕೆಟ್ ಕಪ್ ಆಡಿಸಿದ್ದರು. ಅದೇ ರೀತಿಯ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆಯಾ ಅಥವಾ ಇಲ್ಲವಾ ಎಂಬುದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/8782

Related Articles

Leave a Reply

Your email address will not be published. Required fields are marked *

Back to top button