ಶಿವಮೊಗ್ಗ: ಭಾರತೀಯ ನೃತ್ಯಗಾರ್ತಿ ವೈಜಯಂತಿ ಕಾಶಿ ಹೇಳಿಕೆ

ಸುದ್ದಿಲೈವ್/ಶಿವಮೊಗ್ಗ

ಉತ್ಸವಗಳಿಂದ ಜನರ ಉತ್ಸಾಹ ಹೆಚ್ಚಾಗುತ್ತವೆ. ಉತ್ಸಾಹವನ್ನು ಹೆಚ್ಚಿಸಿಕೊಂಡು ಹಬ್ಬಗಳನ್ನು ಸಡಗರ ಸಂಭ್ರಮದಿಂದ ಬರಮಾಡಿಕೊಂಡು ಆಚರಿಸಬೇಕು ಎಂದು ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ವೈಜಯಂತಿ ಕಾಶಿ ತಿಳಿಸಿದರು.
ನಗರದ ಕೋಟೆ ರಸ್ತೆಯಲ್ಲಿರುವ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾದ 10 ದಿನಗಳಕಾಲದ ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಕತ್ತಲೆ ದೂರ ಮಾಡಲು ನವರಾತ್ರಿಸ ಸಂದರ್ಭದಲ್ಲಿ ತಲಾ ಮೂರು ದಿನ ಸರಸ್ವತಿ, ಲಕ್ಷ್ಮೀ ಮತ್ತು ದುರ್ಗೆಯರ ಪೂಜೆ ಮಾಡಲಾಗುತ್ತಿದೆ.ಈ ದೇವತೆಗಳನ್ನು ಪ್ರಾರ್ಥಿಸಿ ವಿಶೇಷವಾಗಿ ಪೂಜಿಸುವ ಮೂಲಕ ನಾಡಹಬವನ್ನು ಭವ್ಯವಾಗಿ ಸ್ವಾಗತಿಸೋಣವೆಂದು ತಿಳಿಸಿದರು.
ವಿಶೇಷವಾಗಿ ದುರ್ಗಾದೇವಿ ಆರಾಧಿಸುವುದರಿಂದ ಮನುಷ್ಯನ ಶಕ್ತಿ ಇಮ್ಮಡಿಗೊಳ್ಳಲಿದೆ. ಪೂಜೆ-ಪುನಸ್ಕಾರಗಳಿಂದ ಮನಃಶಾಂತಿ ಜತೆಗೆ ಅಪಾರ ಶಕ್ತಿಯು ವೃದ್ಧಿಸುತ್ತದೆ. ಈ ಹಬ್ಬದ ಮೂಲಕ ನಮ್ಮಲ್ಲಿರುವ ಋಣಾತ್ಮಕ ಶಕ್ತಿಯನ್ನ ಕಳೆದುಕೊಳ್ಳೋಣ ಎಂದು ಕರೆ ನೀಡಿದರು.
ಹಾಗಾಗಿ ದಸರಾ ಸಂದರ್ಭದಲ್ಲಿ ಸಮಾಜದ ಉದ್ಧಾರಕ್ಕಾಗಿ ನವರಾತ್ರಿಯೂ ದೇವಿಯರ ಆರಾಧಿಸಬೇಕಾಗುತ್ತದೆ.
ಜೀವನದಲ್ಲಿ ಕಲಿಕೆ ಮುಖ್ಯ. ಕಲಿಕೆಯು ಮನುಷ್ಯರಲ್ಲಿರುವ ಜೀವನ ಶೈಲಿಯನ್ನು ಬದಲಿಸುತ್ತವೆ.
ಚಿನ್ನಾಭರಣ, ಹಣ ನಿಜವಾದ ಸಂಪತ್ತು ಅಲ್ಲ. ನಿಸರ್ಗ ಎಂಬುದು ನಿಜವಾದ ಸಂಪತ್ತು. ಈ ನಿಸರ್ಗಕ್ಕೆ ಸರಿಸಾಟಿ ಎಂಬುದು ಯಾವುದೂ ಇಲ್ಲ ಎಂದು ಹೇಳಿದರು. ಕಾರ್ಯಕ್ರಮಕ್ಕೂ ಮೊದಲು ದೇವಾಲಯದ ಆವರಣದಲ್ಲಿ ದೇವಿಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು, ಭಾಗಿಯಾಗಿದ್ದವು. ಶಾಸಕ ಚನ್ಬಬಸಪ್ಪ ಮತ್ತು ಪಾಲಿಕೆ ಸದಸ್ಯರು ಕುಣಿದು ಕುಪ್ಪಳಿಸಿದರು.
ಇದನ್ಬೂ ಓದಿ-https://suddilive.in/archives/1288
