ರಾಜ್ಯ ಸುದ್ದಿಗಳು

ಕೆಎಫ್ ಡಿಯಿಂದ ಒಂದು ಸಾವು ಸಂಭವಿಸದಂತೆ ಕಟ್ಟೆಚ್ಚರ ವಹಿಸಲು ಸೂಚನೆ

ಸುದ್ದಿಲೈವ್/ಶಿವಮೊಗ್ಗ

ಕೆಎಫ್ ಡಿ ವಿಚಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿರುದ್ಧ ಕೂಗು ಕೇಳಿ ಬಂದ ಬೆನ್ನಲ್ಲೇ  ನಗರದ ಡಿಹೆಚ್ ಒ ಸಭಾಂಗಣದಲ್ಲಿ ಕೆಎಫ್ ಡಿ ಸೋಂಕಿತ ಮೂರು ಜಿಲ್ಲೆಗಳ ಡಿಹೆಚ್ ಒರವರ ಸಭೆ ನಡೆದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಇಲಾಖೆಯ ಆಯುಕ್ತ ಡಾ.ಡಿ.ರಣದೀಪ್ ನೇತೃತ್ವದಲ್ಲಿ ಸಭೆ ನಡೆದಿದೆ.

ಮೂರು ಜಿಲ್ಲೆಯಲ್ಲಿ ಈ ವರ್ಷ 49 ಕೆಎಫ್ ಡಿ ಪ್ರಕರಣ ದಾಖಲಾಗಿವೆ.  ಉ.ಕದಲ್ಲಿ ಅತಿಹೆಚ್ಚು ಸೋಂಕಿತರು ಪತ್ತೆಯಾಗಿದೆ. 34 ಜನರು ಸ್ಪೋಟಗೊಂಡಿದ್ದು ಶಿವಮೊಗ್ಗ ಜಿಲ್ಲೆ12 ಜನರಲ್ಲಿ ಪತ್ತೆಯಾಗಿದ್ದು ಒಂದು ಸಾವಾಗಿದೆ. ಚಿಕ್ಕಮಗಳೂರು 3 ಕೆಎಫ್ ಡಿ ಪತ್ತೆಯಾಗಿದೆ. ಒಂದು ಸಾವಾಗಿದೆ 2200 ಕ್ಕೂ ಹೆಚ್ಚು ಜನರಲ್ಲಿ ಶಿವಮೊಗ್ಗ ಶಿರಸಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರೀಕ್ಷೆಯಾಗಿದೆ.

ಈ ಕುರಿತು ಸಭೆಯಲ್ಲಿ ತಿಳಿಸಿದ ಆಯುಕ್ತರು, ಕೋವಿಡ್ ರೀತಿಯಲ್ಲಿ ಕೆಎಫ್ ಡಿ ಕಾಯಿಲೆಯ ರೋಗಿಯನ್ನ ಅಬ್ಸರ್ವೇಷನ್ ಮಾಡುವಂತೆ ಸೂಚಿಸಿದ್ದಾರೆ. ಮತ್ತು ರೋಗಿ ಸಾಯುವುದರಿಂದ ಬಜಾವ್ ಮಾಡುವುದೇ ಸಭೆಯ ಉದ್ದೇಶವಾಗಿದೆ ಎಂದು ಆಯುಕ್ತರು ತಿಳಿಸಿದರು.

ಕೆಸ್ ಎಂಎಸ್ ನಿಂದ DEPA ಎಂಬ ಆಯಿಲ್ ಹಚ್ಚಿಕೊಳ್ಳಲು ಸೂಚನೆ ನೀಡಲಾಗಿದೆ. ಇದಕ್ಕೆ ಎಬಿಆರ್ ಕೆ, ಮೆಡಿಕಲ್ ಫಂಡ್ ಮತ್ತು ಜಿಪಂ ಫಂಡ್ ಬಳಸಿಕೊಂಡು ಆಯಿಲ್ ನ್ನ ಆರೋಗ್ಯ ಇಲಾಖೆ ಖರೀದಿಸಲು ಸೂಚಿಸಲಾಯಿತು. 6 ತಿಂಗಳ ವರೆಗೆ ಬೇಕಾಗಿರುವ ಸ್ಟಾಕ್ ಇಟ್ಟುಕೊಳ್ಳಲು ಸೂಚಿಸಲಾಗಿದೆ.  ಐಇಸಿ ಗೈಡ್ ಲೈನ್ ಫಾಲೋ ಮಾಡಲು ಸೂಚನೆ ನೆಗೆಟಿವ್ ಸುದ್ದಿ ಹರಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ವಿಡಿಎಲ್ ಲ್ಯಾಬ್ ಗೆ ಅನುದಾನ‌ನಿಡುವ ಭರವಸೆ, ಸಣ್ಣ ಪುಟ್ಟ ಬೇಕಾಗಿರುವ ವಿಷಯಗಳನ್ನ ಪೂರೈಸುವುದಾಗಿ ತಿಳಿಸಲಾಗಿದೆ.  ಸಿದ್ದಾಪುರದಲ್ಲಿ 30 ಪಾಸಿಟಿವ್ ಕಂಡು ಬಂದಿದೆ. ಶಿವಮೊಗ್ಗದಲ್ಲಿ ರೋಗ ಲಕ್ಷಣ  ಇಲ್ಲವೆಂದರೂ ಮಂಗನ ಕಾಯಿಲೆ ಕಂಡು ಬಂದಿರುವ ಉದಾಹರಣೆ ಇದೆ ಎಂದು ಡಿಹೆಚ್ ಒ ಡಾ.ಸುರಗೀಹಳ್ಳಿಯವರು ಸಭೆಗೆ ತಿಳಿಸಿದ್ದಾರೆ.

ಪ್ರತಿ ಐದು ವರ್ಷಕ್ಕೊಮ್ಮೆ ಈ ಕಾಯಿಲೆ ಉಲ್ಬಣಗೊಳ್ಳುತ್ತದೆ.  ಪ್ರಕರಣಗಳು ಏರಿಕೆಯಾಗುತ್ತದೆ. 2019 ರಲ್ಲಿ ಅರಳಗೋಡಿನಲ್ಲಿ ಕಾಯಿಲೆ ಉಲ್ಬಣವಾಗಿತ್ತು. 245 ಪಕ್ರಕರಣ ಪತ್ತೆಯಾಗಿತ್ತು. 13 ಸಾವಾಗಿತ್ತು. ಆದರೆ ಈಗ ಸಿದ್ದಾಪುರದಲ್ಲಿ ಕೆಎಫ್ ಡಿ ಉಲ್ಬಣವಾಗಿದೆ.

ಚಿಕ್ಕಮಗಳೂರಿನಲ್ಲಿ ಬೆಡ್ ರಿಡನ್ ಆಗಿದ್ದವರಿಗೆ ಹಿಸ್ಟರಿ ಇಲ್ಲವಾದರೂ ವೃದ್ಧ ಮಹಿಳೆ ಸಾವುಕಂಡಿದ್ದಾರೆ. ಎಬಿಆರ್ ಕೆ (ಆಯುಷ್ ಮಾನ್ ಭಾರತ್) ಯೋಜನೆಯ ಅಡಿ ಯಲ್ಲಿ ಕೆಎಫ್ ಡಿ ಕಾಯಿಲೆಗೆ ಚಿಕಿತ್ಸೆ ನೀಡಲು ಸೂಚನೆ‌ ನೀಡಲಾಯಿತು. ಮಣಿಪಾಲ್ ಮತ್ತು ಫಾರ್ಮುಲ್ಲರ್ಸ್ ನಲ್ಲಿ ಎಬಿಆರ್ಕೆ ಅಡಿಯಲ್ಲಿ ಆಸ್ಪತ್ರೆಯ ಖರ್ಚು ಭರಿಸಲು ಆಯುಕ್ತರು ಸಭೆಗೆ ಸೂಚನೆ ನೀಡಿದರು.

ಟೆಲಿ ಐಸಿಯು ಮಾನಿಟರಿಂಗ್ ರೀತಿ ರೋಗಿಗೆ ಕಣ್ಗಾವಲಿನಲ್ಲಿಟ್ಟು ನೋಡಲು ಸೋಚನೆ ನೀಡಲಾಯಿತು.  ಕೋವಿಡ್ ರೀತಿಯಲ್ಲಿ ಕೆಲಸ ಮಾಡಲು ಮೂರು ಜಿಲ್ಲೆಯವರಿಗೆ ಸೂಚನೆ ನೀಡಲಾಯಿತು. ಸಾವನ್ನ ತಪ್ಪಿಸಲು ಎಲ್ಲಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಯಿತು.

ಇಲಾಖೆಯ ನಿರ್ದೇಶಕರಾದ ಡಾ.ಪುಷ್ಪಲತಾ,  ಕೇಫ್ ಡಿ ಮೇಲುಸ್ತುವಾರಿ ತ್ರಿವೇಣಿ ಕಣ್ಗಾವಲು ಘಟಕ ಡಾ.ಪದ್ಮಾ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/8373

Related Articles

Leave a Reply

Your email address will not be published. Required fields are marked *

Back to top button