ಸ್ಥಳೀಯ ಸುದ್ದಿಗಳು

ನೈರುತ್ಯ ಪದವೀಧರಕ್ಕೆ ಕಾಂಗ್ರೆಸ್ ನ ಆಯನೂರು ಮಂಜುನಾಥ್, ಶಿಕ್ಷಕರ ಕ್ಷೇತ್ರಕ್ಕೆ ಕೆಕೆ ಮಂಜುನಾಥ್

ಸದ್ದಿಲೈವ್/ಶಿವಮೊಗ್ಗ

ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊಡಗು ಜಿಲ್ಲೆಯ ಕೆಕೆ ಮಂಜುನಾಧ್ ಆಯ್ಕೆಯಾಗಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು 17 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. 120 ಮತಗಳಿಂದ ಸೋತಿದ್ದೆ. ಶಿಕ್ಷಕರಿಗೆ ಆಘಾತಕಾರಿಯಾದ ವಿಷಯ ಎಂದರೆ ನ್ಯೂ ಪೆನ್ಷನ್ ಸ್ಕೀಂ ರದ್ದಾಗಬೇಕಿದೆ ಎಂದರು.

ನಿಶ್ಚಿತ ಪಿಂಚಣಿ ಯೋಜನೆ ಜಾರಿಯಾಗಬೇಕಿದೆ. ಇಲಾಖೆ ಪುಕ್ಕಟೆಯಾಗಿ ಕೊಡುವ ಯೋಜನೆ ಇದಲ್ಲ. ಅದು ಶಿಕ್ಷಕರ ಸೇವೆಯ ಹಿನ್ನಲೆಯಲ್ಲಿ ನೀಡಬೇಕಿದೆ ಎಂದರು.

ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿ ಸರ್ಕಾರ 2006 ರಲ್ಲಿ ಹಳೆ ಪಂಚಣಿ ಯೋಜನೆಯನ್ನ ರದ್ದು ಮಾಡಿ ಹೊಸ ಪೆನ್ಷನ್ ಸ್ಕೀಮ್ ನ್ನ ಜಾರಿಗೊಳಿಸಿತು. ಆದರೆ ಧರ್ಮಸಿಂಗ್ ಸರ್ಕಾರ ಎಂದು ಗೊಂದಲ ಹುಟ್ಟಿಸಲಾಗಿದೆ. ವಾಜಪೇಯಿ ಸರ್ಕಾರ ಕೇಂದ್ರದಲ್ಲಿದ್ದಾಗ ಶಿಕ್ಷಕರಿಗೆ ಒಪಿಎಸ್ ರದ್ದುಪಡಿಸಿತು. ಇದನ್ನ ರಾಜ್ಯದಲ್ಲಿ ರದ್ದುಮಾಡಬೇಕು ಎಂಬ ನಿಯಮವಿಲ್ಲ. ಆದರೆ ಅದನ್ನ‌ ಬಿಎಸ್ ವೈ ಅವರ ಮೈತ್ರಿ ಸರ್ಕಾರ ಇಲ್ಲೂ ಜಾರಿಗೊಳಿಸಿತು.

2012 ರಲ್ಲಿ ನಾನು ಸ್ಪರ್ಧಿಸಿ 120 ಮತಗಳ ಅಂತರದಿಂದ ಸೋತಿದ್ದೇನೆ. ಎನ್ ಪಿಎಸ್ ರದ್ದು ಗೊಳಿಸ ಬೇಕು ಎನ್ನುವ ಶಿಕ್ಷಕರು ಪುನಃ ಎನ್ ಪಿಎಸ್ ಯೋಜನೆ ಜಾರಿಗೊಳಿಸುವ ಅಭ್ಯರ್ಥಿಯನ್ನ ಗೆಲ್ಲಿಸುತ್ತ ಬರಲಾಗಿದೆ. ಮತ ಹಾಕುವ ಶಿಕ್ಷಕರು ಯೋಚಿಸಬೇಕಿದೆ ಎಂದರು.

ಅವೈಜ್ಞಾನಿಕ ವ್ಯವಸ್ಥೆ ಸರಿಪಡಿಸಲು ಶಿಕ್ಷಕರೇ ಆಯ್ಕೆ ಮಾಡಬೇಕಿದೆ. ನಿರಂತರವಾಗಿ ಯಾರಿಗೆ ಮುಂಬಡ್ತಿ ಪಡೆಯುತ್ತಾರೋ ಅವರಿಗೆ ನ್ಯಾಯಕೊಡಿಸಬೇಕಿದೆ. ಸರ್ಕಾರಿ ಅನುದಾನಿತ ಶಾಲೆಯ ಶಿಕ್ಷಕರ ಸ್ಥಿತಿ ಬೇರೆಯಾಗಿದೆ. ಅನುದಾನಿತ ರಹಿತರಿಗೆ ವಿಮೆ, ಉಚಿತ ಆರೋಗ್ಯ ತಪಾಸಣೆಗೆ ಅವಕಾಶಕೊಡಬೇಕಿದೆ. ಮೂರನೇ ಭಾರಿಗೆ ಸ್ಪರ್ಧಿಸುತ್ತಿದ್ದೇನೆ. ಎದುರಾಳಿಗೆ ಮತ ಹಾಕದೆ ಪಾಠ ಕಲಿಸುವ ರೂಪದಲ್ಲಿ ನನ್ನನ್ನ ಗೆಲ್ಲಿಸಿ ಎಂದು ಕೋರಿದರು.

ಕಾಂಗ್ರೆಸ್ ನ ಪ್ರನಾಳಿಕೆಯಲ್ಲಿ ಎನ್ ಪಿಎಸ್ ರದ್ದು ಒಪಿಎಸ್ ಜಾರಿ ಕುರಿತು ಬರೆಯಲಾಗಿದೆ. ಎನ್ ಪಿಎಸ್ ರದ್ದು ಮಾಡಿದ್ರೆ 10 ಸಾವಿರ ಕೋಟಿ ಸರ್ಕಾರಕ್ಕೆ ಹಣ ಬರುತ್ತೆ ಒಪಿಎಸ್ ಜಾರಿ ಮಾಡುದ್ರೆ 8 ಸಾವಿರ ಕೊಟಿ ಹಣ ಹೊರೆಯಾದರೂ ಸರ್ಕಾರಕ್ಕೆ 2 ಸಾವಿರ ಕೋಟಿ ಉಳಿಯುತ್ತಿದೆ. ಫೈನಾನ್ಷಿಯಲ್ ನ 75% ಲೆಕ್ಕಾಚಾರ ಮುಗಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನ ಹೆಚ್ ಸಿ ಯೋಗೀಶ್, ಶಿವಕುಮಾರ್ ಕಲೀಂ ಪಾಶ, ಗಿರೀಶ್, ವಿಶ್ವನಾಥ್ ಕಾಶಿ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button