ರಾಜಕೀಯ ಸುದ್ದಿಗಳು

ಮುಫ್ತಿ ಸಲ್ಮಾನ್ ಅಜ್ಹರಿ ಬಂಧನ-ಶಿವಮೊಗ್ಗದಲ್ಲಿ ಪ್ರತಿಭಟನೆ

ಸುದ್ದಿಲೈವ್ ಶಿವಮೊಗ್ಗ

ಗುಜರಾತ್ ನಲ್ಲಿ ಭಾರತದ ಮುಸ್ಲೀಂ ಧಾರ್ಮಿಕ‌ಗುರುಗಳಾದ ಮುಫ್ತಿ ಸಲ್ಮಾನ್ ಅಜ್ಹರಿ ಅವರನ್ನ ಗುಜರಾತ್ ನಲ್ಲಿ ಬಂಧಿಸಿರುವುದನ್ನ ಖಂಡಿಸಿ ಇಂದು ಶಿವಮೊಗ್ಗದ ಮರ್ಕಜ್ ಸುನ್ನಿ ಜಾಮೀಯಾ ಮಸ್ಜಿದ್ ಜಿಲ್ಲಾಧಿಕಾರಿಗಳ ಕಚೇರಿಯ ಎದುರಿನ ಮೈದಾನದಲ್ಲಿ ಪ್ರತಿಭಟಿಸಲಾಯಿತು.

ತಮ್ಮ ವಿಚಾರವನ್ನ ಗಝಲಿನ ರೂಪದಲ್ಲಿ ಮಂಡಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನ ಸರ್ಕಾರ ಹಾಳು ಮಾಡಿದೆ. ಇದೇ ರೀತಿ ಮುಸ್ಲೀಂ ಧಾರ್ಮಿಕ ಗುರುಳಾದ ಹಜರತ್ ಖಮರ್ ಉಸ್ಮಾನಿ ಅವರನ್ನ 7 ತಿಂಗಳ ಹಿಂದೆ ಬಂಧಿಸಲಾಗಿತ್ತು.

ಮುಸ್ಲೀಂ ಜನಾಂಗದವರಿಗೆ ಬೇರೆಯವರಿಗೆ ಸ್ಥಳಗಳಲ್ಲಿ ಮಸೀದಿ ಕಟ್ಟಲು ಅವಕಾಶವಿಲ್ಲ. ಆದರೂ ಕೋಮು ಶಕ್ತಿಗಳು ಬಹುಸಂಖ್ಯಾತ ಮತಗಳ ದೃವೀಕರಣಕ್ಕೆ ಬಾಬರಿ ಮಸೀದಿ ಧ್ವಂಸದ ನಂತರ ಜ್ಞಾನವ್ಯಾಪಿ ಮಸೀದಿಯ ಪ್ರಕರಣವನ್ನ ಮುನ್ಬೆಲೆಗೆ ತಂದು ಧರ್ಮ ನಿರಪೇಕ್ಷಿತ ಮತ್ತು ಬಹುತ್ವಕ್ಕೆ ದಕ್ಕೆ ತರಲಾಗುತ್ತಿದೆ.

ದೇಶದಲ್ಲಿ ಇದರಿಂದ ಅಭದ್ರತೆ ಕಾಡುತ್ತಿದೆ. ಪ್ರೊಡಕ್ಷನ್ಸ್ಆಫ್ ಓಲ್ಡ್ ಮಾನ್ಯುಮೆಂಟ್ಸ್ ಆಕ್ಟ್ 1991 ಅಧಿನಿಯಮವನ್ನ ಕಟ್ಟುನಿಟ್ಟಾಗಿ ಜಾರಿಗೆ ತರುವುದರಿಂದ ಇಂತಹ ಘಟನೆಗಳು ಜರುಗದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಸುನ್ನಿ ಜಮೋಯಾ ಮಸ್ಜೀದ್ ನ ಅಧ್ಯಕ್ಷ ಮುನಾವರ್ ಪಾಶ, ಸೋನಾ ಗ್ರೂಪ್ ನ ಇಕ್ಬಾಲ್ ಸೇಟ್, ಮುಫ್ತಿ ಆಕಿಲ್ ರಜಾಕ್, ಗುರುಗಳಾದ ಖಾಜಿ ಅಶ್ರಫ್ ಸಾಬ್, ಸತ್ತಾರ್ ಬೇಗ್ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button