ರಾಜಕೀಯ ಸುದ್ದಿಗಳು

ಸಂಸದರ ಕೊಡುಗೆ ಶೂನ್ಯ.-ಆಯನೂರು

ಸುದ್ದಿಲೈವ್/ಶಿವಮೊಗ್ಗ

ರಸ್ತೆ ಅಭಿವೃದ್ಧಿ ಕೇಂದ್ರ ಸರ್ಕಾರದ ಯೋಜನೆಯದ್ದಾಗಿದೆ. ವಿಮಾನ ನಿಲ್ದಾಣ ನಿರ್ಮಾಣವಾಗಿದೆ ನಿಜ ಆದರೆ ಶಿವಮೊಗ್ಗದಲ್ಲಿ ಎಷ್ಟು ಕೈಗಾರಿಕೆಗೆ ಅನುಕೂಲವಾಗಿದೆ. ಕಾರ್ಮಿಕರ ವಿರೋಧಿ ಕಾನೂನು ಜಾರಿಯಾದಾಗ ಮಾತನಾಡದ ಸಂಸದರು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕೊಟ್ಟಕೊಡುಗೆ ಶೂನ್ಯವೆಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಡವರ ದೀನ ದಲಿತರ ಅಭಿವೃದ್ಧಿಗೆ ಏನು ಮಾಡುದ್ರಿ, ತಾವು ಬಡವರ, ಹಿಂದುಳಿದವರ ದೇವಸ್ಥಾದ ಅಭಿವೃದ್ಧಿಗೆ ಎನು ಮಾಡುದ್ರಿ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ನಾವು ಜೈ ಶ್ರೀರಾಮ್ ಎಂದು ಘೋಷಿಸಲು ನಮಗೆ ಹಿಂಜರಿಕೆ ಇಲ್ಲ. ಆದರೆ ಸಂಧರ್ಭಕ್ಕೆ ತಕ್ಕಂತೆ ಘೋಷಣೆ ನಮ್ಮದು. ಅವರಂತೆ ಕಂಡಕಂಡಲ್ಲಿ ಘೋಷಣೆ ಕೂಗೊಲ್ಲ ಎಂದರು.

ರಾಮಮಂದಿರ ನಿರ್ಮಾಣಕ್ಕೆ ಜನ ನೀಡಿದ ಇಟ್ಟಿಗೆ ಎಲ್ಲಿ? ಹಾಗೂ ಕಾಣಿಕೆ ಎಲ್ಲಿ ಹೋಯಿತು ಎಂದು ಬಿಜೆಪಿ ಸ್ಪಷ್ಟಪಡಿಸಿ ಎಂದು ಆರೋಪಿಸಿರುವ ಆಯನೂರು ಮಂಜುನಾಥ್, ಶ್ರೀರಾಮನನ್ನ‌ನೆನೆಯುವ ಬಿಜೆಪಿಯ ಸಂಸದರು ಶ್ರೀರಾಮನ ಆದರ್ಶವನ್ನ ಮೈಗೂಡಿಸಿಕೊಂಡಿದ್ದೀರ ? ತಂದೆಯ ನಿರ್ದೇಶನದಂತೆ ರಾಮ ಕಾಡಿಗೆ ಹೋದ ಆದರೆ ನಿಮ್ಮಗಳ ರಾಜಕೀಯ ಲಲಾಸೆಗಾಗಿ ಸಂಸದರ ತಂದೆ ಕಾಡಿಗೆ ಹೋದರು ಎಂದು ದೂರಿದರು.

ಬರಗಾಲದ ಅನುದಾನಕೊಟ್ಟು ಮತವನ್ನ ಸಂಸದರು ಕೇಳಬೇಕು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಮಾತನಾಡೋದನ್ನ ಬಿಡಬೇಕು. ಈಶ್ವರಪ್ಪನವರ ಪ್ರಶ್ನೆಗೆ ಉತ್ತರಕೊಡಿ. ಈಶ್ವರಪ್ಪನವರನ್ನ ಉಚ್ಚಾಟಿಸಲು ಬಿಜೆಪಿ ನಾಯಕರಿಗೆ ಭಯವಿದೆ. ಅವರನ್ನ ಉಚ್ಚಾಟಿಸಿ ನೀಡಿ ಎಂದು ಸವಾಲು ಎಸೆದರು.

ನಾನು ಹಾಕಿರುವ ನಾಲ್ಕು ಪ್ರಶ್ನೆಗೆ ಮೊದಲು ಬಿಜೆಪಿ ನಾಯಕರು ಉತ್ತರಿಸಲಿ ನಂತರ ಈಶ್ವರಪ್ಪನವರ ಪ್ರಶ್ನಿಸಿ ಎಂದರು. ಈಶ್ವರಪ್ಪನವರು ನಾಮಪತ್ರ ಸಲ್ಲಿಕೆಗೆ 25 ಸಾವಿರ ಜನ ಸೇರಿಸುವುದಾಗಿ ಹೇಳಿದ್ದ ಅವರು ಅನುಮತಿ ಪಡೆದಿದ್ದು 10 ಸಾವಿರ ಜನರನ್ನ. ಹಾಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತರನ್ನ ಡಮ್ಮಿ ಎಂದಿರುವ ಅವರೇ ಡಮ್ಮಿಯಾಗಿ ಕಾಣಿಸುತ್ತಿದ್ದಾರೆ. ನಮ್ಮ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾರಿಗೂ ಸಂಶಯ ಬೇಡ ಎಂದರು.

ಬಿಜೆಪಿಗೆ ಈಶ್ವರಪ್ಪನವರ ಬಗ್ಗೆ ಹೆದರಿಕೆ ಇದೆ. ಹಾಗಾಗಿ ಅವರನ್ನ ಪಕ್ಷಕ್ಕೆ ತಂದು ಎಂಎಲ್ ಸಿ ಕಂ ವಿಪಕ್ಷ ನಾಯಕರನ್ನಾಗಿ ಮಾಡುವ ನಿರೀಕ್ಷೆ ಇದೆ. ಸಣ್ಣಸ್ಥಾನಕ್ಕೆ ಹೋರಾಡುತ್ತಿದ್ದಾರೆ. ಅವರು‌ನಾಮಪತ್ರ ಹಿಂಪಡೆಯುವ ತನಕ ಅವರ ಸ್ಪರ್ಧೆ ಅನುಮಾನವಿದೆ.‌ ಅವರ ಸ್ಪರ್ಧೆ ಖಚಿತವಾದರೆ ನನ್ನ ಮತ ಅವರಿಗೆ ಎಂದರು.

Related Articles

Leave a Reply

Your email address will not be published. Required fields are marked *

Back to top button