ಕ್ರೈಂ ನ್ಯೂಸ್

Ksrtc ಬಸ್ ನಿಲ್ದಾಣದಲ್ಲಿ ಕೈಚಳಕ ತೋರಿ ಸಿಕ್ಕಿ ಬಿದ್ದಿದ್ದ ಮಹಿಳೆ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಸುದ್ದಿಲೈವ್/ಶಿವಮೊಗ್ಗ

ಬಸ್ ಸ್ಟ್ಯಾಂಡ್ ನಲ್ಲಿ ಕದ್ದ ಚಿನ್ನಾಭರವಣನ್ನ ಫೈನಾನ್ಸ್ ನಲ್ಲಿ ಅಡ ಇಟ್ಟು ಸಾಲ ಪಡೆದಿದ್ದ ಮಹಿಳೆಯ ವಿರುದ್ಧ ತುಂಗ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.  ಬಸ್ ನಲ್ಲಿ ಪ್ರಯಾಣಿಸುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್ ನಿಂದ 22 ಗ್ರಾಂ ಚಿನ್ನಾಭರಣವನ್ನ ಕದ್ದಿದ್ದ ಪ್ರಕರಣದಲ್ಲಿ ಮಹಿಳೆ ಅರೆಸ್ಟ್ ಆಗಿದ್ದಳು ಆ ಪ್ರಕರಣ ಮತ್ತೊಂದು ತಿರುವು ಪಡೆದಿದೆ.

ಪ್ರಭು ಎನ್ನುವರು, ದಸರಾ ರಜೆ ಪ್ರಯುಕ್ತ ತನ್ನ ಹೆಂಡತಿ ಮಕ್ಕಳನ್ನು ದಾವಣಗೆರೆಗೆ ಕಳುಹಿಸಲು ದಿನಾಂಕ: 15-10-2023 ರಂದು ಸಂಜೆ 04-15 ಗಂಟೆಗೆ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಗೆ ಬಂದು ಪ್ಲಾಟ್ ಪಾರಂ ನಂ-08 ರಲ್ಲಿ ದಾವಣಗೆರೆ ಕಡೆ ಹೋಗುವ  ಬಸ್ ಹತ್ತುವಾಗ ಜನ ಹೆಚ್ಚಿನ ಜನಸಂದಣಿ ಇದ್ದುದ್ದರಿಂದ ಪತಿ ಬಸ್ ಹತ್ತಿ ಸೀಟ್ ಹಿಡಿದು ಹೆಂಡತಿ ಮಕ್ಕಳನ್ನು ಬಸ್ ಹತ್ತಿಸಿ ದಾವಣಗೆರೆಗೆ ಕಳುಹಿಸಿಕೊಟ್ಟಿದ್ದರು,

ನಂತರ ಪ್ರತ್ನಿ ಪ್ರಭುಗೆ  ಪೋನ್ ಮಾಡಿ ನ್ಯೂಮಂಡ್ಲಿ ಸರ್ಕಲ್ ಬೈಪಾಸ್ ರಸ್ತೆಯಲ್ಲಿ ಬಸ್ಸಿನಲ್ಲಿ ಹೋಗುವಾಗ ವ್ಯಾನಿಟಿ ಬ್ಯಾಗ್‌ ನ್ನು ಚೆಕ್ ಮಾಡಿದಾಗ ವ್ಯಾನಿಟಿ ಬ್ಯಾಗ್ ನಲ್ಲಿಟ್ಟಿದ್ದ ಸುಮಾರು 01,13,000/-ರೂ ಬೆಲೆಬಾಳುವ 22 ಗ್ರಾಂ ತೂಕದ ಒಂದು ಬಂಗಾರದ ನೆಕ್ಸಸ್, ಮತ್ತು 1 ಗ್ರಾಂ ತೂಕದ ಒಂದು ಜೊತೆ ಬಂಗಾರದ ಜುಮಕಿ ಕಳುವಾಗಿದ್ದನ್ನ ತಿಳಿಸಿದ್ದರು.

ಬಸ್ ಹತ್ತುವ ಸಮಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವ  ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು. ದೊಡ್ಡಪೇಟೆ ಪೊಲೀಸರು ಮಂಜುನಾಥ ಬಡಾವಣೆ ನಿವಾಸಿಯಾಗಿರುವ ತಾಹೀರಾ ರೋಹಿ ಕೊಂ ತಾಹೀರ್ ಅಹಮ್ಮದ್ (30) ರವರನ್ನ‌ ಬಂಧಿಸಿ  01,29,300/-ರೂ ಬೆಲೆಬಾಳುವ 22 ಗ್ರಾಂ ತೂಕದ ಒಂದು ಬಂಗಾರದ ನೆಕ್ಸಸ್, ಮತ್ತು ಒಂದು ಜೊತೆ ಬಂಗಾರದ ಜುಮಕಿ 11 ಗ್ರಾಂ ತೂಕದ ತೂಕದ ಬಂಗಾರದ ಒಡವೆಗಳನ್ನು ವಶಕ್ಕೆ ಪಡೆದಿದ್ದರು.

ತಾಹೀರ್ ರೋಹಿ ಗೋಪಾಳದ ಮುತ್ತೂಟ್ ಫೈನಾನ್ಸ್ ನಲ್ಲಿ 2023 ಅಕ್ಟೋಬರ್ 16 ರಂದು ಅಡವಿಟ್ಟು ವರ್ಷಕ್ಕೆ 24% ಗೆ 1,29,300 ರೂ. ಹಣ ಸಾಲ ಪಡೆದಿದ್ದಳು. ಯಾವಾಗ ಕಳ್ಳತನದ ಪ್ರಕರಣ ಬೇಧಿಸಿದ್ದ ದೊಡ್ಡಪೇಟೆ ಪೊಲೀಸರು ಮುತ್ತೂಟು ಫೈನಾನ್ಸ್ ಗೆ ತೆರಳಿ ತಾಹೀರ್ ಅಡವಿಟ್ಟಿದ್ದ ಚಿನ್ನಾಭರವನ್ನ ವಶಕ್ಕೆ ಪಡೆದಿದ್ದರು. ಈಗ ಫೈನಾನ್ಸ್ ನ‌ ಮ್ಯಾನೇಜರ್ ಸಂಜಯ್ ಎಂಬುವರು ತುಂಗ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/8510

Related Articles

Leave a Reply

Your email address will not be published. Required fields are marked *

Back to top button