ಕ್ರೈಂ ನ್ಯೂಸ್
ಗೃಹಬಳಕೆ ಗ್ಯಾಸ್ ಬಳಸಿ ರೀಫಿಲ್ಲಿಂಗ್ ಮಾಡುತ್ತಿದ್ದವನ ವಿರುದ್ಧ ದೂರು ದಾಖಲು

ಸುದ್ದಿಲೈವ್/ಶಿವಮೊಗ್ಗ

ಗೃಹಬಳಕೆ ಗ್ಯಾಸ್ ಬಳಸಿಕೊಂಡು ಯಾವುದೇ ಸುರಕ್ಷತೆ ತೆಗೆದುಕೊಳ್ಳದೆ ಕಾನೂನು ಬಾಹಿರವಾಗಿ ಬೇರೆ ಸಿಲಿಂಡರ್ ಗೆ ಗ್ಯಾಸ್ ತುಂಬಿಸುತ್ತಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.
ಕೆ.ಎಸ್ ಆರ್ ಟಿಸಿ ಬಸ್ ನಿಲ್ದಾಣದ ಹಿಂಭಾಗದ ಬುದ್ಧನಗರದಲ್ಲಿ 5 ನೇ ತಿರುವು 2 ನೇಕ್ರಾಸ್ ನಲ್ಲಿ ಇಮ್ರಾನ್ ಎಂಬಾತ ಗೃಹಬಳಕೆ ಸಿಲಿಂಡ್ ನ್ನ ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳದೆ ಬೇರೆ ಸಿಲಿಂಡರ್ ಗೆ ಡಂಪ್ ಮಾಡುತ್ತಿದ್ದಾಗ ಆಹಾರ ಇಲಾಖೆ ಮತ್ತು ದೊಡ್ಡಪೇಟೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಇಮ್ರಾನ್ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/727
