ಸ್ಥಳೀಯ ಸುದ್ದಿಗಳು

ಪಶ್ಚಿಮ ಬಂಗಾಲಕ್ಕೆ ಭರ್ಜರಿ ಗೆಲವು

ಸುದ್ದಿಲೈವ್/ಶಿವಮೊಗ್ಗ

ಮೂರು ದಿನಗಳಿಂದ  ನಗರ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 67 ನೇ ರಾಷ್ಟ್ರೀಯ 19 ವರ್ಷದೊಳಗಿನ ವಾಲಿಬಾಲ್ ಪಂದ್ಯಾವಳಿ ರೋಚಕವಾಗಿ ಫೈನಲ್ ಪಂದ್ಯಾವಳಿ ನಡೆಯುತ್ತಿದೆ.

ಮಹಾರಾಷ್ಟ್ರ ತಂಡವನ್ನ ಸೋಲಿಸಿ
ವೆಸ್ಟ್ ಬೆಂಗಾಲ್ ಫೈನಲ್ ಪ್ರವೇಶಿಸಿದರೆ, ಕೇರಳವನ್ನ ಸೋಲಿಸಿದ ಗುಜರಾತ್ ಅಂತಿಮ ಪಂದ್ಯಾವಳಿಯನ್ನ‌ ಪ್ರವೇಶಿಸಿದೆ. ಆರಂಭದಲ್ಲಿ ವೆಸ್ಟ್ ಬೆಂಗಾಲ್ ಡಾಮಿನೇಟಿಂಗ್ ಆಟವನ್ನ ಆಡುವ ಮೂಲಕ ಗುಜರಾತ್ ಗೆ ಶಾಕ್ ನೀಡಿದೆ.

ಮೊದಲನೇ ಸುತ್ತಿನಲ್ಲಿ 25 ಅಂಕವನ್ನ ಪ.ಬಂಗಾಲ ಪಡೆದರೆ, ಗುಜರಾತ್ 14 ಅಂಕ ಪಡೆದಿದೆ. ಪ.ಬಂಗಾಲ ಉತ್ತಮ ಸ್ಥಿತಿ ತಲುಪಿದರೆ ಗುಜರಾತ್ ಸೋತಿದೆ. ಎರಡನೇ ಸುತ್ತಿನ ಪಂದ್ಯದಲ್ಲಿ ಗುಜರಾತ್ 15 ಅಂಕ ಪಡೆದರೆ ಪ.ಬೆಂಗಾಲ್ 25 ಅಂಕ ಪಡೆದು ಪಂದ್ಯ ತನ್ನದಾಗಿಸಿಕೊಂಡಿತು.

ಮೂರನೇ ಸೆಟ್ ನಲ್ಲಿ ಗುಜರಾತ್ ಪ್ರಬಲವಾಗಿ ಪ್ರತಿರೋಧ ತೋರಿದರೂ ಪ.ಬಂಗಾಲದ ಭರ್ಜರಿ ಪ್ರದರ್ಶನದಿಂದ ಪಂದ್ಯ ತನ್ನದಾಗಿಕೊಂಡಿತು. ಒಂದು ಹಂತದಲ್ಲಿ ಗುಜರಾತ್ ಮೂರನೇ ಸುತ್ತಿನಲ್ಲಿ ಆರೇಳು‌ ಅಂಕದಿಂದ ಮುಂದು ಸಾಗಿದರೂ ಕೊನೆ ಹಂತರದಲ್ಲಿ ಎಡವಿತು. 25-23 ಅಂತರ ದಿಂದ ಪ.ಬಂಗಾಲ ತನ್ನದಾಗಿಸಿಕೊಂಡಿತು.

ಪಶ್ಚಿಮ ಬಂಗಾಲ ತಂಡದ ರಾಜನಂದಿನಿ, ಪಂದ್ಯ ಶ್ರೇಷ್ಠಳಾಗಿದ್ದಾಳೆ. ಇವರ ಸರ್ವ್ ನಲ್ಲಿ ಗುಜರಾತ್ ತಂಡ ಪ್ರತಿರೋಧ ತೋರದಂತೆ ಸೋಲುಣ್ಣಲು ಕಾರಣ ಎಂದು ಹೇಳಬಹುದಾಗಿದೆ. ಕಿಕ್ಕಿರಿದ ಪ್ರೇಕ್ಷಕರು ಗುಜರಾತ್ ತಂಡಕ್ಕೆ ಬೆಂಬಲ ಸೂಚಿಸಿದರು‌ ಪಂದ್ಯಕ್ಕೆ ಗುಜರಾತ್ ತಂಡ ಲಯ ಕಂಡುಕೊಳ್ಳಲು ಆಗಲು ಸಾಧ್ಯವಾಗಲಿಲ್ಲ

ಪ್ರಥಮ ಬಹುಮಾನ 25 ಸಾವಿರನಗದು ಮತ್ತು ಪದಕ ಬಹುಮಾನವನ್ನ‌ ಪ.ಬಂಗಾಲ ತನ್ನದಾಗಿಸಿಕೊಂಡರೆ, ರನ್ನರ್ ಅಪ್ ಆದ ಗುಜರಾತ್‌ 15 ಸಾವಿರ ನಗದು ಮತ್ತು ಪದಕ ಸ್ವೀಕರಿಸಿದೆ. ಕೇರಳ ಮೂರನೇ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ-https://suddilive.in/archives/8191

Related Articles

Leave a Reply

Your email address will not be published. Required fields are marked *

Back to top button