ಸ್ಥಳೀಯ ಸುದ್ದಿಗಳು

ಕೆಎಫ್ ಡಿಗೆ ಅಗತ್ಯ ಕ್ರಮ ಕೈಗೊಳ್ಳಲು ಸಭೆ ಸೂಚನೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಫ್ ಡಿ ವೈರಸ್ ಕುರಿತು. ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಸಭೆಯಲ್ಲಿ ಕೆಎಫ್ ಡಿ ಕಾಯಿಲೆ ವಿರುದ್ಧ ಅಗತ್ಯ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಮೊದಲಿಗೆ ಸಭೆಗೆ ಮಾಹಿತಿ ನೀಡಿದ ಆರೋಗ್ಯಾಧಿಕಾರಿ ಡಾ.ಸುರೇಶ್ ಸುರಗೀಹಳ್ಳಿ ಮೊದಲಿಗೆ ಕೇಫ್ ಡಿ ಕೀಟ ಮೊಟ್ಟೆಯಾಗಿ ಹುಟ್ಟುತ್ತೆ.  ಲಾರ್ವ, ನಿಂಫ್, ಆಗಿ ನಂತರ  ಟಿಕ್ಸ್ ಆಗುತ್ತೆ.  ಟಿಕ್ಸ್ ನಂತರ ಅಡಲ್ಟ್ ಆಗುತ್ತೆ. ನಂತರ ಸಾಯತ್ತೆ. ಇದುವರೆಗೂ ಜಿಲ್ಲೆಯಲ್ಲಿ 411 ಟಿಕ್ಸ್ ಸಂಗ್ರಹಿಸಲಾಗಿದೆ ಎಂದರು.

ಹಾಗಾದರೆ ಕಳೆದ 60 ವರ್ಷದಿಂದ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲವೇಕೆ? ಬೇರೆಕಡೆ ಯಾಕೆ ಬರುತ್ತಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಹೆಚ್ ಒ ಗೋವ ಮಹರಾಷ್ಟ್ರದಲ್ಲಿಯೂ ಇದೆ. 10 ಜಿಲ್ಲೆಯಲ್ಲಿ ಕೆಎಫ್ ಡಿ ‌ಪರಿಣಾಮವಿದೆ. ಇದು ಸ್ಪೋಟಗೊಳ್ಳಲು ವಾತಾವರಣವೂ ಇದಕ್ಕೆ ಉತ್ತಮವಾಗಬೇಕು. ಮಂಗಗಳ ಅಸ್ವಾಭಾವಿಕ‌ಸಾವು ಈ ಕಾಯಿಲೆಗೆ ಎಚ್ಚರಿಕೆಯ ಗಂಟೆ  ಎಂದರು.

ಮಂಗ ಸತ್ತ ಮರುದಿನ ಒಂದು ದಿನಕ್ಕೆ ಈ ಕೀಟ 4 km jump ಆಗುತ್ತೆ. ಮಂಗ ಸತ್ತ ಜಾಗ ಹಾಟ್ ಸ್ಪಾಟ್ ಆಗುತ್ತದೆ. ಜಿಲ್ಲೆಯಲ್ಲಿ ಇದುವರೆಗೂ 204 ಮಂಗ ಸಾವಾಗಿದೆ. ಒಂದು ಪಾಸಿಟಿವ್ ಇದೆ ಉಳಿದ ಎಲ್ಲಾ ಮಂಗಗಳಿಗೆ ಕೆಎಫ್ ಡಿ ನೆಗೆಟಿವ್ ಇದೆ.  ಆಯಿಲ್ ಹಚ್ಚಿಕೊಂಡು ಜನ ಕಾಡಿಗೆ ಹೋಗಬೇಕು ಎಂದರು. ಇದಕ್ಕೆ ಮಧ್ಯ ಪ್ರವೇಶಿಸಿದ ಮಾಜಿ ಸಚಿವ ಆರಗ ಜ್ಞಾನೇಂದ್ರ ವ್ಯಾಕ್ಸಿನ್  ಬಂದ್ ಮಾಡಿದ್ಯಾಕೆ ಎಂದು ಪ್ರಶ್ನಿಸಿದರು.  ವ್ಯಾಕ್ಸನ್ ಮಾಡಿದ್ರು ತೊಂದರೆ ಆಗ್ತಾ ಇತ್ತು. ಮಾರ್ಚ್ ಎಪ್ರಿಲ್ ನಲ್ಲಿ ಏನಾಗಲಿದೆ ಭಯವಿದೆ ಎಂದರು.

ತೀರ್ಥಹಳ್ಳಿಯ ವ್ಯಕ್ತಿಗೆ ಸೀವಿಯರ್ ಹೆಡೆಕ್ ಇದೆ. ಆತನನ್ನ ಮಣಿಪಾಲ್ ಗೆ ದಾಖಲಿಸಲಾಗಿದೆ ಎಂದರು. ಅದಲ್ಕೆ ಉತ್ತರಿಸಿದ ಡಿಹೆಚ್ ಒ ನಾವೇ ಮಣಿಪಾಲ್ ಗೆ ಶಿಫಾರಸು ಮಾಡಲಾಗಿದೆ. ಅವರಿಗೆ ಅಯುಷ್ ಮಾನ್ ಭಾರತ್ ನಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. 2019 ರಲ್ಲಿ ಅರಳಗೋಡಿನಲ್ಲಿ ಕೆಎಫ್ ಡಿ ಸ್ಪೋಟಗೊಂಡಿತ್ತು. ಆದರೆ 2020 ರಲ್ಲಿ ಟಿಕ್ಸ್  ಔಟ್ ಬ್ರೇಕ್ ಆಗಲೇ ಇಲ್ಲ . ಒಮ್ಮೆ ಔಟ್ ಬ್ರೇಕ್ ಆದರೆ ಮತ್ತೆ ಐದು ವರ್ಷ ಸಮಯಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆ ಬೇಕು. ಜಾನವಾರುಗಳಿಗೂ ಟಿಕ್ಸ್ ತಗುಲುವುದರಿಂದ ವಾಕ್ಸಿನ್ ಬೇಕಾಗಿದೆ ಎಂದರು.

ಕೋವಿಡ್ ಗಿಂತ ಕೆಎಫ್ ಡಿ ಅಪಾಯಕಾರಿಯಾಗಿದೆ. ಹೆಬ್ಬಾಳದಲ್ಲಿ ವ್ಯಾಕ್ಸಿನ್ ತಯಾರಿಕೆ ಇದೆ. ಹೈದ್ರಾಬಾದ್ ನವರಿಗೆ ಟೆಂಡರ್ ಆಗಿದೆ ಎಂದ ಡಿಹೆಚ್ ಒಗೆ ಸಚಿವ ಮಧು ಬಂಗಾರಪ್ಪ ಕೆಎಫ್ ಡಿ ಖಾಯಂ ಆಗಿ ತಡೆಯಲು ಏನು ಕ್ರಮವಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಾಜಿ ಸಚಿವ ಆರಗ ಜ್ಞಾನೇಂದ್ರ, ಬೆಂಗಳೂರಿನ ಆರೋಗ್ಯ ಅಧಿಕಾರಿಗಳಿಗೆ ಶಿವಮೊಗ್ಗದಲ್ಲಿ ಕಾಣಿಸಿಕೊಳ್ಳುವ ಕಾಯಿಲೆ ಬಗ್ಗೆ  ಸೀರಿಯಸ್ ನೆಸ್ ಇಲ್ಲ. ಹೊಸನಗರದ ಯುವತಿ ಸಾವಾದಳು. ಅವರ ಮನೆಗೆ ಹೋಗಲು ಆಗಲಿಲ್ಲ. ವ್ಯಾಕ್ಸಿನ್ ಕೊಟ್ಟರೂ ವ್ಯಾಕ್ಸಿನ್ ನ ಕಾರ್ಯಾಚರಣೆ ಆರಂಭವಾಗಲು ನಾಲ್ಕು ತಿಂಗಳು ಸಮಯಬೇಕು ಎಂದು ಬೇಸರ‌ವ್ಯಕ್ತಪಡಿಸಿದರು.

ಇದಕ್ಕೆ ಉತ್ತರ ನೀಡಿದ ಫೆ.13 ಅಥವಾ ಬೆಂಗಳೂರಿಗೆ ಬಂದು ಅಧಿಕಾರಿಗಳ ಸಭೆ ನಡೆಸಿ. ನಂತರ ಸಭೆಗೆ ಸಚಿವರು ನಾನು ಮಾಜಿ ಗೃಹ ಸಚಿವರು ಭಾಗಿಯಾಗಲಿದ್ದೇವೆ. ಖಾಯಂ ಪರಿಹಾರಕ್ಕೆ ಚರ್ಚಿಸೋಣ ಎಂದು  ಹೇಳಿದರು. ಡಿಹೆಚ್ ಒ ಮಾತನಾಡಿ, ಜಿಲ್ಲೆಯಲ್ಲಿ ಕೆಎಫ್ ಡಿ ಗೆ ಭಯದ ವಾತಾವರಣವಿದೆ. ನಾಳೆ ಕೆಎಫ್ ಡಿ ಕುರಿತಂತೆ ಉಡುಪಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಡೆಯಲಿದೆ.  ಸಭೆ ನಡೆಯಲಿದೆ. ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆ ಡಿಹೆಚ್ ಒ ಸಭೆ ನಡೆಯಲಿದೆ ಎಂದರು.

ಸಭೆಯ ಮಧ್ಯೆಯೆ ಸಚಿವ ಮಧು ಬಂಗಾರಪ್ಪ ಆರೋಗ್ಯ ಸಚಿವರಿಗೆ ಪೋನಾಯಿಸಿ ಮಾತನಾಡಿಸಿದರು. ಸಭೆಯಲ್ಲಿ  ಸೀರಿಯಸ್ ಆಕ್ಟಿವ್ ಆಗಬೇಕು. ಆಶಾ ವರ್ಕರ್ ಗಳು ಮನೆಗೆ ತೆರಳಿ ಜಾಗೃತಿ ಮಾಡಲು ಡಿಸಿ ಸೂಚನೆ ನೀಡಿದರು. ಟೆಲಿ ಮೆಡಿಕಲ್ ಆರಂಭಿಸಲಾಗುತ್ತಿದೆ ಎಂದು ಡಿಹೆಚ್ ಒ ಸ್ಪಷ್ಟನೆ ನೀಡಿದರು.

ಮೊಬೈಲ್ ವ್ಯಾನ್ ಆರಂಭಿಸಲು ಸೂಚನೆ‌ನೀಡಲಾಯಿತು. ಆಶಾ ವರ್ಕರ್ ನ್ನ ಜನರ ಬಳಿ ಹೆಚ್ಚಿಗೆ ಇದ್ದು ಮಾಹಿತಿ ಪಡೆಯಲು ಸೂಚನೆ ನೀಡಲಾಯಿತು. 24 ಗಂಟೆ ಆಸ್ಪತ್ರೆಯ ಹಾಸಿಗೆ ಸಿದ್ದತೆ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ. ಉಚಿತ ಚಿಕಿತ್ಸೆ ಕೊಡಿಸಲು ಸೂಚನೆ ನೀಡಲಾಯಿತು. ಟಿಕ್ ಸಾಯಿಸಲು ಇಂಜೆಕ್ಷನ್ ನ್ನ ಜಾನುವಾರುಗಳಿಗೆ ನೀಡಲು ಸೂಚಿಸಲಾಯಿತು.

ಸೋಮವಾರದ ಒಳಗೆ ಹೆಲ್ಪ್ಬಲೈನ್  ಆರಂಭಿಸಲು ಸೂಚಿಸಲಾಯಿತು ಮತ್ತು ಎಚ್ಚರಿಕೆಯ ಕರಪತ್ರ ರಚಿಸಿ ಬಸ್ ನಿಲ್ದಾಣ ಗ್ರಾಪಂ ಅಥವಾ ಜನ ಸಂದಣೆಯಲ್ಲಿ ಹಚ್ಚಲು ಸೂಚನೆ ನೀಡಲಾಯಿತು. ಪ್ರವಾಸೋದ್ಯಮದ ಜಾಗದಲ್ಲಿ ಕೇಫ್ ಡಿಯ ಬಗ್ಗೆ ಎಚ್ಚರಿಕೆಯ ಮಾಹಿತಿ ನೀಡುವ ಕುರಿತು ಸೂಚಿಸಲಾಯಿತು. ಆದರೆ ಮಾಜಿ ಸಚಿವ ಆರಗ‌ ಜ್ಞಾನೇಂದ್ರ ಶಾಲೆಯಲ್ಲಿ ಮಂಗನ ಕಾಯಿಲೆ ಬಗ್ಗೆ ಮಾಹಿತಿ ನೀಡಲು ಸಭೆಗೆ  ಮನವಿ ಮಾಡಿದರು.

ಸಾಗರ ತೀರ್ಥಹಳ್ಳಿಯಲ್ಲಿ ಮೊಬೈಲ್ ಆಸ್ಪತ್ರೆಗೆ ಒತ್ತು ನೀಡುವಂತೆ ಕೋರಿದರು. ಎರಡು ತಿಂಗಳು ಯದ್ದೋಪಾಯದಲ್ಲಿ ಕೆಲಸ ಮಾಡಲು ಸೂಚನೆ ನೀಡಲಾಯಿತು. ಆಶಾಕಾರ್ಯಕರ್ತರಿಗೆ ಕೆಎಫ್ ಡಿ ಬಾದಿತ ಪ್ರದೇಶದವರಿಗೆ ಜಿಲ್ಲಾಡಳಿತದಿಂದ ಹೆಚ್ಚಿಬ‌ಗೌರವ ಧನ ನೀಡಲು ತೀರ್ಮಾನಿಸಲಾಯಿತು.

ಇದನ್ನೂ ಓದಿ-https://suddilive.in/archives/8733

Related Articles

Leave a Reply

Your email address will not be published. Required fields are marked *

Back to top button